ಬೀದರ – ಜಿಲ್ಲೆಯಲ್ಲಿ ಭಾರೀ ಮಳೆ ಬಿದ್ದು ಬೆಳೆ ಹಾನಿಯಾಗಿರುವ ಪ್ರದೇಶಕ್ಕೆ ಸಚಿವ ರಹೀಂ ಖಾನ್ ಕಾಟಾಚಾರದ ಭೇಟಿಕೊಟ್ಟಿದ್ದು ರಸ್ತೆಯ ಮೇಲೆಯೇ ನಿಂತು ಒಂದೆರಡು ಮಾತನಾಡಿ ಸಚಿವರು ವಾಪಸ್ ಹೋದ ಘಟನೆ ನಡೆದಿದೆ.
ಈ ಬಗ್ಗೆ ಯುವಕನೊಬ್ಬ ಮಾಡಿರುವ ವಿಡಿಯೋ ವೈರಲ್ ಆಗಿದೆ. ಬೀದರದ ತಾಲೂಕಿನ ಚಿಲ್ಲರಗಿ ಗ್ರಾಮದ ಯುವಕನೊಬ್ಬ ಸಚಿವರ ಈ ಕಾಟಾಚಾರದ ಭೇಟಿಯ ಬಗ್ಗೆ ವಿಡಿಯೋ ಮಾಡಿ ಅಸಮಧಾನ ವ್ಯಕ್ತಪಡಿಸಿದ್ದಾನೆ.
ಸಚಿವ ರಹೀಂ ಬರ್ತಾರೆ, ಹೋಗ್ತಾರೆ. ಜನರ ಸಮಸ್ಯೆ ಆಲಿಸಿಲ್ಲ. ರಸ್ತೆ ಮೇಲೆ ನಿಂತು ವೀಕ್ಷಣೆ ಮಾಡಿದ್ರೆ ಜನರ ಸಮಸ್ಯೆ ಅರ್ಥ ಆಗುತ್ತದೆಯೇ ? ಮಿನಿಸ್ಟರ್ ಸಾಬ್ ನೀವು ಮತ ಕೇಳಲು ಬರುವ ರೋಡ್ ವ್ಯವಸ್ಥೆ ನೋಡಿ ಎಂದು ನೀರೇ ನಿಂತಿರುವ ರಸ್ತೆ ತೋರಿಸುವ ಯುವಕ, ಇದೇ ರಸ್ತೆಯಲ್ಲಿ ಬಂದು ಮತ ಕೇಳ್ತಿರಿ, ನಮ್ಮ ಸಮಸ್ಯೆ ಕೆಳಗಿಳಿದು ನೋಡಿ. ಬಂದ್ರು ಹೋದ್ರು ಅನ್ನೋತರ ವಿಸಿಟ್ ಮಾಡಬೇಡಿ ಎಂದು ವಿಡಿಯೋ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾನೆ
ಸಚಿವ ರಹೀಂ ಖಾನ್ ಅವರು ಬೀದರ್ ಉತ್ತರ ವಿಧಾನಸಭಾ ಕ್ಷೇತ್ರದ ಚಿಲ್ಲರಗಿ, ಜಾಂಪಾಡ್, ಚಿಮಕೋಡ್ ಕೆಲ ಗ್ರಾಮಗಳಲ್ಲಿ ವೀಕ್ಷಣೆ ಮಾಡಿದರು. ಆದರೆ ಅದರ ಬೆನ್ನಲ್ಲೆ ಸಚಿವರ ವಿರುದ್ದ ಅಸಮಾಧಾನ ಹೊರಹಾಕಿದ್ದ ಯುವಕನ ವಿಡಿಯೋ ಭಾರೀ ವೈರಲ್ ಆಗಿದೆ.
ವರದಿ : ನಂದಕುಮಾರ ಕರಂಜೆ, ಬೀದರ