‘ಪುನೀತ್ ರಾಜ್ ‘ ಕ್ರಾಸ್ ಉದ್ಘಾಟನೆ; ಜನ ಸೇವೆಯಿಂದಾಗಿ ಪುನೀತ್ ಅಜರಾಮರ – ಪ್ರೊ.ಕಳ್ಳಿಗುದ್ದಿ

Must Read

ಮೂಡಲಗಿ : ಕರುನಾಡಿನ ಯುವರಾಜ ಕೋಟ್ಯಂತರ ಅಭಿಮಾನಿಗಳ ಕಣ್ಮಣಿ ಪುನೀತ್ ರಾಜಕುಮಾರ ಅಕಾಲಿಕವಾಗಿ ಕಾಣದಂತೆ ಮಾಯವಾಗಿ ಕೈಲಾಸ ಸೇರಿಕೊಂಡ ಘಟನೆ ನಮ್ಮೆಲ್ಲರನ್ನೂ ಸ್ತಂಭೀಭೂತರನ್ನಾಗಿಸಿದೆ ಎಂದು ಉಪನ್ಯಾಸಕ ವಾಯ್ ಬಿ ಕಳ್ಳಗುದ್ದಿ ಹೇಳಿದರು.

ತಾಲೂಕಿನ ಹಳ್ಳೂರ ಗ್ರಾಮದಲ್ಲಿ ಅಪ್ಪು ಅಭಿಮಾನಿ ಬಳಗದಿಂದ ಗ್ರಾಮದ ನವನಗರ ಕ್ರಾಸ್‍ವನ್ನು “ಪುನೀತ್ ರಾಜಕುಮಾರ ಕ್ರಾಸ್” ವೆಂದು ಮರುನಾಮಕರಣದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುನೀತ ಅವರ ಅಗಲಿಕೆಯ ನೋವು, ಸ್ಮರಣೆ, ನೆನಪು ಮಾತ್ರ ನಿರಂತರವಾಗಿ ಸಾಗಿದೆ. ನಮ್ಮ ರಾಜ್ಯದಲ್ಲಿ ಮಾತ್ರವಲ್ಲದೆ ವಿಶ್ವಾದ್ಯಂತ ನೆನಪು ಮಾಡಿಕೊಳ್ಳಲಾಗುತ್ತಿದೆ. ಇದಕ್ಕೆ ಪುನೀತ ಅವರು ಬದುಕಿರುವ ತನಕವೂ ಮಾಡಿದ ಸಮಾಜ ಸೇವೆಯೇ ಅವರ ಹೆಸರು ಜನರ ಹೃದಯದಲ್ಲಿ ಅಜರಾಮರವಾಗಿರಲು ಸಾಧ್ಯವಾಗಿದೆ. ನಮ್ಮ ಕೈಲಾದಷ್ಟು ಸಮಾಜಕ್ಕೆ ಸೇವೆ ಸಲ್ಲಿಸಿ, ನಾವು ಸಲ್ಲಿಸಿದ ಸೇವೆಗಳೇ ನಮ್ಮ ಉಸಿರು ನಿಂತ ಮೇಲೂ ನಮ್ಮ ಹೆಸರನ್ನು ಉಳಿಸುತ್ತವೆ ಎಂದರು.

ಪಿಎಸ್‍ಐ ಎಚ್ ವೈ ಬಾಲದಂಡಿ ಮಾತನಾಡಿ, ಪುನೀತ್ ರಾಜಕುಮಾರ ಅವರ ಅಭಿಮಾನಿಗಳು ರಕ್ತದಾನ , ನೇತ್ರದಾನ ಹೀಗೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿ ದಾನಕ್ಕೆ ಮುಂದೆ ಬಂದಿದ್ದಾರೆ. ಇನ್ನು ಕೆಲವು ಅಭಿಮಾನಿಗಳು ಬಡ ಜನರಿಗೆ ಅನ್ನಸಂತರ್ಪಣೆ ಮಾಡಿ ಅಭಿಮಾನ ಮೆರೆದಿದ್ದಾರೆ ಎಂದರು.

ಹಳ್ಳೂರ ಗ್ರಾಮದಲ್ಲಿ ಪುನೀತ ಅವರ ಪುಣ್ಯಸ್ಮರಣೆ ಅಂಗವಾಗಿ ಅಪ್ಪು ಅಭಿಮಾನಿಗಳಿಂದ ಅನ್ನಸಂತರ್ಪಣೆ ಹಾಗೂ ಡಾ. ವಿ.ಪಿ ಕನಕರಡ್ಡಿ ಮೆಮೋರಿಯಲ್ ಬ್ಲಡ್ ಸೆಂಟರ್ ಮಹಾಲಿಂಗಪೂರ ಮತ್ತು ಅಪ್ಪು ಅಭಿಮಾನಿ ಬಗಳದ ಸಹಯೋಗದಲ್ಲಿ ಆಯೋಜಿಸಲಾದ ರಕ್ತದಾನ ಶಿಬಿರದಲ್ಲಿ ನೂರಾರು ಅಭಿಮಾನಿಗಳು ರಕ್ತದಾನ ಮಾಡುವ ಮೂಲಕ ತಮ್ಮ ನೆಚ್ಚಿನ ನಟ ಪುನೀತ ರಾಜಕುಮಾರ ನೆನೆದು ಭಾವುಕರಾದರು.

ಪುನೀತ ರಾಜಕುಮಾರ ಕ್ರಾಸ್ ಎಂಬ ನಾಮಫಲಕವನ್ನು ಗ್ರಾಮದ ನಿವೃತ್ತ ಯೋಧ ಸುರೇಶ ಬಾಗಡಿ, ಗ್ರಾಪಂ ಸದಸ್ಯ ಹಣಮಂತ ತೇರದಾಳ, ಮಾಜಿ ಜಿಪಂ ಸದಸ್ಯ ಭೀಮಶಿ ಮಗದುಮ್ಮ, ಮಾಜಿ ಗ್ರಾಪಂ ಅಧ್ಯಕ್ಷ ಬಸಪ್ಪ ಹಡಪದ ಉದ್ಘಾಟನಾ ಕಾರ್ಯಕ್ರಮವನ್ನು ನೆರೆವೇರಿಸಿದರು.

ಈ ಸಂದರ್ಭದಲ್ಲಿ ಸುರೇಶ ಕತ್ತಿ, ಸದಾಶಿವ ಮಾವರಕ, ಮಹಾದೇವ ಹೊಸಟ್ಟಿ, ಬಾಳೇಶ ನೇಸೂರ, ಕೆಂಪಣ್ಣ ಅಂಗಡಿ, ನರಸಪ್ಪ ಶೇರಖಾನ, ಲಕ್ಕಪ್ಪ ಸಪ್ತಸಾಗರ, ರಾಮಚಂದ್ರ ಬಾಗಡೆ, ಮಂಜು ನಾವಿ, ದುಂಡಿಬಾ ಕಿಳ್ಳಿಕೆತರ, ಆನಂದ ಕಿಳ್ಳಿಕೇತರ, ಆನಂದ ಬಾಗಡಿ, ಕಿಶೋರ ಗಣಾಚಾರಿ, ಮನೋಹರ ಬಾಗಡಿ, ಸಂಜು ಸಾಂಗ್ಲಿಕರ, ಚಂದ್ರೇಶ ಶೆಟ್ಟಿ, ರಾಮಪ್ಪ ಬಾಗಡಿ, ಹಣಮಂತ ಬಾಗಡಿ, ಅಪ್ಪಸಾಬ ಮುಜಾವರ, ಬಸಪ್ಪ ಕಾಂಬಳೆ ಹಾಗೂ ಪುನೀತ ಅಭಿಮಾನಿಗಳು ಮತ್ತು ಕಾಲೇಜು ವಿದ್ಯಾರ್ಥಿಗಳು ಕ್ರಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group