ಸಾರ್ವಜನಿಕ ಪ್ರಕಟಣೆ

0
377

ಸವದತ್ತಿ – ಸನ್ 2021-22 ನೇ ಸಾಲಿನ ರಾಜ್ಯ ಹಣಕಾಸು ಯೋಜನೆ ಮತ್ತು ಪುರಸಭೆ ನಿಧಿ ಅನುದಾನದಲ್ಲಿ ಪರಿಶಿಷ್ಟ ಪಂಗಡ, ಹಾಗೂ ವಿಕಲಚೇತನ ವರ್ಗದವರಿಗೆ ವೈಯಕ್ತಿಕ ಸೌಲಭ್ಯಗಳಿಗಾಗಿ ಪ್ರಸ್ತುತ ಈ ವರ್ಷದ ವಾರ್ಷಿಕ ಆದಾಯ 3 ಲಕ್ಷ ಮೀರಬಾರದು ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ: 15-09-2021 ರಂದು ಸಾಯಂಕಾಲ 5-00 ಘಂಟೆಗೆ ನಿಗದಿಪಡಿಸಿದ್ದು ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

ಸನ್ 2020-21 ನೇ ಸಾಲಿನ ಎಸ್.ಎಫ್.ಸಿ/ಪುರಸಭೆ ನಿಧಿ ಯೋಜನೆಯ ಶೇ29 /ಶೇ 24.10 ಅಡಿಯಲ್ಲಿ “ಪರಿಶಿಷ್ಟ ಪಂಗಡ” ವರ್ಗದವರಿಗೆ ಮನೆಯ ಮೇಲ್ಚಾವಣೆಯ ದುರಸ್ತಿ ಸಾಮಗ್ರಿಗಳಿಗೆ ಖರೀದಿಸಲು ಆರ್ಥಿಕ ಧನಸಹಾಯ ನೀಡುವದು (ನಿಗದಿಪಡಿಸಿದ ಮೊತ್ತ ರೂ 2.00+0.55 ಸಾವಿರ)

ಸವದತ್ತಿ ಯಲ್ಲಮ್ಮಾ ಪುರಸಭೆ ವ್ಯಾಪ್ತಿಯಲ್ಲಿ ವಾಸ ವಿರುವ ಮನೆಯ ಮೇಲ್ಚಾವಣೆಯ ದುರುಸ್ತಿಗೆ ಸಂಬಂಧಿಸಿದಂತೆ ದಾಖಲೆಗಳಾದ

  1. ಮನೆಯ ಮಾಲಕರ ಒಂದು ಪಾಸ ಪೋರ್ಟ ಸೈಜ್ ಪೋಟೋ.
  2. ಕಡ್ಡಾಯವಾಗಿ ಆಧಾರ ಕಾರ್ಡ ಝರಾಕ್ಷ ಪ್ರತಿ
  3. ಚಾಲ್ತಿ ರೇಶನ ಕಾರ್ಡ ಪ್ರತಿ
  4. ಚುನಾವಣೆಯ ಗುರುತಿನ ಚೀಟಿ
  5. ಚಾಲ್ತಿಯ ಮನೆಯ ಉತಾರ
  6. ಚಾಲ್ತಿ ಜಾತಿ ಮತ್ತು ವಾರ್ಷಿಕ ಆದಾಯ ಪ್ರಮಾಣ ಪತ್ರ.
  7. ಬ್ಯಾಂಕ ಪಾಸ ಬುಕ್ಕ
  8. ಇತರೆ ದಾಖಲೆಗಳನ್ನು ಲಗತ್ತಿಸುವದು

ಸನ್ 2021-22 ಸಾಲಿನ ಪುರಸಭೆ ನಿಧಿ ಅನುದಾನ ಶೇ 5% ರ ವಿಕಲಚೇತನ ವರ್ಗದವರಿಗೆ ಶ್ರವಣ ದೋಷ ಯಂತ್ರಗಳ (ಕಿವಿಯ ಮಿಷಣ) ಖರೀದಿಸಿ ಪೂರೈಸುವದು (ನಿಗದಿಪಡಿಸಿದ ಮೊತ್ತ ರೂ 1.00)
ಸವದತ್ತಿ ಯಲ್ಲಮ್ಮಾ ಪುರಸಭೆ ವ್ಯಾಪ್ತಿಯಲ್ಲಿ ವಾಸ ವಿರುವ ವಿಕಲಚೇತನ ವರ್ಗದವರಿಗೆ ಶ್ರವಣ ದೋಷ  ಯಂತ್ರಗಳ ಸಂಬಂಧಿಸಿದಂತೆ ದಾಖಲೆಗಳಾದ

  1. ಫಲಾನುಭವಿಯ ಒಂದು ಪಾಸ ಪೋರ್ಟ ಸೈಜ್ ಪೋಟೋ.
  2. ಕಡ್ಡಾಯವಾಗಿ ಆಧಾರ ಕಾರ್ಡ ಝರಾಕ್ಷ ಪ್ರತಿ
  3. ಚಾಲ್ತಿ ರೇಶನ ಕಾರ್ಡ ಪ್ರತಿ
  4. ಚುನಾವಣೆಯ ಗುರುತಿನ ಚೀಟಿ
  5. ಅಂಗವಿಕಲರ ಪ್ರಮಾಣ ಪತ್ರ
  6. ಚಾಲ್ತಿ ವಾರ್ಷಿಕ ಆದಾಯ ಪ್ರಮಾಣ ಪತ್ರ.
  7. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಸರಕಾರಿ ರಜೆ ದಿನಗಳಲ್ಲಿ ಹೊರತುಪಡಿಸಿ ಕಾರ್ಯಾಲಯದ ವೇಳೆಯಲ್ಲಿ ಎಸ್.ವೈ ಹಾದಿಮನಿ ಸಿ.ಎ.ಓ ಯಲ್ಲಮ್ಮಾ ಪುರಸಭೆ ಸವದತ್ತಿ ಇವರನ್ನು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು, ಹಾಗೂ ಈ ಕಾರ್ಯಾಲಯದ ವೆಬ್‍ಸೈಟ್ ವಿಳಾಸ : www.saundattitown.mrc.gov.in ನೇದ್ದರಲ್ಲಿ ಮಾಹಿತಿ ಪಡೆಯಬಹುದು