ಬೀದರ- ನಗರದಲ್ಲಿ ರಾತ್ರಿಯಿಂದ ಸುರಿಯುತ್ತಿರುವ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದ್ದು ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಾಲಯದ ಮುಂದೆ ಮಳೆ ನೀರು ಮಡುವಾಗಿ ನಿಂತಿದೆ.
ಬೀದರ್ ನ ಅಂಬೇಡ್ಕರ್ ವೃತ್ತದ ಬಳಿಯಿರುವ ಸಚಿವ ಈಶ್ವರ ಖಂಡ್ರೆಯವರ ಸರಕಾರಿ ಕಚೇರಿಯ ಸುತ್ತಮುತ್ತ ನೀರು ನಿಂತುಕೊಂಡಿದೆ. ಹೀಗೆ ನಿಂತ ನೀರು ಹೊರಹೋಗಲು ಯಾವುದೇ ವ್ಯವಸ್ಥೆ ಇಲ್ಲದ್ದು ಜನಾಕ್ರೋಶಕ್ಕೆ ಕಾರಣವಾಗಿದೆ.
ತಿಂಗಳಲ್ಲಿ ಎರಡ್ಮೂರು ಸಲ ಜನರ ಅಹವಾಲು ಸ್ವೀಕರಿಸುವ ಜಿಲ್ಲಾಉಸ್ತುವಾರಿ ಕಚೇರಿ ಮುಂದೆ ನಿಂತುಕೊಂಡ ಮಳೆ ನೀರು ನಿಂತು ಪರಿಸ್ಥಿತಿ ಹೀಗಾದರೆ ಜನಸಾಮಾನ್ಯರ ಪಾಡೇನು ಎಂದು ಸಾರ್ಜನಿಕರು ಮಾತನಾಡಿಕೊಳ್ಳುವಂತಾಗಿದೆ.
ಇನ್ನು ಭಾರಿ ಮಳೆಯಿಂದ ಜಿಲ್ಲೆಯ ಮಾಂಜ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿ ಮಹಾಪೂರದಂಥ ವಾತಾವರಣ ಉಂಟಾಗಿದೆ. ಜನ ಜೀವನ ಅಸ್ತವ್ಯಸ್ತಗೊಂಡಿದೆ. ಹಲವಾರು ಸೇತುವೆಗಳು ಮುಳುಗಡೆಯಾಗಿದ್ದು ಸಂಚಾರ ವ್ಯವಸ್ಥೆ ಹದಗೆಟ್ಟುಹೋಗಿದೆ.
ವರದಿ : ನಂದಕುಮಾರ ಕರಂಜೆ, ಬೀದರ

