ಸಿದ್ರಾಮಯ್ಯ ಫೇಲ್ ಆದಾಗ ಜಾತಿ ಒಡೆಯುತ್ತಾರೆ
ಬೀದರ – ಮತಗಳ್ಳತನದ ವಿರುದ್ಧ ಮಾತನಾಡುತ್ತಿರುವ ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ಸಾಮನ್ಯ ಜ್ಞಾನ ಇಲ್ಲವೆಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದರು.
ಮತದಾರರ ಹೆಸರು ಡಿಲೀಟ್ ಕುರಿತಂತೆ ರಾಹುಲ್ ಗಾಂಧಿ ಆರೋಪ ವಿಚಾರಕ್ಕೆ ಬೀದರನಲ್ಲಿ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದು ಆಳಂದದಲ್ಲಿ ಗೆದ್ದ ಅಭ್ಯರ್ಥಿ ಯಾರೂ, ಕಾಂಗ್ರೆಸ್ ಅಭ್ಯರ್ಥಿನೇ ತಾನೇ… ಸಿದ್ದರಾಮಯ್ಯರ ವರುಣಾ ಕ್ಷೇತ್ರದಲ್ಲೂ ಮನೆ ನಂ.ಜಿರೊ ಜಿರೊ ಇದೆ. 20-25 ರ ಮತದಾರರ ಪಟ್ಟಿ ನೋಡಿದರೆ, ಈಗಲೂ ಜಿರೋ ಜಿರೋ ಮನೆ ನಂ. ಇದೆ. ಮಹದೇವಪುರದಲ್ಲೂ ರಾಹುಲ್ ಗಾಂಧಿ ಆರೋಪ ಮಾಡಿದರು. ಬಾಡಿಗೆ ಮನೆಯಲ್ಲಿ ಇದ್ದವರು, ಮನೆ ನಂಬರ್ ಎ,ಬಿ,ಸಿ,ಡಿ ಮಾಡಿರುತ್ತಾರೆ. ಮನೆ ನಂಬರ್ ಸರಿಯಾಗಿ ಫೀಡ್ ಆಗಿರಲ್ಲ, ಡಾಟಾ ಆಪರೇಟರ್ ಸರಿಯಾಗಿ ಪೀಡ್ ಮಾಡಿರಲ್ಲ. ಮನೆ ನಂಬರ್ ಎಬಿಸಿಡಿ ಹಾಕಿದರೆ ತಗೊಳಲ್ಲಾ, ಆಗ ಜಿರೊ ಜಿರೊ ಹಾಕುತ್ತಾರೆ.
ರಾಹುಲ್ ಗಾಂಧಿ ಅವರಿಗೆ ಇದೂ ಅರ್ಥ ಆಗೋದಿಲ್ಲ ಎಂದರು.
ಕಳ್ಳತನ ಮಾಡೋರಿಗೆ ಕಳ್ಳತನದ ಕುರಿತು ಗೊತ್ತಿರುತ್ತೆ. ರಾಹುಲ್ ಗಾಂಧಿ ಅವರನ್ನೇ ತಪಾಸಣೆ ಮಾಡಿದ್ರೆ, ಎಲ್ಲವೂ ಗೊತ್ತಾಗುತ್ತದೆ. ದೇಶದ ಮೇಲೆ ಅಪನಂಬಿಕೆ ಬರುವ ರೀತಿಯಲ್ಲಿ ಮಾಡುವುದು ರಾಹುಲ್ ಗಾಂಧಿ ವಿಚಾರ. ದೇಶದಲ್ಲಿ ಕಲಹ ಸೃಷ್ಟಿ ಮಾಡಿ ಅಶಾಂತಿ ಹುಟ್ಟಿಸೋದು ಕಾಂಗ್ರೆಸ್ನ ಉದ್ದೇಶ.ಇದರ ಹಿಂದೆ ಜಾರ್ಜ್ ಸರೋಜ್ ಇದ್ದಾರೆ, ಅವರ ಉದ್ದೇಶ ಅಶಾಂತಿ ಹುಟ್ಟಿಸೋದು. ಅಮೇರಿಕಾ ಸೇರಿದಂತೆ ಬೇರೆ ಬೇರೆ ದೇಶಗಳು, ಜಾರ್ಜ್ ಸರೋಸ್ ಅಶಾಂತಿ ಹುಟ್ಟಿಸುತ್ತಾರೆ ಅಂತಾ ಹೇಳಿದ್ದಾರೆ.ಎನ್ ಜಿಓ ಮೂಲಕ ಹಣ ಹಾಕ್ತಾರೆ, ಶಾಂತಿ ಕದಡುವ ಉದ್ದೇಶಕ್ಕೆ ಜಾರ್ಜ್ ಸರೋಸ್ ಹಣ ನೀಡುತ್ತಾರೆ. ಜಾರ್ಜ್ ಸರೋಸ್ ಹಾಗೂ ರಾಹುಲ್ ಗಾಂಧಿ ಕುರಿತಾಗಿ ತನಿಖೆ ಆಗಬೇಕು ಎಂದು ಶೋಭಾ ಕರಂದ್ಲಾಜೆ ಆಗ್ರಹಿಸಿದರು.
ಫೇಲ್ ಆದಾಗ ಜಾತಿ ತರುವ ಸಿದ್ರಾಮಯ್ಯ :
ಮುಖ್ಯಮಂತ್ರಿ ಸಿದ್ಧರಾಮಯ್ಯ ಯಾವಾಗ ಫೇಲ್ಯೂರ್ ಆಗುತ್ತಾರೋ ಆವಾಗ ಜಾತಿಯನ್ನು ಒಡೆಯುವ ಕೆಲಸ ಮಾಡುತ್ತಾರೆ ಎಂದು ಕರಂದ್ಲಾಜೆ ಆರೋಪಿಸಿದರು.
2013 ರಲ್ಲಿ ವೀರಶೈವ ಲಿಂಗಾಯತರನ್ನ ಒಡೆಯುವ ಕೆಲಸ ಮಾಡಿದರು. ಈಗ ಎಲ್ಲಾ ಜಾತಿಯವರನ್ನ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಇಡೀ ಹಿಂದೂಗಳು ಒಟ್ಟಾಗಬೇಕಾಗಿದೆ. ತೆಲಂಗಾಣ ಸರ್ಕಾರಕ್ಕಿಂತಲೂ ನಮ್ಮ ಕರ್ನಾಟಕ ಸರ್ಕಾರ ಬರ್ಬಾದ್ ಆಗಿದೆ ಎಂದರು.
ರಸ್ತೆ ರಿಪೇರಿ ಮಾಡಿಸಲು ಸರ್ಕಾರದ ಬಳಿ ಹಣವಿಲ್ಲ ಬೆಂಗಳೂರಿನಿಂದ ಕಂಪನಿಗಳು ಕಿತ್ತುಕೊಂಡು ಹೋಗುತ್ತಿವೆ. ಎರಡೂವರೆ ವರ್ಷದಲ್ಲಿಯೇ ಸರ್ಕಾರ ಕೂಡ ಕಿತ್ತೋಗಿದೆ ಎಂದು ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದರು.
ವರದಿ : ನಂದಕುಮಾರ ಕರಂಜೆ, ಬೀದರ

