ಸಿಂದಗಿ; ಸರಕಾರದಲ್ಲಿ ದಾಖಲೆ ಸೃಷ್ಟಿ ಸುವ ಕೆಡಿಪಿ ಸಭೆ ಮುಖ್ಯವಾದದ್ದು ಈ ಸಭೆಗೆ ಹಾಜರಾಗುವ ಅಧಿಕಾರಿಗಳು ಮೊಬಾಯಿಲ್‌ನಲ್ಲಿ ತೊರಿಸಿದರೆ ನಡೆಯೊಲ್ಲ ಪೂರಕ ದಾಖಲೆಗಳನ್ನು ತೆಗೆದುಕೊಂಡು ಬರಬೇಕು ಸರಕಾರದಿಂದ ಸಾಕಷ್ಟು ಅನುದಾನ ತರುತ್ತಿದ್ದೇನೆ ಆದರೆ ಅಧಿಕಾರಿಗಳು ಸರಿಯಾಗಿ ವಿನಿಯೋಗಿಸಿಕೊಳ್ಳದೇ ನನ್ನ ತಲೆ ಮೇಲೆ ಹಾಕಿ ಹೋಗುತ್ತಿದ್ದರೆ ಸರಿಯಲ್ಲ ಎಂದು ಶಾಸಕ ಅಶೋಕ ಮನಗೂಳಿ ತರಾಟೆಗೆ ತೆಗೆದುಕೊಂಡರು.
ಪಟ್ಟಣದ ತಾಲೂಕು ಪಂಚಾಯತ ಸಭಾ ಭವನದಲ್ಲಿ ಹಮ್ಮಿಕೊಂಡ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಕೃಷಿ ಅಧಿಕಾರಿ ಡಾ.ಎಚ್.ವೈ.ಸಿಂಗೆಗೋಳ ಮಾತನಾಡಿ, ಕಳೆದ ಬಾರಿಗಿಂತಲೂ ಈ ಬಾರಿ ಸಕಾಲಕ್ಕೆ ಉತ್ತಮ ಮಳೆಯಾಗಿ ಒಳ್ಳೆ ಭೂಮಿ ಹದ ಮಾಡಿಕೊಂಡು ಮುಂಗಾರು ಬಿತ್ತನೆಗೆ ಅನುಕೂಲವಾಗಿದೆ ಎಂದು ಹೇಳುತ್ತಿದಂತೆ ಕೆಡಿಪಿ ಸದಸ್ಯ ಖಾದರ ಬಂಕಲಗಿ ಮಾತನಾಡಿ, ರಸಗೊಬ್ಬರದಲ್ಲಿ ಮರಳು ಮಿಶ್ರಣ ಮಾಡಿ ಮಾರಾಟವಾಗುತ್ತಿರುವ ಬಗ್ಗೆ ಆರೋಪಗಳು ಕೇಳಿ ಬರುತ್ತಿದ್ದು ಇದರ ಬಗ್ಗೆ ಯಾವ ಕ್ರಮ ತೆಗೆದುಕೊಂಡಿದ್ದೀರಿ ಎಂದು ಪ್ರಶ್ನಿಸಿದರು.
ಶಾಸಕ ಮನಗೂಳಿ ಮಾತನಾಡಿ, ೧೦-೧೫ ವರ್ಷಗಳಿಂದ ಹೆಸರು ಬಿತ್ತನೆ ಮರೆತಿದ್ದಾರೆ ಇದರ ಬಗ್ಗೆ ಮುಂಗಾರು ಮಳೆ ಪ್ರಾರಂಭವಾಗುವ ಮುನ್ನ ಜಾಗೃತಿ ಮೂಡಿಸಬೇಕಾಗಿತ್ತು. ಅಲ್ಲದೆ ಅವರು ಪ್ರತಿ ಗ್ರಾಪಂಯಲ್ಲಿ ಸರಕಾರದ ಯೋಜನೆಗಳ ಜಾಗೃತಿ ಕಾರ್ಯಕ್ರಮಗಳು ನಡೆಯಬೇಕು ನಂತರ ಪಟ್ಟಣದಲ್ಲಿ ಮುಕ್ತಾಯ ಕಾರ್ಯಕ್ರಮದಲ್ಲಿ ತಿಳಿವಳಿಕೆ ನೀಡಿ ಎಂದು ಹೇಳಿದ ಅವರು, ಈ ತಾಲೂಕಿಗೆ ೫೯ ಗ್ರಾಮಗಳು ಉಳಿದಿದ್ದು ಆಲಮೇಲ, ದೇವರ ಹಿಪ್ಪರಗಿ, ಸಿಂದಗಿ ರೈತರ ಅನುಕೂಲಕ್ಕಾಗಿ ಎಸಿ ಆಪೀಸ್, ಕೆಇಬಿ ಎಜೂಕ್ಯೂಟಿ (ಎಇಇ) ಇಂಧನ ಇಲಾಖೆ ಮಂಜೂರು, ೨೩ ವಾರ್ಡುಗಳಲ್ಲಿ ೫೬ ಸಾವಿರ ಜನಸಂಖ್ಯೆವುಳ್ಳ ಈ ಪಟ್ಟಣಕ್ಕೆ ೧ ಗ್ರಾಮೀಣ ಪೊಲೀಸ ಠಾಣೆ, ಸಿಂದಗಿಗೆ ೨ ಹೋಬಳಿ, ಆಲಮೇಲಕ್ಕೆ ೩ ಹೋಬಳಿ ಮಾಡುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ತಾಪಂ ನೂತನ ಕಟ್ಟಡ ಹಾಗೂ ಆಲಮೇಲ ತಾಪಂ ಕಟ್ಟಡಕ್ಕೆ ಮತ್ತು ಆಲಮೇಲ ಆಸ್ಪತ್ರೆಗೆ ೫೦ ಹಾಸಿಗೆಯನ್ನಾಗಿ ಮೇಲ್ದರ್ಜೆಗೆ ಏರಿಸಲು ಜಿಲ್ಲೆಯಲ್ಲಿ ನಡೆಯುವ ಸಚಿವ ಸಂಪುಟದಲ್ಲಿ ಅನುದಾನ ಮಂಜೂರು ಮಾಡುವಂತೆ ಕೆಡಿಪಿ ಸಭೆಯ ನಿರ್ಣಯ ಮೂಲಕ ಮನವಿ ಮಾಡಿಕೊಳ್ಳುವೆ ಎಂದರು.
ಚುನಾವಣೆ ಸಂದರ್ಭದಲ್ಲಿ ನೀಡಿದ ೫ ಗ್ಯಾರೆಂಟಿ ಯೋಜನೆಗಳನ್ನು ಸಮರ್ಪಕವಾಗಿ ನಿರ್ವಹಿಸಿದ್ದಾರೆ. ೨೦೧೯ರಲ್ಲಿ ಮಾಜಿ ಸಚಿವ ಎಂ.ಸಿ.ಮನಗೂಳಿ ಅವರು ಮಂಜೂರು ಮಾಡಿಸಿದ ತೋಟಗಾರಿಕೆ ಕಾಲೇಜು ಕಾರಣಾಂತರಗಳಿಂದ ರದ್ದಾಗಿತ್ತು ಮತ್ತೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಮರು ಮಂಜೂರಾತಿ ಮಾಡಿಸಿ ರೂ ೧೪೫ ಕೋಟಿ ವೆಚ್ಚದಲ್ಲಿ ಅನುಮೋದನೆ ನೀಡಿ ರೂ ೧೨೭ ಕೋಟಿಗಳ ಶೀಘ್ರದಲ್ಲಿ ಟೆಂಡರ ಕರೆಯಲಾಗಿದೆ. ಅಲ್ಲದೆ ಮಹಾರಾಷ್ಟ್ರ-ಕರ್ನಾಟಕ ಸಂಪರ್ಕ ರಸ್ತೆಯಾದ ಕಡಣಿ ಬ್ರಿಜ್‌ಗೆ ರೂ. ೪೪ ಕೋಟಿ ೫೦ ಲಕ್ಷಗಳಲ್ಲಿ ಸಚಿವ ಜಾರಕಿಹೊಳಿ ಅವರ ಅನುದಾನದಡಿ ರೂ ೨೭ ಕೋಟಿ, ಸಣ್ಣ ನೀರಾವರಿ ಇಲಾಖೆಯಿಂದ ರೂ ೧೫ ಕೋಟಿ, ಮುಖ್ಯಮಂತ್ರಿ ಅನುದಾನದಡಿ ರೂ ೨೫ ಕೋಟಿ, ಸಿಸಿ ರಸ್ತೆಗಳಿಗಾಗಿ ರೂ ೧೪ ಕೋಟಿ, ಮಸೀದಿ, ಮಂದಿರಗಳ ಜೀರ್ಣೋದ್ದಾರಕ್ಕೆ ರೂ. ೮.೬೫ ಕೋಟಿ, ಹಿಕ್ಕನಗುತ್ತಿ ವಸತಿ ಶಾಲೆಗೆ ರೂ ೧೪ ಕೋಟಿ, ಚಿಮ್ಮಲಗಿ ಏತ ನೀರಾವರಿಗೆ ರೂ ೨ ನೂರ ಕೋಟಿ ಹೀಗೆ ಸರಕರದಿಂದ ಸಾಕಷ್ಟು ಅನುದಾನ ತರುತ್ತಿದ್ದೇನೆ ಅಧಿಕಾರಿಗಳು ಅದನ್ನು ಸರಿಯಾಗಿ ಸದುಯೋಗ ಪಡಿಸಬೇಕು ಎಂದು ಸೂಚಿಸಿದರು.
ಕ್ಷೇತ್ರದ ೩೨ ಹಳ್ಳಿಗಳಲ್ಲಿ ಜೆಜೆಎಂ ಕಾಮಗಾರಿ ಮುಗಿದಿದೆ ಆದರೆ ಯಾವ ಹಳ್ಳಿಗೂ ಸಮಪರ್ಕವಾದ ಣಿರು ಪೂರೈಕೆಯಾಗುತ್ತಿಲ್ಲ. ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಪ್ರತಿಯೊಂದು ಹಳ್ಳಿಗೆ ಒಂದೂವರೆ ಕೋಟಿಯಿಂದ ೨ ಕೋಟಿಗಳವರೆಗೆ ಹಣ ಖರ್ಚು ಮಾಡುತ್ತಿದೆ ಆದರೆ ಮಿಟಿಂಗ್ ಬಂದಾಗೊಮ್ಮೆ ಹಾರಿಕೆ ಉತ್ತರ ನೀಡಿದರೆ ಜನರಿಗೆ ನಾನೇನು ಉತ್ತರ ನೀಡಬೇಕು ಎಂದು ಶಾಸಕರು ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ತಾರಾನಾಥ ನಾಯಕ ಅವರಿಗೆ ಪ್ರಶ್ನಿಸಿದರು.
ಬೋರಗಿ, ಬಂಕಲಗಿ ಗ್ರಾಮಗಳಲ್ಲಿ ಆರ್ ಎಂಸಿ ಶಾಲೆಗಳಿಗೆ ರೂ ೨.೧೦ ಕೋಟಿ ಮಿಸಲಿದ್ದಾರೆ. ಜಿಲ್ಲಾ ಪಂಚಾಯತಿಗೆ ರೂ ೨೦ ಕೋಟಿ ಅನುದಾನ ತಂದಿದ್ದೇನೆ ಸರಿಯಾಗಿ ನಿರ್ವಹಣೆ ಮಾಡಿ ಮಹಿಳೆ ಎನ್ನುವ ಕಾರಣಕ್ಕೆ ೧ ವರ್ಷದಿಂದ ಗೌರವ ಕೊಡುತ್ತಿದ್ದೇನೆ ಯಾವ ಕೆಲಸವು ಸರಿಯಾಗಿ ಮಾಡುತ್ತಿಲ್ಲ ಸರಿಯಾಗಿ ಕೆಲಸ ಮಾಡುತ್ತಿದ್ದರೆ ಮಾಡಿ ಇಲ್ಲದಿದ್ದರೆ ಇಂದೆ ರಿಲಿವ್ ಆಗಿ ಎಂದು ಜಿಪಂ ಜೆಇ ಆರಿತಿ ಅಲ್ಲಿಬಾದಿ ಅವರಿಗೆ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಬಿಇಓ ಮಹಾಂತೇಶ ಯಡ್ರಾಮಿ, ಹೆಸ್ಕಾಂ ಅದಿಕಾರಿ ಚಂದ್ರಕಾಂತ ನಾಯಕ, ಅರಣ್ಯ ಇಲಾಖೆಯ ಇರ್ಷಾದ ನೇವಾರ, ರಾಜೀವ ಬಿರಾದಾರ, ಸಿಡಿಪಿಓ ಶಂಬುಲಿಂಗ ಹಿರೆಮಠ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ವಿವರಣೆ ನೀಡಿದರು.
ಜಿಲ್ಲಾ ಕೆಡಿಪಿ ಸದಸ್ಯರಾದ ನೂರಹ್ಮದ ಅತ್ತಾರ, ಶಿವಣ್ಣ ಕೊಟಾರಗಸ್ತಿ, ಆಡಳಿತಾಧಿಕಾರಿ ನಿಂಗಪಪ್ ಗೋಠೆ, ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ, ತಾಪಂ ಎಇಇ ರಾಮು ಅಗ್ನಿ ವೇದಿಕೆ ಮೇಲಿದ್ದರು.