Homeಸುದ್ದಿಗಳುಅಣ್ಣ- ತಮ್ಮಂದಿರ ಸಂಬಂಧ ಬೆಸೆಯುವ ಹಬ್ಬ ರಕ್ಷಾ ಬಂಧನ; ಹೆಗ್ಗಣದೊಡ್ಡಿ

ಅಣ್ಣ- ತಮ್ಮಂದಿರ ಸಂಬಂಧ ಬೆಸೆಯುವ ಹಬ್ಬ ರಕ್ಷಾ ಬಂಧನ; ಹೆಗ್ಗಣದೊಡ್ಡಿ

ಸಿಂದಗಿ: ನಮ್ಮ ಭಾರತ ಹಬ್ಬಗಳ ತವರೂರು ಅದರಲ್ಲಿ ಹೆಣ್ಣು ಮಕ್ಕಳು ಅತೀ ವಿಜೃಂಭಣೆಯಿಂದ ಆಚರಿಸುವ ಹಬ್ಬವೇ ನಾಗಪಂಚಮಿ ಆದರೆ ಅಣ್ಣ- ತಮ್ಮಂದಿರ ಸಂಬಂಧ ಬೆಸೆಯುವ ಹಬ್ಬ ರಕ್ಷಾ ಬಂಧನವಾಗಿದೆ ಎಂದು ಹೆಚ್.ಜಿ. ಪಿ. ಪೂ. ಕಾಲೇಜಿನ ಪ್ರಾಚಾರ್ಯ ಎ. ಆರ್. ಹೆಗ್ಗನಡೊಡ್ಡಿ ಅವರು ಹೇಳಿದರು.

ಪಟ್ಟಣದ ಜ್ಞಾನಭಾರತಿ ವಿದ್ಯಾ ಮಂದಿರದ ಆವರಣದಲ್ಲಿ ವಿಜೃಂಭಣೆಯಿಂದ ರಕ್ಷಾ ಬಂಧನ ಕಾರ್ಯಕ್ರಮ ಉದ್ಘಾಟಿಸಿ  ಮಾತನಾಡಿ, ನಮ್ಮ ಭಾರತೀಯ ಸಾಂಸ್ಕೃತಿಕ ದೇಶ ನಮ್ಮ ದೇಶ ಹಬ್ಬಗಳ ಆಚರಣೆ ಅದರದೇ ಆಗಿರುವ ಒಂದು ವಿಶೇಷ ಹಿನ್ನೆಲೆಗಳನ್ನು ಹೊಂದಿವೆ ಮತ್ತು ಇದರಿಂದ ನಮ್ಮ ಭಾರತೀಯರು ಜಗತ್ತಿನಲ್ಲೇ ವಿಶಿಷ್ಟ ವಾದ ಹೃದಯವಂತಿಕೆಯನ್ನು ಮೆರೆಯುತ್ತಿದ್ದಾರೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಪಿಎಸ್‌ಐ ಆರಿಫ್ ಮುಶಾಫಿರ್ ಮಾತನಾಡಿ, ರಕ್ತ ಸಂಬಂಧಕ್ಕೂ ಮಿತಿ ಬಂಧ ಈ ರಕ್ಷಾ ಬಂಧನ ಇದು ಕೆಲವೇ ಸ್ವಂತ ಸಹೋದರ ಸಹೋದರಿಯರು ಮಾತ್ರ ಆಚರಿಸುವ ಹಬ್ಬ ಅಲ್ಲ ಇದಕ್ಕೆ ರಕ್ತ ಸಂಬಂಧ ಇಲ್ಲ ಅಂದರು ರಕ್ಷಣೆ ಕೋರಿ ಯಾರು ಬೇಕಾದ್ರೂ ಯಾರನ್ನು ಈ ರಕ್ಷೆಯನ್ನು ಕಟ್ಟಬಹುದು ಹೀಗಾಗಿ ಇದು ಒಂದು ಒಳ್ಳೆಯ ಕಾರ್ಯಕ್ರಮವನ್ನು ಆಚರಿಸುತ್ತಿರುವ ಸಂಸ್ಥೆಯವರಿಗೆ ಅಭಿನಂದನೆಯನ್ನು ಸಲ್ಲಿಸಿದರು.

ಈ ಕಾರ್ಯಕ್ರಮದಲ್ಲಿ  ಒಂದನೇ ತರಗತಿಯಿಂದ ೧೨ ನೆಯ ತರಗತಿಯ ವರೆಗಿನ ೬೦೦ ಕ್ಕು ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಧರ್ಮದಲ್ಲಿ ಮುಸ್ಲಿಂ ಆದರೂ ಕೂಡ ಇನ್ಸ್ಪೆಕ್ಟರ್ ಸಾಹೇಬರು ಹಣೆಯಮೇಲೆ ಉದ್ದವಾಗಿ ಕುಂಕುಮ ಹಚ್ಚಿಕೊಂಡು ಭಕ್ತಿ ಭಾವದಿಂದ ರಕ್ಷೆಯನ್ನು ಕಟ್ಟಿಸಿಕೊಂಡಿದ್ದು ಸಭೆಯಲ್ಲಿ ವಿಶೇಷವಾಗಿ ಕಂಡು ಬಂತು.

ಸಾನ್ನಿಧ್ಯ ವಹಿಸಿದ್ದ ಸಾರಂಗಮಠದ ನೂತನ ಉತ್ತರಾಧಿಕಾರಿಗಳು ಡಾ. ವಿಶ್ವಪ್ರಭು ಶಿವಾಚಾರ್ಯರು ನಾನು ಸಿಂದಗಿ ಬಂದ್ಮೇಲೆ ಇದು ನಾನು ಭಾಗವಹಿಸಿರುವ ಮೊಟ್ಟ ಮೊದಲ ರಕ್ಷಾ ಬಂಧನ ಕಾರ್ಯಕ್ರಮ ಎಂದು. ಈ ರೀತಿಯ ಕಾರ್ಯಕ್ರಮಗಳ ಆಚರಣೆ ಇವತ್ತಿನ ದಿನಮಾನಕ್ಕೆ ಉಪಸ್ಥಿತರಿದ್ದರು ವಂದನಾರ್ಪಣೆಯನ್ನು ಮಾಡಿದರು

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group