( ಮೈಸೂರಿನ ಗ್ಯಾಂಗ್ ರೇಪ್ ಕುರಿತು ಬರೆದ ಒಂದು ಲೇಖನ )
ಅತ್ಯಾಚಾರ ಎಂಬುದು ಇಂದಿನ ದಿನಗಳಲ್ಲಿ ಪಾಲಕರನ್ನು ಕಾಡುತ್ತಿರುವ ಮುಖ್ಯ ಪಾತ್ರ. ಪಾಲಕರಿಗೆ ತಮ್ಮ ಮಕ್ಕಳು ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳು ಹೊರಗೆ ಹೋಗಿ ಪುನಃ ಮನೆ ಸೇರುವವರೆಗೆ ಜೀವವನ್ನು ಅಂಗೈಯಲ್ಲಿ ಹಿಡಿದು ಕಾಯುತ್ತಾರೆ. ಏಕೆ ಹೀಗೆ ಎಂದು ಒಮ್ಮೆ ಆಲೋಚಿಸಿದರೆ,ನಾವೇನು ಕಲಿಸುತ್ತಿದ್ದೇವೆ.
ನಮ್ಮ ಮಕ್ಕಳು ಏನು ಕಲಿಯುತ್ತಿದ್ದಾರೆ, ಎಂಬುದನ್ನು ತಿಳಿಯಬೇಕಿದೆ. ಇದೆಲ್ಲವೂ ಹೇಗೆ ಸಾಧ್ಯ ಎಂದು ಒಮ್ಮೆ ಯೋಚಿಸಿದರೆ,ತಪ್ಪು ನಮ್ಮದೇ. ಕಾರಣ ನಮ್ಮ ಮಕ್ಕಳಿಗೆ ನಾವು ಕೊಡುತ್ತಿರುವ ಶಿಕ್ಷಣ ಇದೇನೆ. ನಮ್ಮ ಮಕ್ಕಳು ಅಮೋಘ ಸಾಧನೆ ಮಾಡಬೇಕು ನಿಜ. ಆದರೆ ಅದು ನಮ್ಮೊಳಗಿನ ಬಾಂಧವ್ಯವನ್ನು ಗಟ್ಟಿಗೊಳಿಸಲು ಶ್ರಮಿಸಬೇಕು. ನಾವು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ನಡೆಯುವ ಎಲ್ಲಾ ರೀತಿಯ ಪ್ರಮುಖ ವಿಷಯಗಳ ಕುರಿತು ಮಾಹಿತಿಯನ್ನು ಪಡೆಯುತ್ತೇವೆ.
ಜೊತೆಗೆ ಆ ಸಂಸ್ಕೃತಿಯನ್ನು ಬಿಂಬಿಸುವ ಉದ್ದೇಶವನ್ನು ಹೊಂದಲು ಅವಕಾಶ ನೀಡುತ್ತೇವೆ. ಆದರೆ ಇದು ಭಾರತ. ಇಲ್ಲಿ ಮುಕ್ಕೋಟಿ ದೇವತೆಗಳ ನೆಲೆಯಿದೆ. ಆ ಸಂಸ್ಕ್ರತಿಯನ್ನು ಆರಾಧಿಸೋಣ, ಗೌರವಿಸೋಣ. ಆದರೆ ಅದೇ ನಮ್ಮ ನೆಲದ ರಾಜ್ಯವಾಳಲು ಅವಕಾಶ ಬೇಡ.
ನಮ್ಮ ದೇಶದಲ್ಲಿ ನಮ್ಮದೇ ಸ್ವಂತ ಸಂಸ್ಕ್ರತಿಯಿದೆ.ನಮ್ಮ ಮಕ್ಕಳಿಗೆ ಅಂಕಲ್, ಆಂಟಿ, ಬ್ರದರ್, ಸಿಸ್ಟರ್, ಕಸಿನ್ ಇವುಗಳ ಬದಲಾಗಿ ಅಮ್ಮ, ಚಿಕ್ಕಮ್ಮ, ಅತ್ತೆ,ಮಾವ ಎನ್ನುವುದನ್ನು ಕಲಿಸೋಣ.ಆಗ ಈ ಅತ್ಯಾಚಾರ ಎನ್ನುವ ಪದ ಇರುವುದಿಲ್ಲ. ಜೊತೆಗೆ ನಮ್ಮ ಮಕ್ಕಳಿಗೆ ಬಾಲ್ಯದಲ್ಲಿ ಸಂಬಂಧಗಳ ಬೆಲೆ ತಿಳಿಸೋಣ. ನಾವು ಮೊದಲು ಮಕ್ಕಳೊಂದಿಗೆ ಬೆರೆತು ಅವರಿಗೆ ನಿಜವಾದ ಮಾನವೀಯತೆಯ ಆದರ್ಶದ ಮೌಲ್ಯಗಳನ್ನು ತುಂಬೋಣ.
ಸುತ್ತಲಿನ ಪ್ರಪಂಚದಲ್ಲಿ ನಡೆಯುವ ನೈತಿಕ ಮೌಲ್ಯಗಳ ಬಗ್ಗೆ ಅರಿವು ಮೂಡಿಸಬೇಕಿದೆ. ಮಾನವತೆ ಸಾರುವ ಅನೇಕ ವ್ಯಕ್ತಿಗಳನ್ನು ಪರಿಚಯಿಸಬೇಕಿದೆ. ಸಂಬಂಧಗಳನ್ನು ಬೆಸೆಯಬೇಕಿದೆ. ತಾತ್ವಿಕವಾಗಿ ಆಲೋಚನಾ ಪದ್ದತಿಗಳನ್ನು ಅನುಸರಿಸಬೇಕಿದೆ. ನಾವು ಯಾವುದು ಚೆನ್ನಾಗಿದೆ ಎಂದು ನಂಬಿದ್ದೇವೆಯೋ ಅದೆಲ್ಲವೂ ಟೊಳ್ಳು ಎಂಬುದನ್ನು ಬಿಂಬಿಸಬೇಕು.ಮೊದಲು ಭಾಷೆ, ಉಡುಗೆ, ತೊಡುಗೆ, ಆಹಾರ ಅಭ್ಯಾಸಗಳನ್ನು ಬದಲಿಸಬೇಕಿದೆ.ಲೈಂಗಿಕ ಶಿಕ್ಷಣದ ಬಗ್ಗೆ ಹೆಚ್ಚು ಗಮನ ನೀಡಬೇಕಿದೆ.
ಹದಿ ಹರೆಯದ ಮಕ್ಕಳನ್ನು ರೂಪಿಸಲು ಪಣತೊಡಬೇಕಿದೆ. ಅವರ ಆಸೆ ಆಕಾಂಕ್ಷೆಗಳನ್ನು ತಿಳಿದು ಅವುಗಳನ್ನು ಧನಾತ್ಮಕವಾಗಿ ಕಾಣುವಂತೆ ಮಾಡಬೇಕಿದೆ. ಆಧ್ಯಾತ್ಮಿಕ ನೆಲೆಗಟ್ಟಿನ ಮೇಲೆ ಮಕ್ಕಳನ್ನು ರೂಪಿಸಬೇಕಿದೆ. ಚಲನಚಿತ್ರ, ಧಾರಾವಾಹಿಗಳಲ್ಲಿ ಬರುವ ಪಾತ್ರಗಳು ಕೇವಲ ಒಂದಷ್ಟು ಕಾಲ ಮನೋರಂಜನೆ ಎನ್ನುವುದನ್ನು ಸಾಬೀತುಪಡಿಸಬೇಕು. ಅವೆಲ್ಲವೂ ಕೇವಲ ಒಂದು ಮನರಂಜನೆ ನೀಡುವ ಕ್ಷಣಿಕ ಪಾತ್ರಗಳು ಎನ್ನುವುದು ತಿಳಿಸಬೇಕು. ಮಕ್ಕಳು ಅವುಗಳಲ್ಲಿ ಪರಕಾಯ ಪ್ರವೇಶ ಮಾಡದಂತೆ ನೋಡಿಕೊಳ್ಳಬೇಕಿದೆ.
ಆಲೋಚಿಸುವ ರೀತಿ ಒಂದು ಹೆಣ್ಣು ಮಗಳನ್ನು ಕಾಣುವ ರೀತಿ ಬದಲಾಗಬೇಕು.
ಒಂದು ಹೆಣ್ಣನ್ನು ಭೋಗದ ವಸ್ತುವಾಗಿ ನೋಡದೆ,ಅವಳಲ್ಲಿಯೂ ನಮ್ಮ ತಾಯಿ, ಅಕ್ಕ-ತಂಗಿ ಇವರನ್ನು ಕಾಣುವ ಮನೋಭಾವ ಬೆಳೆಸಬೇಕು. ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಃ ಎನ್ನುವ ವೇದೋಕ್ತಿಯನ್ನು ತಿಳಿಸಬೇಕು. ಆಗ ನಿಜವಾದ ಭಾರತೀಯ ಮಕ್ಕಳು ದೇಶದಲ್ಲಿ ಜನಿಸುತ್ತಾರೆ. ಅತ್ಯಾಚಾರಕ್ಕೆ ಅಂತ್ಯ ಸಿಗುತ್ತದೆ. ಕೇವಲ ಯಾವುದೋ ಒಂದು ಮಗು ಅತ್ಯಾಚಾರಕ್ಕೆ ಬಲಿಯಾದಳು,ಎಂದು ಸುದ್ದಿ ವಾಹಿನಿಗಳಲ್ಲಿ ಓದಿ ಒಂದೆರಡು ದಿನಗಳ ಕಾಲ ಅದೇ ಮಾತನಾಡಿ ಸುಮ್ಮನಿದ್ದು ಬಿಡುವುದು.
ನಮ್ಮ ಕೆಲಸವಾಗಿದೆ.ಆ ಕುಟುಂಬಕ್ಕೆ ಒಂದಷ್ಟು ಆರ್ಥಿಕ ಸಹಾಯ ಮಾಡಿ ಕೈ ತೊಳೆದು ಬಿಡುವುದಲ್ಲ. ಒಂದು ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡುವ ಯಾವುದೇ ವ್ಯಕ್ತಿ ಅತ್ಯಾಚಾರ ಮಾಡಲು ಅವಕಾಶವನ್ನು ನೀಡಬಹುದೆ. ಹೋಗುತ್ತಿರುವುದು.ನಮ್ಮ ನೆಲದ ಹೆಣ್ಣಿನ ಮಾನ ಇದು ನೆನಪಲ್ಲಿರಲಿ.
ಅತ್ಯಾಚಾರ ಮಾಡುವ ಮೊದಲು ಅವಳಲ್ಲಿ ನಮ್ಮ ಮನೆಯ ಕುಟುಂಬದ ಸದಸ್ಯರನ್ನು ಅವಳಲ್ಲಿ ಕಾಣೋಣ.ನಮ್ಮ ಮನೆಯ ಹೆಣ್ಣುಮಕ್ಕಳಿಗೆ ಈ ಗತಿ ಬಂದಿದ್ದರೆ ನಾನೇನು ಮಾಡಬಲ್ಲೆ ಎಂಬುದು ನನಗರಿವಾಗಬೇಕು.ಆಗ ಈ ಅತ್ಯಾಚಾರ ಎನ್ನುವ ಪದ ಇರುವುದಿಲ್ಲ.
ಶ್ರೀ ಇಂಗಳಗಿ ದಾವಲಮಲೀಕ