ಬೆಂಗಳೂರು: ಫೆಬ್ರವರಿ 27 ರಂದು ನಗರದ ಬನಶಂಕರಿ 3 ನೇ ಹಂತದ ಹೊಸಕೇರಿಹಳ್ಳಿಯ ನರಗುಂದ ಅಂತಾರಾಷ್ಟ್ರೀಯ ಶಾಲೆಯಲ್ಲಿ 5 ವರ್ಷದ ಒಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲಾಯಿತು.
ಬೆಂಗಳೂರು ನಗರದ ಹೊಸಕೇರಿ ಹಳ್ಳಿಯ ನರಗುಂದ ಕಾಲೇಜ್ ಆಫ್ ಫಾರ್ಮಸಿ ಹಾಗೂ ಸರ್ಕಾರದ ವತಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ನರಗುಂದ ಕಾಲೇಜ್ ಆಫ್ ಫಾರ್ಮಸಿಯಲ್ಲಿ ಡಾಕ್ಟರ್ ಆಫ್ ಫಾರ್ಮಸಿ ಯ 3 ನೇ ವರ್ಷದ ವಿದ್ಯಾರ್ಥಿಗಳಾದ ಆಜ್ರರಾನ್ , ಸೋಮು ಕಾಂತಿ ಅವರು ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ ದಲ್ಲಿ ಕಾರ್ಯ ಪ್ರವೃತರಾಗಿ, ಆಜ್ರರಾನ್ ಅವರು ಬರುವ (0 – 5) ಸಣ್ಣ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದರೆ, ಸೋಮು ಕಾಂತಿ ಅವರು ಎಷ್ಟು ಮಕ್ಕಳಿಗೆ ಲಸಿಕೆ ಹಾಕಲಾಯಿತು ಎಂಬುದರ ಬಗ್ಗೆ ಮಾಹಿತಿ ಕಲೆಹಾಕಿ ಅವರು ಲಸಿಕೆ ಹಾಕಿದ ಮಕ್ಕಳ ಬೆರಳ ತುದಿಗೆ ನೀಲಿ ಬಣ್ಣದ ಶಾಯಿ ಹಚ್ಚಿದರು.
ಬನಶಂಕರಿ 3 ನೇ ಹಂತದ ಹೊಸಕೇರಿಹಳ್ಳಿಯ ದತ್ತಾತ್ರೇಯ ದೇವಾಲಯದ ಮುಂಭಾಗದಲ್ಲಿ ಇರುವ ನರಗುಂದ ಅಂತಾರಾಷ್ಟ್ರೀಯ ಶಾಲೆಯಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮದಲ್ಲಿ 190 ಮಕ್ಕಳಿಗೆ ಲಸಿಕೆ ಹಾಕಲಾಯಿತು ಎಂದು ಡಾ.ಅಂಬುರಾಜ್ ಪತ್ರಿಕೆಗೆ ತಿಳಿಸಿದರು.
ಬೆಳ್ಳಿಗ್ಗೆ 9 ರಿಂದ ಸಂಜೆ 5 ರ ತನಕ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ ವನ್ನು ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಹೊಸಕೇರಿ ಹಳ್ಳಿಯ ನರಗುಂದ ಕಾಲೇಜ್ ಆಫ್ ಫಾರ್ಮಸಿ ಮತ್ತು ಸರ್ಕಾರಿ ಆಸ್ಪತ್ರೆ ವಿದ್ಯಾಪೀಠ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಸರ್ಕಾರದ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಶಾಲೆಯ ಕಾವಲುಗಾರ ಜಿ.ರಾಮ್ ರಾವ್ ಉಪಸ್ಥಿತರಿದ್ದರು.
ಲಸಿಕೆಯನ್ನು ಸವಿದು ಮಂದಹಾಸ ಬೀರಿದ ಹಸುಗೂಸು:
ಈ ಕಾರ್ಯಕ್ರಮ ದಲ್ಲಿ ಮಗು ಹುಟ್ಟಿ 1 ತಿಂಗಳ ತುಂಬಿದ್ದ ಹಸಿ ಕೂಸು ನಿಂದ ಹಿಡಿದು 5 ವರುಷ ತುಂಬಿದ ಮಕ್ಕಳಿಗೆ ಲಸಿಕೆ ಹಾಕಲಾಯಿತ್ತು ,ಆದರೆ ವಿಶೇಷತೆ ಎಂದರೆ ಮಗು ಹುಟ್ಟಿ 2 ತಿಂಗಳ ತುಂಬಿದ್ದ ಹಸಿ ಕೂಸು ನಿದ್ದೆ ಯ ಮಂಪರಿನಲ್ಲಿ ಇದ್ದಾಗ ಅದರ ತಾಯಿ ಮಗುವಿಗೆ ಎಚ್ಚರ ಮಾಡಿ ಲಸಿಕೆ ಹಾಕಿಸಿದಾಗ ಎಚ್ಚರ ಗೊಂಡ ಮಗು ಲಸಿಕೆಯನ್ನು ಸವಿದು ಮಂದಹಾಸ ಬೀರಿತು.
ಚಿತ್ರ: ವರದಿ: ತೀರ್ಥಹಳ್ಳಿ ಅನಂತ ಕಲ್ಲಾಪುರ