ಆಯೋಜನೆ : ಬೆಂಗಳೂರು ಕಿಡ್ನಿ ಫೌಂಡೇಷನ್
ಖ್ಯಾತ ವಯೋಲಿನ್ ವಾದಕಿ ಡಾ.ಎನ್.ರಾಜಂ ರವರಿಗೆ ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್ ಸ್ಮಾರಕ ಪ್ರಶಸ್ತಿ ಪ್ರದಾನ
ಧ್ವನಿ ಸಂಗೀತ ಸಂಭ್ರಮದಲ್ಲಿ ಬೆಂಗಳೂರಿನ ಕೆ.ಆರ್. ರಸ್ತೆಯ ಬೆಂಗಳೂರು ಗಾಯನ ಸಮಾಜದಲ್ಲಿ ಶಾಸ್ತ್ರೀಯ ಸಂಗೀತ ಅಮೂಲ್ಯ ಸೇವೆಗಾಗಿ ಪಂಡಿತ್ ಮಲ್ಲಿಕಾರ್ಜುನ್ ಮನ್ಸೂರ್ ಪ್ರಶಸ್ತಿ ವಿದುಷಿ ಡಾ. ಎನ್. ರಾಜಮ್ ಅವರಿಗೆ ಕರ್ನಾಟಕ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಲ್ಲಿಕಾರ್ಜುನ್ ಮನ್ಸೂರ್ ಅವರ ಕಂಚಿನ ಪ್ರತಿಮೆ, ೧ ಲಕ್ಷ ನಗದು, ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಿದರು.ಟ್ರಸ್ಟಿಗಳಾದ ಡಾ.ಪಿ.ಶ್ರೀರಾಮ್ ಮತ್ತು ಪಿ.ಶ್ರೀನಿವಾಸ್ ವೇದಿಕೆಯಲ್ಲಿದರು.
ಸುಧಾಕರ್ ರಾವ್ ಮಾತನಾಡಿ,ಬೆಂಗಳೂರು ಕಿಡ್ನಿ ಪೌಂಡೇಶನ್ ಕಿಡ್ನಿ ವೈಫಲ್ಯ ಇದ್ದವರಿಗೆ ಉಚಿತವಾಗಿ ಡಯಾಲಿಸಿಸ್ ಸೇವೆ ಮತ್ತು ಕಿಡ್ನಿ ದಾನ ಮಾಡುವ ಕಾರ್ಯ ಮಾಡುತ್ತಿದೆ.ಇದು ಶ್ಲಾಘನೀಯ, ಮಲ್ಲಿಕಾರ್ಜುನ ಮನ್ಸೂರ್ ಅವರು ಕೂಡ ಬಿಕೆಎಫ್ ಪೌಂಡೇಶನ್ ನಿಂದ ಸೇವೆ ಪಡೆದಿದ್ದರು.ಅವರ ಸಾವಿನ ಬಳಿಕ ಕಿಡ್ನಿ ವೈಫಲ್ಯ ಹೊಂದಿರುವವರಿಗೆ ನೆರವು ನೀಡಲು ಅವರ ಹೆಸರಿನಲ್ಲಿ ಸಂಗೀತ ಕಾರ್ಯಕ್ರಮ ಮಾಡಲಾತ್ತಿರುವುದು ಶ್ಲಾಘನೀಯ ಎಂದರು.
ಪ್ರಶಸ್ತಿ ಪ್ರದಾನ ಸಮಾರಂಭ ಬಳಿಕ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಪಿಟೀಲು ತ್ರಿಮೂರ್ತಿಗಳಾದ ವಿದುಷಿ ಡಾ.ಎನ್. ರಾಜಮ್, ವಿದುಷಿ ಸಂಗೀತ ಶಂಕರ್, ರಾಗಿಣಿ ಮತ್ತು ನಂದಿನಿ ಶಂಕರ್ ಅವರೊಂದಿಗೆ ಪಂಡಿತ್ ಶುಭ್ ಮಹಾರಾಜ್ ಮತ್ತು ಪಂಡಿತ್ ಅಭಿಷೇಕ್ ಮಿಶ್ರಾ ತಬಲಾದಲ್ಲಿ ಭಾಗವಹಿಸಿದ್ದರು.
ಬೆಂಗಳೂರಿನಲ್ಲಿ ಮೊದಲ ಬಾರಿಗೆ ಮೀರಾ ಕುರಿತು ಶ್ರೀಮತಿ ವಿಶಾಖಾ ಹರಿ ಅವರ ಸಂಗೀತ ಪ್ರವಚನ- ಹರಿಕಥೆ, ಜುಗಲ್ಬಂದಿ ಪಂಡಿತ್ ಪ್ರವೀಣ್ ಗೋಡ್ಖಿಂಡಿ ಕೊಳಲಿನಲ್ಲಿ, ಪಂಡಿತ್ ಜಯತೀರ್ಥ ಮೇವುಂಡಿ ಗಾಯನ ಮತ್ತು ಪಂಡಿತ್ ರಾಜೇಂದ್ರ ನಕೋಡ್ ತಬಲಾದಲ್ಲಿ ಜನಮನ ರಂಜಿಸಿದರು
ಕರ್ನಾಟಕ ರಾಜ್ಯದಲ್ಲಿ ಮೂತ್ರಪಿಂಡ ವೈಫಲ್ಯ ಮತ್ತು ಮೂತ್ರಪಿಂಡ ಕಾಯಿಲೆಗಳ ಚಿಕಿತ್ಸೆಯಲ್ಲಿ ಬೆಂಗಳೂರು ಕಿಡ್ನಿ ಫೌಂಡೇಶನ್ (ಬಿಕೆಎಫ್) ಮುಂಚೂಣಿಯಲ್ಲಿದೆ. ಈ ಟ್ರಸ್ಟ್ ೧೯೭೯ ರಲ್ಲಿ ಸ್ಥಾಪನೆಯಾಯಿತು ಮತ್ತು ಆರ್ಥಿಕ ಕೆಳಸ್ತರಗಳಲ್ಲಿನ ರೋಗಿಗಳಿಗೆ ಕೈಗೆಟುಕುವ ವೆಚ್ಚದಲ್ಲಿ ಗುಣಮಟ್ಟದ ಮೂತ್ರಪಿಂಡ ಆರೋಗ್ಯ ಸೇವೆಯನ್ನು ಒದಗಿಸುವ ನೋಡಲ್ ಕೇಂದ್ರವಾಗಿ ವಿಕಸನಗೊಂಡಿದೆ.
ಕೈಗೆಟುಕುವ ಡಯಾಲಿಸಿಸ್ಗಾಗಿ ೮೦+ ಡಯಾಲಿಸಿಸ್ ಯಂತ್ರಗಳನ್ನು ಹೊಂದಿರುವ ಹೊಸ ಅತ್ಯಾಧುನಿಕ ಡಯಾಲಿಸಿಸ್ ಕೇಂದ್ರವನ್ನು ನಿರ್ಮಿಸಲಾಗಿದೆ. ಇದು ಡಯಾಲಿಸಿಸ್ ತಂತ್ರಜ್ಞರಿಗೆ ತರಬೇತಿ ಕೇಂದ್ರವನ್ನು ಸಹ ಪ್ರಾರಂಭಿಸುತ್ತಿದೆ. ಬಿಕೆಎಫ್ ಕಳೆದ ಮೂರು ವರ್ಷಗಳಿಂದ ೨೦ ಗ್ರಾಮೀಣ ಡಯಾಲಿಸಿಸ್ ಕೇಂದ್ರಗಳೊಂದಿಗೆ ಸಹಯೋಗ ಹೊಂದಿದ್ದು, ಆಯಾ ಪ್ರದೇಶಗಳಲ್ಲಿ ಡಯಾಲಿಸಿಸ್ ಚಿಕಿತ್ಸೆಗೆ ಸುಲಭ ಮತ್ತು ಗುಣಮಟ್ಟದ ಪ್ರವೇಶವನ್ನು ಸಕ್ರಿಯಗೊಳಿಸುತ್ತದೆ.
ಪ್ರತಿ ವರ್ಷ, ಬೆಂಗಳೂರು ಕಿಡ್ನಿ ಫೌಂಡೇಶನ್ (ಬಿಕೆಎಫ್) ಪ್ರಸಿದ್ಧ ಹಿಂದೂಸ್ತಾನಿ ಗಾಯಕ ದಿವಂಗತ ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್ ಅವರು ಬಿಕೆಎಫ್ ಜೊತೆ ಹೊಂದಿದ್ದ ಸಂಬಂಧದ ನೆನಪಿಗಾಗಿ ‘ಧ್ವನಿ’ – ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್ ಹಿಂದೂಸ್ತಾನಿ ಸಂಗೀತ ಉತ್ಸವವನ್ನು ನಡೆಸುತ್ತದೆ. ಈ ಸಂಗೀತ ಕಾರ್ಯಕ್ರಮದ ಆದಾಯವು ಬಡ ರೋಗಿಗಳಿಗೆ ಉಚಿತ ಡಯಾಲಿಸಿಸ್ ಅನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಬಿಕೆಎಫ್ ತನ್ನ ಉದ್ದೇಶಗಳನ್ನು ಪೂರೈಸುವಂತೆ ಮಾಡುವ ಕಾರ್ಪಸ್ಗೆ ಸೇರಿಸುತ್ತದೆ. ಈ ವರ್ಷ, ೨೦ನೇ ಧ್ವನಿಯಿಂದ ಬರುವ ಆದಾಯವನ್ನು ಗ್ರಾಮೀಣ ಡಯಾಲಿಸಿಸ್ ಕೇಂದ್ರಗಳಿಂದ ರೋಗಿಗಳಿಗೆ ಕೈಗೆಟುಕುವ ಡಯಾಲಿಸಿಸ್ ಒದಗಿಸಲು ಬಳಸಲಾಗುತ್ತದೆ ಎಂದು ಪ್ರಾಸ್ತವಿಕ ನುಡಿಯಲ್ಲಿ ಬಿಕೆಎಫ್ ಟ್ರಸ್ಟಿ ಸುಧೀರ್ ಶೆಣೈ ತಿಳಿಸಿದರು.