ಶರಣ ಸಂಸ್ಕೃತಿ ಮಹೋತ್ಸವದ ಅಂಗವಾಗಿ ಪುರಾಣ ಪ್ರಾರಂಭೋತ್ಸವ

Must Read

ಹುನಗುಂದ ತಾಲೂಕಿನ ಚಿತ್ತರಗಿಯ ಲಿಂ ಶ್ರೀ ವಿಜಯ ಮಹಾಂತ ಶಿವಯೋಗಿಗಳವರ ಮೂಲಮಠ ಚಿತ್ತರಗಿಯಲ್ಲಿ ಶರಣ ಸಂಸ್ಕೃತಿ ಮಹೋತ್ಸವದ ಅಂಗವಾಗಿ ಪುರಾಣ ಪ್ರಾರಂಭೋತ್ಸವ ಪ್ರತಿ ವರ್ಷದಂತೆ ಈ ವರ್ಷವೂ ದಿನಾಂಕ -07  ಮಂಗಳವಾರದಿಂದ ಪ್ರಾರಂಭಗೊಂಡು ದಿನಾಂಕ -05-11-2025 ರವರೆಗೆ ಪ್ರತಿದಿನ ಸಂಜೆ 7-00 ಗಂಟೆಗೆ ಜರುಗಲಿದೆ

ಲಿಂಗೈಕ್ಯ ಅಥಣಿಯ ಶ್ರೀ ಮ.ನಿ. ಪ್ರ ಮುರುಗೇಂದ್ರ ಮಹಾಸ್ವಾಮಿಗಳು ಅವರ ಜೀವನ ಚರಿತ್ರೆ ಆದರಿಸಿ ಪ್ರವಚನ ನಡೆಯಲಿದೆ ಕಾರ್ಯಕ್ರಮ ಲಿಂ. ಶ್ರೀ ಮ. ನಿ ಪ್ರ ಡಾ / ಮಹಾಂತ ಸ್ವಾಮಿಗಳು ಸಂಸ್ಥಾನ ಮಠ ಚಿತ್ತರಗಿ ಅವರ ಕೃಪಾ ಆಶೀರ್ವಾದದಿಂದ ಚಿತ್ತರಗಿ ಮೂಲಮಠದ ಗುರು ಮಹಾಂತ ಮಹಾಸ್ವಾಮಿಗಳು ನೇತೃತ್ವ ವಹಿಸುವರು.

ಹಡಗಲಿ ನಿಡಗುಂದಿ ಯ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಶಿರೂರಿನ ಮಹಾಂತ ತೀರ್ಥದ ಮ. ನಿ.ಪ್ರ ಬಸವಲಿಂಗ ಮಹಾಸ್ವಾಮಿಗಳು ಹರನಾಳದ ಮ. ನಿ. ಪ್ರ ಸಂಗಡ ಬಸವ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು ಪುರಾಣ ಪ್ರವಚನವನ್ನು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಗಿಣೇ ವಾರ ಗ್ರಾಮದ ಪೂಜ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ ಪುರಾಣ ಪ್ರವಚನ ನಡೆಸಿಕೊಡಲಿದ್ದಾರೆ

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ವಂದಾಲಿ ಗ್ರಾಮದ ಗಾನಯೋಗಿ ಪಂಡಿತ ಡಾ : ಪುಟ್ಟರಾಜ ಗವಾಯಿಗಳು ಅವರು ಶಿಷ್ಯರಾದ ಶಶಿಧರ ಹಿರೇಮಠ ವಚನ ಸಂಗೀತ ನಡೆಸಿಕೊಡಲಿದ್ದಾರೆ ಉಮಳಿ ಹೊಸೂರುದ ಮಲ್ಲಿಕಾರ್ಜುನ್ ಗೌಡ
ತಬಲಾ ಸಾತ ನೀಡಲಿದ್ದಾರೆ ಚಿತ್ತರಗಿಯ  ರಾಚಪ್ಪ ಮಾನಪ್ಪ ಬಡಿಗೇರ ಹಾರ್ಮೋನಿಯಂ ನುಡಿಸುವರು

ಯಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷರು ಶಿವಕುಮಾರ ಗಂಗಾಧರ ಶಾಸ್ತ್ರಿಗಳು ಹಿರೇಮಠ ಚಿತ್ತರಗಿ ಕಾರ್ಯಕ್ರಮದಲ್ಲಿ ಉಪಸ್ಥಿತ ರುವರು ಈ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಹಾಗೂ ಶಾಖ ಮಠದ ಎಲ್ಲ್ಲಾ ಸದ್ಭಕ್ತರು ಬಂದು ಪಾಲ್ಗೊಂಡು ವಿಜಯ ಮಹಾಂತ ಶಿವಯೋಗಿಗಳ ಕೃಪೆಗೆ ಪಾತ್ರರಾಗಬೇಕೆಂದು ಯಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಶಿವಕುಮಾರ ಗಂಗಾಧರ ಶಾಸ್ತ್ರಿಗಳು ಹಿರೇಮಠ ಚಿತ್ತರಗಿ ಹಾಗೂ ಸರ್ವ ಸದಸ್ಯರು ಚಿತ್ತರಗಿ ತಾಲೂಕ್ ಹುನಗುಂದ ಜಿಲ್ಲಾ. ಬಾಗಲಕೋಟ ಪ್ರಕಟಣೆಯಲ್ಲಿ ಕೋರಿದ್ದಾರೆ

Latest News

ಶಿರೀಷಗೆ ಗಡಿತಿಲಕ, ಶಶಿಗೆ ಜನ್ನಾ ಪ್ರಶಸ್ತಿ

ಬೆಳಗಾವಿ - ಇಲ್ಲಿಯ ಬಿ ಎ ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಪ್ರತಿವರ್ಷ ಕೊಡಮಾಡುವ ಕನ್ನಡ ಗಡಿತಿಲಕ ಪ್ರಶಸ್ತಿಗೆ ಶಿರೀಷ ಅವರು ಆಯ್ಕೆಯಾಗಿದ್ದಾರೆ...

More Articles Like This

error: Content is protected !!
Join WhatsApp Group