ನಾಗರಕಟ್ಟೆ : ಪಳ್ಳದ ಕೊಟ್ಯ ಶ್ರೀ ಧೂಮಾವತಿ “ದೀಪಾವಳಿ ನೇಮೋತ್ಸವ “ಪೂರ್ವಭಾವಿ ಸಭೆ ನಾಗರಕಟ್ಟೆ ಶ್ರೀ ಶಾರದಾ ಭಜನಾಶ್ರಮ ಸಭಾ ಭವನದಲ್ಲಿ ಸಮಿತಿ ಗೌರವ ಅಧ್ಯಕ್ಷರಾದ ನಿರಂಜನ್ ಕೊರಕ್ಕೊಡು ಅದ್ಯಕ್ಷತೆಯಲ್ಲಿ ನಡೆಯಿತು.
ಕಾಸರಗೋಡು ಕೋಟೆ ಬಾಗಿಲಿನಲ್ಲಿರುವ ಪಳ್ಳದಕೊಟ್ಯ ಶ್ರೀ ಧೂಮಾವತಿ ದೈವ ಕೋಲವು ಪ್ರತಿ ವರ್ಷ ದೀಪಾವಳಿ ಉತ್ಸವ ದಿನದಂದು ವೈಭವ ಪೂರ್ಣವಾಗಿ ಕಾಸರಗೋಡು ಕೋಟೆ ನಾಯಕರ ವಂಶಸ್ತರಿಂದ ಸಮಾಜದ ಹಾಗೂ ಊರವರ ಸಹಕಾರದಿಂದ ಸಂಪ್ರದಾಯದಂತೆ ಭಕ್ತಿ ಪೂರ್ವಕ ನಡೆಸಲು ಎಲ್ಲರೂ ಹೆಚ್ಚಿನ ಪ್ರಮಾಣದಲ್ಲಿ ಸಹಕರಿಸಲು ಸಮಿತಿ ಅಧ್ಯಕ್ಷರಾದ ನವೀನ ನಾಯಕ ಕರೆ ನೀಡಿದರು. ನೇಮೋ ತ್ಸವಕ್ಕೆ ವಿವಿಧ ಉಪ ಸಮಿತಿ ಗಳನ್ನು ನೇಮಿಸಲಾಯಿತು.
ಸಭೆಯಲ್ಲಿ ಉಪಸ್ಥಿತರಿದ್ದ ಕಾರ್ಯದರ್ಶಿ ಮೋಹನ್ ದಾಸ್, ಕೋಶಾಧಿಕಾರಿ ಡಾ. ವಾಮನ ರಾವ್ ಬೇಕಲ್, ದಿನೇಶ ನಾಗರಕಟ್ಟೆ, ಶಶಿಕಾಂತ, ಪ್ರಸಾದ, ಕೇಶವ, ವೈಶಾಖ, ಪುನೀತ, ನಿತಿನ, ಉದಯಕುಮಾರ, ವಿನೋದ ಕುಮಾರ್, ಪ್ರದೀಪ ನಾಯ್ಕ್, ಪ್ರಜ್ವಲ ನಾಯ್ಕ್ ಸಲಹೆ ಸೂಚನೆ ನೀಡಿದರು. ವಾಮನ ರಾವ್ ಬೇಕಲ್ ಸ್ವಾಗತಿಸಿ ಮೋಹನ್ ದಾಸ್ ಕಾರ್ಯಕ್ರಮ ನಿರ್ವಹಿಸಿ, ಭಟ್ಟ ರಾಜ ವಂದಿಸಿದರು.

