ಸಿಂದಗಿ; ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧಿಜಿ ಹಾಗೂ ಸಂವಿದಾನ ಶಿಲ್ಪಿ ಡಾ. ಅಂಬೇಡ್ಕರವರ ಹೋರಾಟದ ಸವಿನೆನಪಿಗಾಗಿ ಇಡೀ ರಾಜ್ಯಾದ್ಯಂತ ಗಾಂಧೀಜಿ ಸ್ಮರಣೆಯ ಕಾರ್ಯಕ್ರಮಗಳು ಇಂದಿನ ಯುವ ಪೀಳಿಗೆಗೆ ತಿಳಿಸಿಕೊಡುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದವತಿಯಿಂದ ಇಂತಹ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ.ಪಾಟೀಲ ಹೇಳಿದರು.
ಪಟ್ಟಣದ ಆಲಮೇಲ ರಸ್ತೆಯಲ್ಲಿರುವ ಮಹಾತ್ಮಾ ಗಾಂಧೀಜಿ ವೃತ್ತದ ಬಳಿ ನೂತನ ಗಾಂಧೀಜಿ ವೃತ್ತಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ನ್ಯಾಯ ಸ್ವಾತಂತ್ರ‍್ಯ ಮತ್ತು ಸಮಾನತೆಗಳ ಪ್ರಜಾತಂತ್ರದ ಮೌಲ್ಯಗಳ ಬುನಾದಿಯಲ್ಲಿ ದೇಶ ಕಟ್ಟಬೇಕೆಂಬ ಸಂಕಲ್ಪ ಕೈಗೊಂಡ ದಿನ. ಪ್ರಜೆಗಳೇ ಪ್ರಭುಗಳಾದ ಶುಭದಿನವಿದು. ಭಾರತ ಸಾರ್ವಭೌಮ ಪ್ರಜಾಪ್ರಭುತ್ವರಾಷ್ಟ್ರದ ರೂಪಧಾರಣೆ ಮಾಡಿದ ಈ ಸಂದರ್ಭದಲ್ಲಿ ರಾಷ್ಟ್ರ ನಾಯಕರನ್ನು ನೆನೆಯಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದ ಅವರು, ಪಂಚ ಗ್ಯಾರೆಂಟಿಯಿಂದ ಅಭಿವೃದ್ಧಿ ಕುಂಠಿತವಾಗಿವೆ ಎಂದು ರಂಬಾಪುರ ಶ್ರೀಗಳು ಹೇಳಿದ್ದು ಈ ಒಂದು ವರ್ಷದ ಮಟ್ಟಿಗೆ ಹಿನ್ನಡೆಯಾಗಿರಬಹುದು ಆದರೆ ಮುಂಬರುವ ದಿನಗಳಲ್ಲಿ ಹಾಗೆ ಆಗದು ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಹೆಚ್ಚು ಒತ್ತು ನೀಡುತ್ತಾರೆ ಎನ್ನುವ ಭರವಸೆ ಇದೆ ಎಂದರು.
ಈ ಸಂದರ್ಭದಲ್ಲಿ ಸಾನ್ನಿಧ್ಯ ವಹಿಸಿದ ಸಾರಂಗಮಠದ ಡಾ. ಪ್ರಭು ಸಾರಂಗದೇವ ಶಿವಾಚಾರ್ಯರು, ಊರಿನ ಹಿರೇಮಠ, ಶಿವಾನಂದ ಶಿವಾಚಾರ್ಯರು, ಶಾಸಕ ಅಶೋಕ ಮನಗೂಳಿ, ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ, ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ, ಉಪಾದ್ಯಕ್ಷ ರಾಜಣ್ಣಿ ನಾರಾಯಣಕರ, ಸದಸ್ಯರಾದ ಹಣಮಂತ ಸುಣಗಾರ, ಶರಣಗೌಡ ಪಾಟೀಲ, ಬಸವರಾಜ ಯರನಾಳ, ಗ್ಯಾರಂಟಿ ಯೋಜನಾ ಅಧ್ಯಕ್ಷ ಶ್ರೀಶೈಲ ಕವಲಗಿ, ಡಾ. ಅರವಿಂದ ಮನಗೂಳಿ, ಅಶೋಕ ವಾರದ, ದಸಂಸ ಸಂಚಾಲಕ ವೈ.ಸಿ.ಮಯೂರ, ಚೆನ್ನು ವಾರದ, ಕೆಡಿಪಿ ಸದಸ್ಯ ನೂರಹಮ್ಮದ ಅತ್ತಾರ,ಶಿವು ಹತ್ತಿ, ಪ್ರವೀಣ ಕಂಠಿಗೊಂಡ, ಭೀಮು ವಾಲಿಕಾರ, ಸುರೇಶ ಮಳಲಿ, ಮಹಾನಂದ ಬಮ್ಮಣ್ಣಿ, ಅಂಬಿಕಾ ಪಾಟೀಲ, ಪ್ರತಿಬಾ ಚಳ್ಳಗಿ, ಸರಣಮ್ಮ ನಾಯಕ ಸೇರಿದಂತೆ ಅನೇಕರಿದ್ದರು.