ಕರ್ಜಗಿ ಅಭಿನಂದನಾ ಸಮಾರಂಭಕ್ಕೆ ಸಕಲ ಸಿದ್ಧತೆ

Must Read

ಸಿಂದಗಿ: ಸುದೀರ್ಘ 28 ವರ್ಷಗಳ ಕಾಲ ಪಟ್ಟಣದ ಆರ್.ಡಿ.ಪಾಟೀಲ ಕಾಲೇಜಿನಲ್ಲಿ 6 ವರ್ಷ ಉಪನ್ಯಾಸಕರಾಗಿ, 22 ವರ್ಷ ಪ್ರಾಚಾರ್ಯರಾಗಿ ಶಿಕ್ಷಣ ಕ್ಷೇತ್ರವನ್ನು ಬೆಳೆಸಿ ಉತ್ತಮ ಸಂಸ್ಥೆ ಕಟ್ಟುವಲ್ಲಿ ಅವಿರತ ಸೇವೆ ಸಲ್ಲಿಸಿದ ಬಿ.ಪಿ.ಕರ್ಜಗಿಯವರ ಅಭಿಮಾನಿಗಳು ಏ.10 ರಂದು 10.30 ಗಂಟೆಗೆ ಅಭಿನಂದನಾ ಸಮಾರಂಭ ಹಾಗೂ ಮದುವೆಯ 50ರ ಸುವರ್ಣ ಮಹೋತ್ಸವ ಮತ್ತು 75 ವರ್ಷದ ಅಮೃತ ಮಹೋತ್ಸವ ಕಾರ್ಯಕ್ರಮದ ಸಕಲ ಸಿದ್ದತೆಗಳಾಗಿವೆ ಎಂದು ಸಂಸ್ಥೆಯ ಚೇರಮನ್ ಸಂತೋಷಕುಮಾರ ಕರ್ಜಗಿ ಹೇಳಿದರು.

ಪಟ್ಟಣದ ಪಿಇಎಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆಯಲಿರುವ ಬಿ.ಪಿ.ಕರ್ಜಗಿ ಅಭಿನಂದನಾ ಸಮಾರಂಭದ ವೇದಿಕೆ ಸಜ್ಜುಗೊಂಡಿರುವುದನ್ನು ವೀಕ್ಷಿಸಿ ಮಾತನಾಡಿ, ಅತಿಥಿಗಳಿಗೆ ಆಸನಗಳ ವ್ಯವಸ್ಥೆ ಹಾಗೂ ಉತ್ತರ ಕರ್ನಾಟಕ ಶೈಲಿಯ ಸಜ್ಜಿರೊಟ್ಟಿ, ಜೋಳದ ರೊಟ್ಟಿ ಉಳ್ಳಾನುಚ್ಚು, ಖಾರಿಹಳ್ಳಿ ಹಿಂಡಿ ಸೇರಿದಂತೆ ವಿವಿಧ ಬಗೆಗಳ ಮೃಷ್ಟಾನ್ನ ಭೋಜನ ತಯಾರುಗೊಂಡಿದೆ ಈ ಎಲ್ಲ ಕಾರ್ಯಕ್ರಮಗಳಿಗೆ ಮಾಜಿ ಸಿಎಂ ಜಗದೀಶ ಶೆಟ್ಟರ, ಶಿಕ್ಷಣ ಸಚಿವರಾದಿಯಾಗಿ ಎಲ್ಲರು ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಈ ಕಾರ್ಯಕ್ರಮದ ಸಾನ್ನಿಧ್ಯವನ್ನು ಡಾ. ಪ್ರಭು ಸಾರಂಗದೇವ ಶಿವಾಚಾರ್ಯರು ವಹಿಸಲಿದ್ದು. ಶಾಸಕ ರಮೇಶ ಭೂಸನೂರ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯಅತಿಥಿಗಳಾಗಿ ಉಪಸಭಾಪತಿ ಯು.ಟಿ.ಖಾದರ, ಮಾಜಿ ಸಿ.ಎಂ.ಜಗದೀಶ ಶೆಟ್ಟರ, ಎಂಎಲ್ಸಿ ಹಣಮಂತ ನಿರಾಣಿ ಸೇರಿದಂತೆ ಹಲವು ಗಣ್ಯಮಾನ್ಯರು ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನೆಹರೂ ಪೋರವಾಲ, ಕೆ.ಎಚ್.ಸೋಮಾಪುರ, ಎಸ್.ಬಿ.ಚಾಗಶೆಟ್ಟಿ, ಪ್ರಾಚಾರ್ಯರಾದ ಕಣ್ಣಿ ಹಾಗೂ ಗೋಡಕರ ಸೇರಿದಂತೆ ಅನೇಕರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group