Puttaraj Gawai: ಡಾ. ಪಂ. ಪುಟ್ಟರಾಜ ಸೇವಾ ಸಮಿತಿಗೆ ಸಂಗೀತ ಶಿಕ್ಷಕಿ ದೇವಿಕಾ ಜೋಗಿ ನೇಮಕ

Must Read

ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ಆಜೀವ ಸದಸ್ಯರಾಗಿ ಸಲ್ಲಿಸಿದ ಸೇವೆ, ಪೂಜ್ಯರ ಮೇಲಿಟ್ಟಿರುವ ಭಕ್ತಿ, ಸಮಾಜ ಸೇವೆ, ಸಂಸ್ಕೃತಿ ಚಿಂತನೆಯನ್ನು ಗುರುತಿಸಿ ಹೊಸಪೇಟೆಯ ದೇವಿಕಾ ಜೋಗಿ ಇವರನ್ನು ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ಮಹಿಳಾ ಘಟಕದ  ಸಂಘಟನಾ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆಯೆಂದು ಗದುಗಿನ ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಪೂಜ್ಯಶ್ರೀ ವೇ. ಚನ್ನವೀರ ಸ್ವಾಮಿ ಹಿರೇಮಠ (ಕಡಣಿ) ಇವರು ತಿಳಿಸಿದ್ದಾರೆ.

ತಮ್ಮ ಅಧಿಕಾರದ ಅವಧಿಯಲ್ಲಿ ತಮ್ಮದೇ ಸಮಾನ ಮನಸ್ಕ ಆಪ್ತಬಳಗವನ್ನು ಈ ಸಮಿತಿಯ ಸದಸ್ಯರಾಗಿ ಮಾಡುವ, ರಾಜ್ಯದಾದ್ಯಂತ ಸೇವಾ ಸಮಿತಿಯ ಮಹಿಳಾ ಘಟಕಗಳನ್ನು ಅಸ್ಥಿತ್ವಕ್ಕೆ ತರುವ ವಿಶ್ವಾಸವನ್ನು ಹೊಂದಿದ್ದೇವೆ.

ಡಾ. ಪಂ. ಪುಟ್ಟರಾಜರ ಜೀವನ ಸಾಧನೆ ಸಂದೇಶವನ್ನು ಮತ್ತು ಅವರ ಸಾಹಿತ್ಯ ಪ್ರಚಾರ ಮತ್ತು ಪ್ರಸಾರದೊಂದಿಗೆ ಭಕ್ತಿ ಪಂಥದ ಕವಿ, ಗಾಯಕರಿಗೆ ವೇದಿಕೆಯಾಗಿ ಕಾರ್ಯ ನಿರ್ವಹಿಸುವ ಮೂಲಕ, ಗುರು ಸೇವೆ ಮಾಡುವ ಭಾಗ್ಯ ತಮ್ಮ ಪೂರ್ವ ಜನ್ಮದ ಸುಕೃತವೆಂದು ಭಾವಿಸಿ ಪ್ರಾಂಜಲ ಮನಸ್ಸಿನಿಂದ ಗುರುವಿಗೆ ಸೇವೆ ಸಲ್ಲಿಸಲು ವಿನಂತಿಸಿಕೊಳ್ಳುತಿದ್ದೇನೆ ಎಂದು ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.

Latest News

ಕವಿಗೋಷ್ಠಿಗೆ ಆಹ್ವಾನ

ಮೂಡಲಗಿ - ಫೆ.೧ ರಂದು ರವಿವಾರ ಮುಂಜಾನೆ ೧೦ ಘಂಟೆಗೆ ಕನ್ನಡ ಸಾಹಿತ್ಯ ಪರಿಷತ್ತು ,ಮೂಡಲಗಿ ಹಾಗೂ ಎಮ್ ಐ ಕೆ ಪಿ ಯು ಕಾಲೇಜು,...

More Articles Like This

error: Content is protected !!
Join WhatsApp Group