Homeಸುದ್ದಿಗಳು"ರಾಜಲಕ್ಷ್ಮಿ ಚಿಲ್ಡ್ರನ್ ಫೌಂಡೇಶನ್" ಪ್ರತಿಭಾವಂತ ವಿದ್ಯಾರ್ಥಿಗಳ ಆಶಾಕಿರಣ

“ರಾಜಲಕ್ಷ್ಮಿ ಚಿಲ್ಡ್ರನ್ ಫೌಂಡೇಶನ್” ಪ್ರತಿಭಾವಂತ ವಿದ್ಯಾರ್ಥಿಗಳ ಆಶಾಕಿರಣ

ಇಂದು ರಾಜಲಕ್ಷ್ಮಿ ಚಿಲ್ಡ್ರನ್ ಫೌಂಡೇಶನ್ ವತಿಯಿಂದ KHPS ಶಿವಬಸವ ನಗರದಲ್ಲಿ ಶಾರದಾ ಪ್ರತಿಭಾ ಪೋಷಣ ಉಪಕ್ರಮ ಅಡಿಯಲ್ಲಿ ಅನ್ವಯಿಕ ಗಣಿತ ವಿಷಯದಲ್ಲಿ ಖ್ಯಾತ ತಾಂತ್ರಿಕ ಸಲಹೆಗಾರರೂ, ಸಂಶೋಧಕರು ಹಾಗೂ ಹೈದ್ರಾಬಾದ್ ಐಐಟಿಯ ನಿಕಟಪೂರ್ವ ಪ್ರಾಧ್ಯಾಪಕರಾದ ಡಾ|| ರವೀಂದ್ರ ಎನ್. ಗುರವಣ್ಣವರ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಆನ್ಲೈನ್ ತರಗತಿಗಳಿಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳೊಂದಿಗೆ ಹಾಗೂ ಪೋಷಕರೊಂದಿಗೆ ಮುಖಾಮುಖಿ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ರಾಜಲಕ್ಷ್ಮಿ ಚಿಲ್ಡ್ರನ್ ಫೌಂಡೇಶನ್ ನ ಸಂಸ್ಥಾಪಕ ನಿರ್ದೇಶಕರಾದ ಡಾ. ಶಶಿಕಾಂತ ವಾಯ್. ಕುಲಗೋಡ ಹಾಗೂ ಡಾ. ರವೀಂದ್ರ ಎನ್. ಗುರವಣ್ಣವರ ಇವರು ವಿದ್ಯಾರ್ಥಿಗಳು ಹಾಗೂ ಪೋಷಕರೊಂದಿಗೆ ಮಕ್ಕಳ ಸರ್ವತೋಮುಖ ವಿಕಾಸ ಕುರಿತಾಗಿ ಪ್ರೇರಣಾತ್ಮಕ ವಿಚಾರಗಳನ್ನು ಹಂಚಿಕೊಂಡರು.

ಬಡ ಹಾಗೂ ಸೌಲಭ್ಯವಂಚಿತ ಸರ್ಕಾರಿ ಶಾಲೆಗಳ ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯ ಭವಿತವ್ಯಕ್ಕೆ ಸೂಕ್ತ ವೇದಿಕೆಯನ್ನು ಕಲ್ಪಿಸುವ ನಿಟ್ಟಿನಲ್ಲಿ “ರಾಜಲಕ್ಷ್ಮಿ ಚಿಲ್ಡ್ರನ್ ಫೌಂಡೇಶನ್” ಕಾರ್ಯಗೈಯುತ್ತಿದೆ.

RELATED ARTICLES

Most Popular

error: Content is protected !!
Join WhatsApp Group