ಗೋಕಾಕ: ಗೋ ಮಾತೆಯನ್ನು ಪೂಜಿಸುವ ಮೂಲಕ ಸುಖ,ಶಾಂತಿ,ಸಮೃದ್ದಿ ದೊರೆಯುತ್ತಿದೆ ಎಂದು ನಗರದ ಶೂನ್ಯ ಸಂಪಾದನಮಠದ ಪೂಜ್ಯ ಶ್ರೀ ಮುರುಘರಾಜೇಂದ್ರ ಮಹಾ ಸ್ವಾಮೀಜಿ ಹೇಳಿದರು.
ಅವರು ನಗರದ ಶೂನ್ಯ ಸಂಪಾದನಮಠದಲ್ಲಿ ಜರುಗಿದ ಮಾತೃಭೂಮಿ ಫೌಂಡೇಶನ್ ವತಿಯಿಂದ ಗೋಮಾತೆ ರಕ್ಷಕರಿಗೆ ಪ್ರಥಮ ಚಿಕಿತ್ಸೆ ಕಿಟ್ ವಿತರಣೆ ಮಾಡಿ ಮಾತನಾಡಿದರು.
ಗೋಮಾತೆಯನ್ನು ಪೂಜಿಸುವುದರ ಜೊತೆಗೆ ಪಾಲನೆ ಪೋಷಣೆ ಮಾಡಬೇಕು. ಎಲ್ಲ ದೇವಾನುದೇವತೆಗಳ ಆಶೀರ್ವಾದ ಗೋಮಾತೆಯಲ್ಲಿ ಕಾಣುತ್ತವೆ. ಗೋಮಾತೆಯ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಬೆಳಗಾವಿ ವಿಭಾಗದ ಸಂಯೋಜಕ ಸದಾಶಿವ ಗುದಗಗೋಳ, ಗೋಮಾತೆ ರಕ್ಷಕರಾದ ಲಕ್ಕಪ್ಪ ನಂದಿ, ಶ್ರೀಕಾಂತ, ಮಾತೃಭೂಮಿ ಫೌಂಡೇಶನ್ ಅಧ್ಯಕ್ಷ ಚಂದನ ಮಗದುಮ್, ಉಪಾಧ್ಯಕ್ಷ ರಾಜು ಕಬ್ಬೂರ, ಗೌರವಾಧ್ಯಕ್ಷ ಪ್ರಸಾದ ರಣಸುಭೆ, ಕಾರ್ಯದರ್ಶಿ ಕಿರಣ ಬಿರಡಿ, ಪ್ರಧಾನ ಕಾರ್ಯದರ್ಶಿ ಸಚಿನ ಮಗದುಮ, ಸದಸ್ಯರುಗಳಾದ ರಘು ನೇಗಿನಾಳ, ರಾಜು ಬಾಗಿ, ನಯನ ಅಂಕದವರ, ಹರ್ಷವರ್ದನ ಚಿಗಡೊಳ್ಳಿ,ಅಕ್ಷಯ ಕುರಬೇಟ,ವಿಶಾಲ ಜುಗಳಿ, ಮಹಾನಿಂಗ ಕೆಂಚನ್ನವರ, ಶಿವು ಕಳಸ್ಯಾಗೋಳ,ವೇದಾಂತ ಬಡಿಗೇರ ಸೇರಿದಂತೆ ಅನೇಕರು ಇದ್ದರು.