ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಅಪಾರ ಪ್ರತಿಭೆಯ ಕವಿಗಳಿದ್ದು ಅವರ ಜನಮನ ಸೆಳೆಯುವ ಕವಿತೆಗಳನ್ನು ಕನ್ನಡ ಚಲನ ಚಿತ್ರಗಳಿಗೆ ಅಳವಡಿಸಿಕೊಳ್ಳಬೇಕು. ಈ ಬಗ್ಗೆ ಚಲನಚಿತ್ರ ನಿರ್ಮಾಪಕರ ಹಾಗೂ ನಿರ್ದೇಶಕರ ಗಮನ ಸೆಳೆಯಬೇಕೆಂದು ಹೆಸರಾಂತ ಗೀತ ರಚನಕಾರ ಕವಿರಾಜ್ ಅವರನ್ನು ಭೇಟಿಮಾಡಿ ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಭೇರ್ಯ ರಾಮಕುಮಾರ್ ಮನವಿ ಮಾಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ನೂರಾರು ಲೇಖಕ, ಲೇಖಕಿಯರಿದ್ದಾರೆ. ಅವರ ರಚನೆಗಳು ಸರಳವಾಗಿ ಮನಸೆಳೆಯುವಂತಿವೆ. ಆದರೆ ಇವರೆಲ್ಲರೂ ಅವಕಾಶ ವಂಚಿತರಾಗಿದ್ದಾರೆ. ಇಂತವರಿಗೆ ಚಿತ್ರರಂಗದಲ್ಲಿ ಸೂಕ್ತ ಅವಕಾಶ ಕಲ್ಪಿಸಬೇಕು ಎಂದವರು ಕವಿರಾಜ್ ಅವರನ್ನು ಒತ್ತಾಯಿಸಿದರು. ಇದೊಂದು ಅತ್ಯುತ್ತಮ ಸಲಹೆ.ಈ ಬಗ್ಗೆ ಆಲೋಚಿಸುವುದಾಗಿ ಕವಿರಾಜ್ ತಿಳಿಸಿದರು.
ಕೊಡಗಿನ ಕವಿ ಎಂ. ಡಿ. ಅಯ್ಯಪ್ಪ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

