- Advertisement -
ಸವದತ್ತಿ – ಪಟ್ಟಣದ ಹನುಮಗೇರಿ ಓಣಿ ಅಂಗನವಾಡಿ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬವನ್ನು ಕೋವಿಡ್ ಲಸಿಕೆ ಹಾಕುವುದರ ಮೂಲಕ ಆಚರಿಸಲಾಯಿತು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ಡಾಕ್ಟರ ನಯನಾ ಹೇಮಂತ ಭಸ್ಮೇ ಲಸಿಕೆ ಹಾಕುವುದರ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, “ಪ್ರಧಾನಿ ಮೋದಿಯವರು ದೇಶ ಕಂಡ ಅಪರೂಪದ ಪ್ರಧಾನಿ ಅವರು ಪ್ರಧಾನಿ ಆದ ಬಳಿಕ ದೇಶದಲ್ಲಿ ಅಮೋಘವಾದ ಬದಲಾವಣೆ ಕೆಲಸಗಳನ್ನು ಮಾಡುವುದರ ಜೊತೆಗೆ ಭಾರತ ದೇಶದ ಮಹತ್ವವನ್ನು ಇಡೀ ಜಗತ್ತಿಗೆ ತೋರಿಸಿದ್ದಾರೆ” ಎಂದರು
ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿ ರಮೇಶ ಶಿಂದಗಿ, ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿಗಳಾದ ಸುಜಾತಾ ಮಠಪತಿ,ರೇಣುಕಾ ಪೂಜಾರ,ಅಂಗನವಾಡಿ ಶಿಕ್ಷಕಿಯರಾದ ಮಂಜುಳಾ ಸುಣಗಾರ, ಕೆ ಬಿ ಧಾಭಿಮಠ ಉಪಸ್ಥಿತರಿದ್ದರು.