ಸಿಂದಗಿ: ಆದರ್ಶ ವಿದ್ಯಾಲಯಕ್ಕೆ 2021-22ನೇ ಸಾಲಿನ 6ನೇ ತರಗತಿಗೆ ದಾಖಲಾತಿ ಪಡೆಯಲು ನಡೆಸುವ ಪ್ರವೇಶ ಪರೀಕ್ಷೆಯು ಜುಲೈ 27 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.00 ಗಂಟೆಯವರೆಗೆ ನಡೆಯಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವೈ. ದೇವಣಗಾಂವ ಮತ್ತು ಆದರ್ಶ ವಿದ್ಯಾಲಯ ಪ್ರಭಾರಿ ಮುಖ್ಯಗುರು ಆರ್. ಎಸ್. ಚಟ್ಟರಕಿ (ಮೊ. ನಂ. 9880985806) ತಿಳಿಸಿದ್ದಾರೆ.
ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಪ್ರವೇಶ ಪತ್ರಗಳನ್ನು vidyavahini.kar.nic.in website ನಲ್ಲಿ ವಿದ್ಯಾರ್ಥಿಯ SATS ನಂಬರ ಅಥವಾ application ನಂಬರ ಹಾಕಿ download ಮಾಡಿಕೊಂಡು ಯಾವ ಕೇಂದ್ರದಲ್ಲಿ ಹೆಸರು ಬರುತ್ತದೆಯೋ ಆ ಕೇಂದ್ರದಲ್ಲಿ ಪರೀಕ್ಷೆ ಬರೆಯಬೇಕು. ಈ ಕುರಿತು ಈಗಾಗಲೇ ವಿದ್ಯಾರ್ಥಿಗಳ ನೊಂದಾಯಿತ ಮೊಬೈಲ್ ಸಂಖ್ಯೆಗೆ ಮಾಹಿತಿ ರವಾನಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.