ಕನ್ನಡ ಮಹಿಳಾ ಸಂಘದಿಂದ ಕರ್ನಾಟಕ ರಾಜ್ಯೋತ್ಸವ ಆಚರಣೆ

Must Read

ಬೆಳಗಾವಿ : ಬೆಳಗಾವಿಯ ಕನ್ನಡ ಮಹಿಳಾ ಸಂಘದಿಂದ ಮಂಗಳವಾರ ಕರ್ನಾಟಕ ರಾಜ್ಯೋತ್ಸವವನ್ನು ಅಧ್ಧೂರಿಯಾಗಿ ಆಚರಿಸಲಾಯಿತು.

ಟಿಳಕವಾಡಿ ಕ್ಲಬ್ ನಲ್ಲಿ ನಡೆದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸಾಹಿತಿ ಸಿ ಕೆ ಜೋರಾಪುರ , ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ, ಗಣೇಶ ರೋಕಡೆ, ಯುವ ಕರ್ನಾಟಕ ರಕ್ಷಣಾ ವೇದಿಕೆಯ ಶಿವು ದೇವರವರ , ಶಿಕ್ಷಕಿ ಶುಭಾ ಹೆಗಡೆ ಆಗಮಿಸಿದ್ದರು.

ಈ ಸಂದರ್ಭದಲ್ಲಿ ಸಿ.ಕೆ ಜೋರಾಪುರ ಮಹಾಜನ ವರದಿಯ ಕುರಿತು ಮಾತನಾಡಿದರು.
ದೀಪಕ ಗುಡಗನಟ್ಟಿ, ಇಂತಹ ಸಂಘ- ಸಂಸ್ಥೆಗಳು ಸದ್ದಿಲ್ಲದೇ ಕನ್ನಡದ ಕೆಲಸ ಮಾಡುತ್ತಿವೆ. ನಾವು ನಿಮ್ಮೊಂದಿಗೆ ಯಾವಾಗಲೂ ಇದ್ದೇವೆ ಎಂದರು. ಶಿವು ದೇವರವರ ಅವರು ಕನ್ನಡಮ್ಮನ ಸೇವೆಗಾಗಿ ನಾವೆಲ್ಲಾ ಕಟಿಬಧ್ಧರಾಗಿದ್ದೇವೆ ಎಂದರು.

ಸಂಘದ ವತಿಯಿಂದ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದ ಪ್ರಾರಂಭದಲ್ಲಿ ವಿಶಾಖಾ ದೇಶಪಾಂಡೆ ಪ್ರಾರ್ಥನಾ ಗೀತೆ ಹಾಡಿದರು. ಸಂಘದ ಅಧ್ಯಕ್ಷೆ ಮಾಹೇಶ್ವರಿ ಗಾಳಿ ಸ್ವಾಗತಿಸಿದರು. ಉಪಾಧ್ಯಕ್ಷೆ ಶೀಲಾ ದೇಶಪಾಂಡೆ ಮುಖ್ಯ ಅತಿಥಿಗಳ ಪರಿಚಯ ಮಾಡಿದರು. ಶಾಂತಾ ಆಚಾರ್ಯ ಅತಿಥಿಗಳ ಪರಿಚಯ ಮಾಡಿದರು. ಭಾರತಿ ವಡವಿ ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ಸಲೋನಿ ರೇವಣಕರ ವಂದಿಸಿದರು. ರಜನಿ ರೇವಣಕರ ಕಾರ್ಯಕ್ರಮ ನಿರ್ವಹಿಸಿದರು.

ಕನ್ನಡ ಮಹಿಳಾ ಸಂಘದ ಸ್ಥಾಪಕರಾದ ರಂಜನಾ ನಾಯಕ, ರಾಜಶ್ರೀ ಕೆಂಭಾವಿ, ಹಿರಿಯ ಸದಸ್ಯೆಯರಾದ ಮಂದಾಕಿನಿ ಕುಲಕರ್ಣಿ , ಮಂಗಲಾ ಧಾರವಾಡಕರ, ಸುಧಾ ರೊಟ್ಟಿ , ವೀಣಾ ದೇಶಪಾಂಡೆ, ಬೀನಾ ರಾವ್ , ವಿಜಯಮಾಲಾ ಹರ್ದಿ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Latest News

ಡಾ.ಮಹಾಂತೇಶ ಬೀಳಗಿ ಯುವಕರಿಗೆ ಸ್ಫೂರ್ತಿ – ಮೌಲಾಲಿ ಆಲಗೂರ

ಸಿಂದಗಿ: ಸ್ಪೂರ್ತಿದಾಯಕ ಮಾತುಗಳಿಂದ ಲಕ್ಷಾಂತರ ಸ್ಪರ್ಧಾತ್ಮಕ ಓದುಗರ ಕೀರ್ತಿ ಹೆಚ್ಚಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕ, ಐಎಎಸ್ ಅಧಿಕಾರಿ ಮಹಾಂತೇಶ...

More Articles Like This

error: Content is protected !!
Join WhatsApp Group