ರಬಕವಿ -ಬನಹಟ್ಟಿಯ ನಾಗರಿಕರ ಸಭೆ

Must Read

ದಿನಾಂಕ 27 – 11- 2022 ರವಿವಾರ ದಿವಸ ಮುಂಜಾನೆ ಹನ್ನೊಂದು ಗಂಟೆಗೆ ರಬಕವಿಯಲ್ಲಿ , ಶ್ರೀ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ರಬಕವಿ – ಬನಹಟ್ಟಿಯ ಎಲ್ಲಾ ಸಂಘ ಸಂಸ್ಥೆಗಳ ಮುಖಂಡರ, ಮಹಿಳಾ ಸಂಘಟನೆಗಳ ಸಹೋದರಿಯರ ಸಭೆಯನ್ನು ಡಾಕ್ಟರ್ ರವಿ ಜಮಖಂಡಿ ಅವರ ನೇತೃತ್ವದಲ್ಲಿ ಕರೆಯಲಾಗಿದೆ.

ಸಭೆಯಲ್ಲಿ ಕುಡಚಿ- ಬಾಗಲಕೋಟ ರೈಲು ಮಾರ್ಗದ ಯೋಜನೆಯ ಬಗ್ಗೆ ಮೂಲತಃ ಮುಧೋಳದವರೆ ಆಗಿರುವ , ರೈಲ್ವೇ ಇಲಾಖೆಯ ಮಧ್ಯ ರೇಲ್ವೆಯ ಮುಂಬೈ ಡೊಂಬಿವಲಿಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾಗಿರುವ ಗುರುರಾಜ ಪೋತನೀಸ್ ಅವರು ಎಲ್ಲರನ್ನು ಉದ್ದೇಶಿಸಿ ಮಾತನಾಡುವವರಿದ್ದಾರೆ.

ಸದರಿ ಸಭೆಯಲ್ಲಿ ದಯವಿಟ್ಟು ಎಲ್ಲರೂ ಭಾಗವಹಿಸಿ , ಕುಡಚಿ -ಬಾಗಲಕೋಟ ರೈಲು ಯೋಜನೆ ಜಾರಿಗೆ ಒತ್ತಾಯಿಸಿ ಹೋರಾಟ ಮಾಡುವ ಕುರಿತು ಚಿಂತನೆ ಮಾಡಬೇಕಾಗಿದೆ. ಕಾರಣ ಎಲ್ಲರೂ ಭಾಗವಹಿಸಬೇಕೆಂದು ಹಿರಿಯ ಪತ್ರಕರ್ತ ನೀಲಕಂಠ ದಾತಾರ ವಿನಂತಿಸಿಕೊಂಡಿದ್ದಾರೆ.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group