Homeಸುದ್ದಿಗಳುತಿಮ್ಮಾಪುರದಲ್ಲಿ ಗಣೇಶ ಹಬ್ಬದ ಪೂರ್ವಭಾವಿ ಸಭೆ

ತಿಮ್ಮಾಪುರದಲ್ಲಿ ಗಣೇಶ ಹಬ್ಬದ ಪೂರ್ವಭಾವಿ ಸಭೆ

ಹುನಗುಂದ :   ಹಿರಿಯ ಪೊಲೀಸ್ ಅಧಿಕಾರಿಗಳು ನೀಡಿದ ಸೂಚನೆಗಳ ಮೇರೆಗೆ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಕ ಗಣೇಶ ಹಬ್ಬದ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮವಾಗಿ ಗ್ರಾಮದ ಸಾರ್ವಜನಿಕರಿಗೆ ಹಾಗೂ ಎಲ್ಲ ಸಮುದಾಯದ ಮುಖಂಡರಿಗೆ ಹಬ್ಬವನ್ನು ಸೌಹಾರ್ದತೆಯ ಮೂಲಕ ಆಚರಿಸುವಂತೆ ಗ್ರಾಮದ ಶ್ರೀ ಮಾರುತೇಶ್ವರ ಹಾಗೂ ಬಸವೇಶ್ವರ ಅವರಣದಲ್ಲಿ ದಿನಾಂಕ 11 ರಂದು ಸೋಮವಾರ ಪೂರ್ವಭಾವಿ ಸಭೆಯಲ್ಲಿ ಹುನಗುಂದ ಪೊಲೀಸ ಠಾಣೆಯ ಹೆಡ್ ಕಾನ್ಸ್ಟೇಬಲ್ ಸಿದ್ದು ಕೌಲಗಿ ಹೇಳಿದರು.

ತಿಳಿವಳಿಕೆ ನೀಡಿ ಮಾತನಾಡಿ ಸನಾತನ ಪರಂಪರೆಯಲ್ಲಿ ಗಣೇಶ ಹಬ್ಬವು ಸ್ವತಂತ್ರ ಪೂರ್ವದಲ್ಲಿ ಜನರನ್ನು ಕೂಡಿಸಲು ಬಾಲ ಗಂಗಾಧರ ತಿಲಕರು ಗಣೇಶನನ್ನು ಪ್ರತಿಷ್ಠಾಪಿಸಿದರು ಆದರೆ ಅಂದು ಸೌಹಾರ್ದತೆಯಿಂದ ಕೂಡಿತ್ತು ಇಂದು ಹಬ್ಬದ ಹೆಸರಿನಲ್ಲಿ ಗಲಭೆಗಳಾಗುತ್ತಿರುವುದು ವಿಷಾದನೀಯ ಸಂಗತಿ ಅಂಥ ಗಲಭೆಗಳಿಗೆ ಅವಕಾಶ ನೀಡದೆ ಸೌಹಾರ್ದತವಾಗಿ ಗಣೇಶ ಹಬ್ಬವನ್ನು ಆಚರಿಸುವಂತೆ ಗ್ರಾಮಸ್ಥರಿಗೆ ತಿಳಿಸಿದರು

ಪೇದೆ ನಾಗರಾಜ ಕುಂದರಗಿ ಹಾಜರಿದ್ದರು ಪೂರ್ವಭಾವಿ ಸಭೆಯಲ್ಲಿ ಶಿವನಗೌಡ ಹನುಮ ಗೌಡ್ರು ಶಂಕರಗೌಡ ರಂಗನಗೌಡ ಶರಣಪ್ಪ ಹೆರಕಲ್ ಸಂಗನಗೌಡ ಕೇರೇಗೌಡರ್ ಗಣೇಶ ಗೌಡ ಹನುಮ ಗೌಡ್ರು ಹನುಮಂತಗೌಡ ಭಗವಂತ ಗೌಡ ರಮೇಶ ಜಬ್ಬಲ್, ನಾಗಪ್ಪ ಭೀಮಪ್ಪ ಅನಗವಾಡಿ ವಿಜಯ ಕುಮಾರ ಹನೂರು ಯಮನಪ್ಪ ಬಡಿಗೇರ ಯಮನಪ್ಪ ಪೂಜಾರಿ ಮಾಂತೇಶ ಕೆಂಚನಗೌಡ ಬಸಪ್ಪ ಬಿಸನಾಳ ಶೇಖಪ್ಪ ಮುದುಕನ ಗೌಡ್ರು ಸಂಗಮೇಶ್ ವಾಲಿಕರ ಇತರರು ಭಾಗವಹಿಸಿದ್ದರು

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group