ಶ್ರೀ ಮಧ್ವನವಮಿ ಅಂಗವಾಗಿ ಸಾಧಕರಿಗೆ ‘ಶ್ರೀಮಧ್ವೇಶಾನುಗ್ರಹ ’ ಪ್ರಶಸ್ತಿ ಪ್ರದಾನ

Must Read

ಬೆಂಗಳೂರು – ಆಚಾರ್ಯ ಪುರುಷರಲ್ಲಿ ಅತ್ಯಂತ ಮಹತ್ವದ ಸ್ಥಾನವನ್ನು ಪಡೆದವರು ಅಚಾರ್ಯ ಶಂಕರ, ರಾಮಾನುಜ ಮತ್ತು ಮಧ್ವರು. ವಿಶ್ವಮಾನ್ಯವಾದ ಸಂದೇಶ ಹೊತ್ತು ಬಂದ ಈ ಮೂವರಲ್ಲಿ ಮಧ್ವರು ಕನ್ನಡದ ಕೊಡುಗೆಯೆಂಬುದು ಹೆಮ್ಮೆಯ ಸಂಗತಿ, ಅವರ ಚಿಂತನೆಗಳು ಬೋಧಪ್ರದ. ತಮ್ಮ ಇನ್ನೊಂದು ಪ್ರತಿಕೃತಿಯಂತಿರುವ ದಿವ್ಯಜ್ಞಾನ ಸಂಪತ್ತನ್ನು ಸಜ್ಜನರ ವಿನಿಯೋಗಕ್ಕೆ ನೀಡಿದ ಈ ಮಹಿಮರು ಜ್ಞಾನಬಲದೈಸಿರಿಗಳ ಅದ್ಭುತ ಸಂಗಮ . ಭಕ್ತಿಪಂಥ ಪ್ರವರ್ತಕ ಮನೀಷಿಗಳು. ಅವರ ತತ್ವವಾದವನ್ನು ಉಳಿಸಿ ಬೆಳೆಸಿಕೊಂಡು ಹೋಗುವುದೇ ವಿಚಾರ ಪ್ರಿಯರು ಮಧ್ವರಿಗೆ ಸಲ್ಲಿಸಬಹುದಾದ ಗೌರವ ಎಂದು ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಅಭಿಪ್ರಾಯ ವ್ಯಕ್ತಪಡಿಸಿದರು.

ವಿಶ್ವ ಮಧ್ವಮತ ವೆಲ್‍ಫೇರ್ ಅಸೋಸಿಯೇಷನ್ ವತಿಯಿಂದ ನಗರದ ವಿದ್ಯಾರಣ್ಯಪುರದ ಶ್ರೀರಾಘವೇಂದ್ರಸ್ವಾಮಿಗಳ ಮಠದಲ್ಲಿ ಶ್ರೀಮಧ್ವ ನವಮಿಯ ಅಂಗವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಹಿರಿಯ ಪತ್ರಕರ್ತ ಹನುಮೇಶ್ ಯಾವಗಲ್ , ಶ್ರೀ ಜಗನ್ನಾಥ ದಾಸರು ಚಲನಚಿತ್ರದ ನಿರ್ದೇಶಕ ಡಾ.ಮಧುಸೂದನ ಹವಲ್ದಾರ್ ಹಾಗೂ ಗೋಪಾಲದಾಸರ ಪಾತ್ರಧಾರಿ ಪ್ರಭಂಜನ ದೇಶಪಾಂಡೆ ಮೊದಲಾದ ಸಾಧಕರಿಗೆ ‘ಶ್ರೀಮಧ್ವೇಶಾನುಗ್ರಹ’ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ವಿಎಂಡ್ಲ್ಯೂಎ ಸಂಸ್ಥಾಪಕ ಅಧ್ಯಕ್ಷ ಬಿ.ಕೆ.ವೆಂಕೋಬ ರಾವ್ ಪ್ರಾಸ್ತಾವಿಕ ಮಾತನಾಡುತ್ತ ಕನ್ನಡನಾಡಿನ ಹೆಮ್ಮೆಯ ಆಚಾರ್ಯರಾದ ವಿಶ್ವಗುರು ಮಧ್ವಾಚಾರ್ಯರ ಸಂದೇಶದ ಪ್ರಸಾರ ತನ್ಮೂಲಕ ಧಾರ್ಮಿಕ ಹಾಗೂ ಸಾಮಾಜಿಕ ಸೇವಾ ಕೈಂಕರ್ಯ ಮಾಡುತ್ತಿರುವ ವಿಎಂಡ್ಲ್ಯೂಎ ವತಿಯಿಂದ ಈ ಸಮಾರಂಭ ನಡೆದಿದ್ದು ಆಚಾರ್ಯರ ಪೂರ್ವಾವತಾರವಾದ ಭೀಮಸೇನ ಮತ್ತು ಹನುಮಂತನ ಸ್ಮರಣಾರ್ಥ ಅಡುಗೆಯವರು ಮತ್ತು ಸಹಾಯಕ ಅರ್ಚಕರನ್ನೂ ಗೌರವಿಸುತ್ತಿದ್ದೇವೆ ಎಂದು ತಿಳಿಸಿದರು. ಪೂಜ್ಯ ಶ್ರೀಮಧ್ವರಾಜ ತೀರ್ಥರ ದಿವ್ಯ ಸಾನ್ನಿಧ್ಯದಲ್ಲಿ ವಿದ್ವಾನ್ ಜಿ .ಪಿ.ನಾಗರಾಜಾಚಾರ್ಯ ಉಪನ್ಯಾಸ ನೀಡಿದರು. ಕೃಷ್ಣಾಚಾರ್ಯ, ರಾಘವೇಂದ್ರ ಜೋಷಿ ,ಶ್ರೀಮಠದ ಬದರಿ ಇನ್ನಿತರರು ಉಪಸ್ಥಿತರಿದ್ದರು. ವಿವರಗಳಿಗೆ : 91138 53325

Latest News

ಗುಣಾತ್ಮಕ ಶಿಕ್ಷಣದ ಮೌಲ್ಯವನ್ನು ಪ್ರತಿಬಿಂಬಿಸಿದ ಜ್ಞಾನ ಗಂಗೋತ್ರಿಯ ವಾರ್ಷಿಕ ಸ್ನೇಹ ಸಮ್ಮೇಳನ

ಸಂಸ್ಕಾರ ಮತ್ತು ಸಾಧನೆಯ ಅನನ್ಯ ಸಂಗಮವಾಗಿ ಮೂಡಿಬಂದ ‘ಸ್ಪಂದನ’ ಕಾರ್ಯಕ್ರಮಮೂಡಲಗಿ: ಕಳೆದ ಹಲವು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ ೧೦೦ರಷ್ಟು ಫಲಿತಾಂಶ ದಾಖಲಿಸುತ್ತಾ ಬಂದಿರುವ ರಾಜಾಪೂರ...

More Articles Like This

error: Content is protected !!
Join WhatsApp Group