spot_img
spot_img

ವಿವಿಧ ಶಿಕ್ಷಕರಿಗೆ ಜಿಲ್ಲಾ ಮಟ್ಟದ ಸಿರಿಗನ್ನಡ ಆದರ್ಶ ಶಿಕ್ಷಕ ಪಶಸ್ತಿ ಪ್ರದಾನ

Must Read

- Advertisement -

ಸಿಂದಗಿ: ಗುರುವಿನ ಸ್ಥಾನ ಅತ್ಯಂತ ಶ್ರೇಷ್ಠವಾದದ್ದು ಇದೊಂದು ಪವಿತ್ರ ವೃತ್ತಿ, ಇಂತಹ ವೃತ್ತಿಗೆ ಚ್ಯುತಿ ಬಾರದಂತೆ ಭವ್ಯ ಭಾರತದ ಪ್ರಜೆಗಳನ್ನು ರೂಪಿಸುವಲ್ಲಿ ಶಿಕ್ಷಕರು ದಿವ್ಯ ಪಾತ್ರ ವಹಿಸಬೇಕೆಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಹೇಳಿದರು.

ಪಟ್ಟಣದ ಮಾಂಗಲ್ಯ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಬಳಗ ದೈಹಿಕ ಶಿಕ್ಷಕರ ಸಂಘ ಹಾಗು ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ದಿನಾಚರಣೆ ನಿಮಿತ್ಯ ಜಿಲ್ಲಾ ಮಟ್ಟದ ಸಿರಿಗನ್ನಡ ಆದರ್ಶ ಶಿಕ್ಷಕ ಪಶಸ್ತಿ ಪ್ರದಾನ ಸಮಾರಂಭದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ತಂತ್ರಜ್ಞಾನದ ಯುಗದಲ್ಲಿ ಯಾಂತ್ರೀಕರಣ ಉದಾರೀಕರಣಗಳ ಭರಾಟೆಯಲ್ಲಿ ನಾವು ನಮ್ಮತನದಿಂದ ವಿಮುಕರಾಗಿದ್ದೇವೆ ಶಿಕ್ಷಣದ ಜೊತೆಗೆ ಮಕ್ಕಳಿಗೆ ಉತ್ತಮ ಸಂಸ್ಕಾರದ ಅವಶ್ಯಕತೆ ಇದೆ. ನಾವು ಕೇವಲ ನಮ್ಮ ಹಕ್ಕುಗಳಿಗೆ ಬಡಿದಾಡುತ್ತೇವೆಯೇ ವಿನಃ ನಮ್ಮ ಕರ್ತವ್ಯಗಳನ್ನು ನಿಭಾಯಿಸುವ ಗೋಜಿಗೆ ಹೋಗುವುದಿಲ್ಲ ಶಿಕ್ಷಕರು ರಾಧಾಕೃಷ್ಣನ್ನರನ್ನು ಆದರ್ಶವಾಗಿಟ್ಟುಕೊಂಡು ಶ್ರಮವಹಿಸಿ ಸಾಧನೆಯುತ್ತ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಮಟ್ಟದ ಸಿರಿಗನ್ನಡ ಆದರ್ಶ ಶಿಕ್ಷಕ ಪಶಸ್ತಿ ಪ್ರದಾನ ಸಮಾರಂಭವನ್ನು ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಉದ್ಘಾಟಿಸಿದರು.

ಇಂಡಿಯ ಕ್ಷೇತ್ರ ಸಮನ್ವಯಾಧಿಕಾರಿ ಸಿ.ಎಂ.ಬಂಡಗಾರ ಉಪನ್ಯಾಸ ನೀಡಿ, ವಿದ್ಯಾರ್ಥಿ, ಪಾಲಕ, ಶಿಕ್ಷಕ, ನಾಗರಿಕ, ನೇತಾರ ಇವರು ಸಮಾಜದ ನಿರ್ಮಾಣಕ್ಕೆ ಬುನಾದಿಯಾಗುತ್ತಾರೆ. ಹಾಗೆಯೇ ಮಕ್ಕಳು ಶಿಕ್ಷಣ ಹಾಗೂ ಶೀಲವಂತರಾಗಲು ಪಾಲಕರಿಗೆ ಮೊದಲು ಶಿಕ್ಷಣದ ತರಬೇತಿ ನೀಡುವ ಅವಶ್ಯಕತೆ ಇದೆ ಶಿಕ್ಷಕರು ಮಾತೃ ಹೃದಯಿಗಳಾಗಿ ಜ್ಞಾನದ ಆಭರಣದಿಂದ ಮಕ್ಕಳ ಬಾಳು ಬೆಳಗುವಂತಾಗಬೇಕು ಎಂದರು.

- Advertisement -

ಶಿರಶಾಡ ಸಂಸ್ಥಾನ ಹಿರೇಮಠದ ಅಭಿನವ ಮುರುಗೇಂದ್ರ ಶಿವಾಚಾರ್ಯರು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಪವಿತ್ರಾ ಅಕ್ಕನವರು ಸಾನ್ನಿದ್ಯ ವಹಿಸಿ ಮಾತನಾಡಿದರು. ಸಾಹಿತಿ ಶ್ರೀದೇವಿ ಉತ್ಲಾಸg,À ಬಿ.ಇ.ಒ ಆರ್ ಎಸ್ ನೀರಲಗಿ ಮತನಾಡಿದರು. ಶಿಕ್ಷಕರ ಸಂಘದ ಅಧ್ಯಕ್ಷರಾದ ಆರ್.ಎಚ್ ಬಿರಾದಾರ, ಎಸ್ ಎಮ್ ಸಜ್ಜನ, ಅಶೋಕ ಗಿಡ್ಡಪ್ಪಗೋಳ, ಎ ಎಚ್ ವಾಲಿಕಾರ, ಎಸ್ ಎಮ್ ಮಸಳಿ, ಎಮ್ ಎಮ್ ಕೆಂಬಾವಿ, ಯು ಆಯ್ ಶೇಖ, ಎಸ್ ಎಮ್ ಚಿಗರಿ, ಎಚ್ ಎಮ್ ಬಿಳವಾರ, ಉಪಸ್ತಿತರಿದ್ದರು.

ಶಿಕ್ಷಕ ಸಿದ್ದಲಿಂಗ ಚೌಧರಿ ಪ್ರಾಸ್ತಾವಿಕ ಮಾತನಾಡಿದರು. ಎಸ್ ಎಸ್ ಹಚಡದ ಸ್ವಾಗತಿಸಿದರು. ಅಶೋಕ ಬಿರಾದಾರ ನಿರೂಪಿಸಿದರು ಬಸವರಾಜ ಅಗಸರ ವಂದಿಸಿದರು ಈ ಸಂದರ್ಭದಲ್ಲಿ ಜಿಲ್ಲೆಯ 40 ಜನ ಶಿಕ್ಷಕರಿಗೆ ಸಿರಿಗನ್ನಡ ಆದರ್ಶ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು ಹಾಗು ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಎಸ್ ಎಸ್ ಮಾಣಸುಣಗಿ, ಎಸ್ ಎಮ್ ಕಾಳೆ, ಅರ್ಚನಾ ಕೆ, ಪಿ ಎಸ್ ಅಗ್ನಿ, ಸಾಹಿತಿಗಳಾದ ಶರಣು ಚಟ್ಟಿ, ಸಿದ್ದಾರೂಡ ಬಿರಾದಾರ, ಪಿ ಎಚ್ ಡಿ ಪಡೆದ ಡಾ. ಶೋಭಾ ಬಿರಾದಾರ ಡಾ. ಚಂದ್ರಕಾಂತ ಸಿಂದಗಿ ಇವರನ್ನು ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಕಾನಿಪ ಅಧ್ಯಕ್ಷ ಆನಂದ ಶಾಬಾದಿ ಸಾಯಬಣ್ಣ ದೇವರಮನಿ, ಶಿವಕುಮಾರ ಕಲ್ಲೂರ, ಶ್ರೀಮಂತ ಪಾಟೀಲ, ಎಮ್.ಕೆ.ಬಿರಾದಾರ, ಪರಶುರಾಮ ಪೂಜಾರಿ, ಸಬಿಯಾ ಮರ್ತುರ, ಶಕುಂತಲಾ ಹೀರೆಮಠ, ಮಹಾದೇವಿ ಹಿರೇಮಠ, ಪ್ರೇಮಾ ನಾಯ್ಕ, ಪರಿಮಳಾ ಯಲಗೋಡ, ಜ್ಞಾನೇಶ ಗುರವ, ಡಾ. ಪ್ರಕಾಶ, ಹೊನ್ನಮ್ಮ ಹಿರೇಮಠ, ಶಿಲ್ಪಾ, ಸುಮಂಗಲಾ ಕೆಂಭಾವಿ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಹಿರಿಯರು ಕುಟುಂಬದ ಬಲವಾದ ಅಡಿಪಾಯ — ಸಿದ್ದಲಿಂಗ ಕಿಣಗಿ

    ಸಿಂದಗಿ - ಅಜ್ಜಿಯರು ಕುಟುಂಬದ ದೊಡ್ಡ ಸಂಪತ್ತು, ಪ್ರೀತಿಯ ಪರಂಪರೆಯ ಸ್ಥಾಪಕರು, ಶ್ರೇಷ್ಠ ಕಥೆಗಾರರು ಮತ್ತು ಸಂಪ್ರದಾಯದ ಪಾಲಕರು. ಅಜ್ಜ-ಅಜ್ಜಿಯರು ಕುಟುಂಬದ ಬಲವಾದ...
- Advertisement -

More Articles Like This

- Advertisement -
close
error: Content is protected !!
Join WhatsApp Group