spot_img
spot_img

“ಮೌನಂ ಸಮ್ಮತಿ ಲಕ್ಷಣಂ” ನಮ್ಮ ಜೀವನದಲ್ಲಿ ಮೌನವಾಗಿದ್ದಷ್ಟೂ ಶಾಂತಿ ಸಿಗುತ್ತದೆ

Must Read

- Advertisement -

ಎನ್ನುತ್ತಿದ್ದರು ಗುರು ಹಿರಿಯರು. ಆದರೆ ಈಗ ಕಾಲ ಬದಲಾಗಿದೆ. ಮಾತನಾಡದಿದ್ದರೆ ತುಳಿದು ಆಳೋರೆ ಹೆಚ್ಚು. ಸಂಸಾರಿಗಳಿಗಿರುವಷ್ಟು ಅನುಭವ ಜ್ಞಾನ ಸಂನ್ಯಾಸಿಗಳಿಗಿಲ್ಲದ ಕಾಲದಲ್ಲಿ ನಾವಿದ್ದೇವೆ.ಯಾರಿಗೆ ಅಧಿಕಾರ, ಸ್ಥಾನಮಾನ, ಹಣ, ಹೆಸರು ಇರುವುದೋ ಅವರಲ್ಲಿ ಭೌತಿಕಾಸಕ್ತಿ ಹೆಚ್ಚಾಗಿದ್ದು ರಾಜಕೀಯವೂ ಇರುತ್ತದಂತೆ.

ಈ ಕಾರಣಕ್ಕಾಗಿಯೇ ಹಿಂದಿನ ಸಂನ್ಯಾಸಿಗಳು ಅದರಿಂದ ದೂರ ಉಳಿದು ಸ್ವತಂತ್ರ ಜೀವನ ನಡೆಸಿಕೊಂಡು ರಾಜ ಮಹಾರಾಜರಿಗೆ ಧರ್ಮ ಬೋಧನೆ ಮಾಡುತ್ತಾ ಮಹಾತ್ಮರಾಗಿದ್ದರು. “ಮಾತಿಗಿಂತ ಕೃತಿಯೇ ಮೇಲು” ಎನ್ನುತ್ತಾರೆ. “ಮಾತು ಬೆಳ್ಳಿ ಮೌನ ಬಂಗಾರ” ಇವೆಲ್ಲವೂ ಸ್ತ್ರೀ ಶಕ್ತಿಯನ್ನು ಹಿಡಿದಿಟ್ಟುಕೊಳ್ಳಲು ಬಳಸುತ್ತಿದ್ದ ಅಸ್ತ್ರ ಶಸ್ತ್ರ ವಾಗಿದ್ದ ಕಾಲವಿತ್ತು. ಆದರೆ, ಯಾವಾಗ ಮೌನ ಅತಿಯಾಯಿತೋ ಭೂಮಿಯನ್ನು ಆಳಿ ಅಳಿಸುವ ಅಸುರರು ಬೆಳೆಯುತ್ತಾ ಹೋದರು.

ಇನ್ನು ತಿಳಿಸಿದವರು ದೇವರಾದರು. ಮಧ್ಯೆ ನಿಂತು ಜೀವನದ ಸತ್ಯ ಅರ್ಥ ಆಗದೆ ಕಷ್ಟ ಅನುಭವಿಸಿದ ಸ್ತ್ರೀ ಜೀವ ಮತ್ತೆ ಹುಟ್ಟಿ ಮಾರಿಯಾಗಿ ಮುಂದೆ ಬಂದಾಗ ಮಾತನಾಡದ ಮೂಕರೂ ಮಾತನಾಡಬೇಕಾಯಿತು. ಕಾರಣ ಮಾತು ಬಲ್ಲವನಿಗೆ ಜಗಳವಿಲ್ಲ ಎನ್ನುವ ಹಾಗೆ ಮಾತಿನಲ್ಲಿ ಸತ್ಯ ಧರ್ಮವಿದ್ದಾಗ ಅದನ್ನು ಮೌನದಿಂದ ಕೇಳಿಸಿಕೊಂಡು ಅನುಸರಿಸುವುದು ಸರಿ, ಆದರೆ ಸತ್ಯ ತಿಳಿದೂ ಸಹಕಾರ ನೀಡದೆ ಅಸತ್ಯ ವನ್ನು ಬೆಳೆಸಿಕೊಂಡರೆ ಒಮ್ಮೆ ಸತ್ಯವೆ ಸ್ಪೋಟಕವಸ್ತುವಾಗಿ ಜೀವ ತೆಗೆಯುತ್ತದೆ.

- Advertisement -

ಸತ್ಯವೆ ದೇವರು ಎನ್ನುವವರೊಮ್ಮೆ ನಾವೆಷ್ಟು ಸತ್ಯವಂತರೆಂದು ಆತ್ಮಾವಲೋಕನ ನಡೆಸಿಕೊಂಡರೆ ಸಾಕು. ನನ್ನ ಅಸತ್ಯಕ್ಕೆ ಸಿಗುತ್ತಿರುವ ಮಾನ ಮರ್ಯಾದೆ ಭೌತಿಕದಲ್ಲಿ ಆಸ್ತಿ ಆಗುತ್ತದೆ. ಅದೇ ಆಧ್ಯಾತ್ಮದಲ್ಲಿ ಅವನತಿಯ ದಾರಿ ಹಿಡಿದಿರೋದೂ ಸತ್ಯ. ಧರ್ಮದ ವಿಚಾರದಲ್ಲಿ ನಮ್ಮಲ್ಲಿಬಹಳ ಭಿನ್ನಾಭಿಪ್ರಾಯವಿದೆ. ಇರೋದು ಎರಡು ಧರ್ಮ ಸುರಾಸುರರ ನಡುವಿರುವ ಮಾನವ ಇದನ್ನು ಅರ್ಥ ಮಾಡಿಕೊಂಡರೆ ತನ್ನ ಜೀವರಕ್ಷಣೆಗಾಗಿ ನಾನು ಯಾರ ಧರ್ಮದ ಪರ ,ವಿರೋಧ ನಿಂತಿದ್ದೇನೆ.

ಇದರ ಹಿಂದಿನ ಶಕ್ತಿ ಯಾವುದು? ಇದು ಆತ್ಮವಂಚನೆಯೆ? ಸತ್ಯಕ್ಕೆ ಹತ್ತಿರವಿದೆಯೆ? ನಾನ್ಯಾರು ? ಈ ಪ್ರಶ್ನೆಗಳನ್ನು ಪ್ರತಿಯೊಬ್ಬರೂ ಕೇಳಿಕೊಳ್ಳಬೇಕಾಗಿದೆ. ಕಲಿಪ್ರಭಾವದಲ್ಲಿ ಜೀವನವೇ ಒಂದು ಪ್ರದರ್ಶನ ದ ವಸ್ತುವಾಗುತ್ತಿದೆ. ಇಲ್ಲಿ ಯಾರಿಗೆ ಪ್ರದರ್ಶನ ಮಾಡುತ್ತಿರುವುದೆನ್ನುವ ಅರಿವಿನ ಕೊರತೆಯಿದೆ. ಪ್ರದಕ್ಷಿಣೆ ಪರಮಾತ್ಮನಿಗೆ ಹಾಕುತ್ತಿದ್ದರೆ ಮನಸ್ಸು ಒಳಗಿರುತ್ತದೆ. ಇಲ್ಲವಾದರೆ ಹೊರಗೆ ನಡೆದು ಭೂಮಿಯನ್ನು ಪ್ರದರ್ಶಣೆ ಮಾಡುತ್ತದೆ. ಭೂ ಪ್ರದಕ್ಷಿಣೆ ಮಾನವನಿಗೆ ಮಾನವೀಯತೆ ಕಡೆಗೆ ನಡೆಸಿದ್ದರೆ ಉತ್ತಮ ಇಲ್ಲವಾದರೆ ಇದೊಂದು ವ್ಯರ್ಥ ಪ್ರದರ್ಶನವಾಗುತ್ತದೆ.

“ಕೋಶ ಓದು ದೇಶ ಸುತ್ತು” ನಿಜ ಕೋಶ ಓದಿದವರೆಲ್ಲ ದೇಶ ಸುತ್ತಿಲ್ಲ. ದೇಶ ಸುತ್ತಿದವರಿಗೆ ಕೋಶದಲ್ಲಿದ್ದ ಸತ್ಯ ಅರ್ಥ ವಾಗಿಲ್ಲ. ಆದರೆ ಇಬ್ಬರೂ ಭೂಮಿಯ ಮೇಲಿದ್ದು ತಮ್ಮದೇ ಆದ ಜ್ಞಾನವನ್ನು ಇಳಿಸಿದ್ದಾರೆ. ಇವೆರಡೂ ವಿರುದ್ದ ದಿಕ್ಕಿನಲ್ಲಿ ನಡೆದ ಕಾರಣ ಮಾನವ ಅದನ್ನು ಸತ್ಯವೆಂದರಿತು ನಡೆದು ಮಧ್ಯೆ ಸಿಲುಕಿದ್ದಾನೆ. ಮನುಕುಲವಿರೋದೆ ಮಧ್ಯದಲ್ಲಿ. ಪಿತೃಗಳ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಅವರ ಮೂಲ  ಧರ್ಮ ಕರ್ಮವನ್ನು ಮಕ್ಕಳಾದವರು ಉತ್ತಮ ಜ್ಞಾನದಿಂದ ಬೆಳೆಸಿ ಉಳಿಸಬೇಕೆಂದು ಆಧ್ಯಾತ್ಮ ತಿಳಿಸುತ್ತದೆ.

- Advertisement -

ಆದರೆ, ಈಗ ಪಿತೃಗಳೇ ಮಕ್ಕಳಿಗೆ ನಿಮ್ಮ ಪಾಡಿಗೆ ನೀವು ಮುಂದೆ ನಡೆಯಿರಿ ಎನ್ನುವ ಶಿಕ್ಷಣ ನೀಡಿ ಸ್ವತಂತ್ರ ವನ್ನು ಸ್ವೇಚ್ಚಾಚಾರಕ್ಕೆ ಬಳಸಿದರೂ ಕೇಳೋರಿಲ್ಲ ಕೆಲವು ಸಂದರ್ಭಗಳಲ್ಲಿ ಮೌನವೇ ಉತ್ತಮ. ಆದರೆ ಕೆಲವು ಸಂಧರ್ಭದಲ್ಲಿ ಮಾತು ಅಗತ್ಯವಿದೆ. ಮಾನವನಿಗೆ ಮಾತನಾಡುವ ಶಕ್ತಿ ಪರಮಾತ್ಮ ಕೊಟ್ಟಿರುವಾಗ ಅದನ್ನು ಸದ್ಬಳಕೆ ಮಾಡಿಕೊಳ್ಳದಿದ್ದರೆ ಅದು ಅವನಿಗೆ ಮುಳುವಾಗುತ್ತದೆ. ಮಕ್ಕಳು ತಪ್ಪುದಾರಿ ಹಿಡಿದಾಗಲೂ ಮೌನವಾಗಿದ್ದರೆ ಪೋಷಕರನ್ನು ಮುಂದೆ ಆಳುವಾಗ ಮಾತನಾಡಿದರೂ ಪ್ರಯೋಜನವಾಗೋದಿಲ್ಲ.

ಹೀಗಾಗಿ ಆಧ್ಯಾತ್ಮದ ವಿಚಾರ ಯಾರಿಂದಲಾದರೂ ಹರಿದುಬರುತ್ತಿದೆ ಎಂದಾಗ ಆಧ್ಯಾತ್ಮ ಚಿಂತಕರು,ಗುರು ಹಿರಿಯರಾದವರು ಅವರನ್ನು ಕರೆದು ಕೂರಿಸಿ ಸರಿ ತಪ್ಪು ಗಳ ಬಗ್ಗೆ ತಿಳಿಸಬೇಕು.ಇಲ್ಲವಾದರೆ ನಮ್ಮಲ್ಲಿರುವ ತಪ್ಪನ್ನು ಸರಿಪಡಿಸಿಕೊಂಡು ಸಹಕಾರ ನೀಡಬೇಕು.ಎರಡೂ ಮಾಡದೆ ಮೌನವಾಗಿದ್ದರೆ ಭೂಮಿ ಮೇಲಿರುವ ತಪ್ಪುಹೆಚ್ಚಾಗುತ್ತದೆ.

ಅದೇ ಮುಂದೆ ದೊಡ್ಡ ಸಮಸ್ಯೆಯಾಗಿ ಎದುರಾದಾಗ ಮೌನದಿಂದಾದ ನಷ್ಟ ಕಷ್ಟ ಜೀವ ಅನುಭವಿಸಲೇಬೇಕು. ಒಟ್ಟಿನಲ್ಲಿ ಇಲ್ಲಿ ಯಾರೂ ಸ್ವತಂತ್ರ ಜ್ಞಾನ ಪಡೆದಿಲ್ಲ. ಎಲ್ಲಾ ಪರಮಾತ್ಮನ ಪ್ರೇರಣೆಯೇ ಸರಿ. ಮೌನವಾಗಿರುವಂತೆ ಮಾಡುವುದೂ ಪರಮಾತ್ಮ ಎಂದು ಹೇಳುವವರು ನಾವು ಇದೇ ವಿಚಾರವನ್ನು ನಮ್ಮವರು ತಿಳಿಸಿದಾಗ ಹೀಗೇ ಇರುತ್ತಿದ್ದೇವೆಯೇ? ಎಂಬ ಪ್ರಶ್ನೆ ಹಾಕಿಕೊಂಡರೆ ಸಾಕು.ಖಂಡಿತವಾಗಿಯೂ ಮೌನವಾಗಿ ಇರುತ್ತಿರಲಿಲ್ಲ.

ಹಾಗಾಗಿ ನಮ್ಮಲ್ಲಿ ಬೇಧಭಾವ ವಿದೆ ಎಂದರ್ಥ. ನಾನು ಹೇಳುವುದು ಸರಿ ಎಂದರೆ ಅದೇ ವಿಚಾರ ಇನ್ನೊಬ್ಬರು ಹೇಳೋದರಲ್ಲಿ ತಪ್ಪು ಕಾಣಿಸಿದರೆ ಸರಿ ಯಾವುದು? ತಪ್ಪು ಎಲ್ಲಿದೆ? ಪರಮಾತ್ಮನೆ ಎಲ್ಲರಲ್ಲಿದ್ದು ನಡೆಸುವುದಾದಾಗ ಯಾಕೆ ಎಲ್ಲರೂ ಒಂದೇ ಸಮನಾಗಿಲ್ಲ? ಇವೆಲ್ಲದರ ಹಿಂದೆ ಒಂದು ರಾಜಕೀಯವಿದೆ. ಇನ್ನೊಂದು ರಾಜಯೋಗವಿದೆ ರಾಜಕೀಯದಲ್ಲಿ ಮೌನವಿಲ್ಲ. ರಾಜಯೋಗದಲ್ಲಿ ಮೌನವಿದೆ. ಆದರೆ ಇವೆರಡೂ ಭೂಮಿಯ ಧರ್ಮವನ್ನು ಉಳಿಸುವತ್ತ ನಡೆದಾಗಲೆ ಉತ್ತಮ ಜೀವನವಿದೆ. ಜೀವಕ್ಕೆ ಮುಕ್ತಿ ಸಿಗಲು ರಾಜಯೋಗದ ಅಗತ್ಯವಿದೆ.

ಈಗಿನ ಭಾರತೀಯರ ಸ್ಥಿತಿಗೆ ಕಾರಣವೆ ಅಸತ್ಯದ ,ಅಧರ್ಮದ ರಾಜಕೀಯಕ್ಕೆ ಸಹಕಾರ ನೀಡಿ ಸತ್ಯ ತಿಳಿದೂ ಮೌನವಾಗಿದ್ದದ್ದು. ಎಲ್ಲಾ ನಡೆದೇ ಹೋಗಿದೆ. ಈಗಲಾದರೂ ಮೌನ ಮುರಿದು ಸತ್ಯವನ್ನು ಅರ್ಥ ಮಾಡಿಕೊಂಡರೆ ನಮ್ಮ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚ ಮಾಡಿಕೊಳ್ಳಲು ಸಾಧ್ಯ. ಇಡೀ ವಿಶ್ವ ಬದಲಾಗದು, ದೇಶವೂ ಬದಲಾಗದು, ನಾನು ಬದಲಾಗಬಹುದು.ಪ್ರಯತ್ನ ನಮ್ಮದು ಫಲ ಭಗವಂತನದು.

ಇದನ್ನು ಇಂದಿನ ಕೆಲವು ಮಹಾ ಗುರು ಹಿರಿಯರೆನ್ನಿಸಿಕೊಂಡವರು ಗಮನಿಸಿದಾಗಲೇ ಭಾರತ ತನ್ನತನವನ್ನು ಮತ್ತೆ ಪಡೆಯಬಹುದಷ್ಟೆ. ಇಲ್ಲಿ ಸ್ತ್ರೀ ಶಕ್ತಿ ದೇಶದ ಪ್ರಗತಿಗೆ ಆಧ್ಯಾತ್ಮದ ಪ್ರಕಾರ ನಡೆಯುವಳೋ ಇಲ್ಲವೋ ಅವಳಿಗೆ ಕೊಡುವ ಸಹಕಾರ, ಶಿಕ್ಷಣದ ಮೇಲೆ ನಿಂತಿದೆ. ಭೂಮಿಯನ್ನು ಸದ್ಬಳಕೆ ಮಾಡಿಕೊಳ್ಳಲು ಕಲಿಸಬೇಕಾದ ಸ್ತ್ರೀ ಗೇ ಜ್ಞಾನ ಯಾವುದು ಅಜ್ಞಾನ ಯಾವುದು, ಶ್ರೇಷ್ಠ ಕನಿಷ್ಠ ಗಳ ಅರಿವಿಲ್ಲದ ಶಿಕ್ಷಣ ನೀಡಿ, ಮನರಂಜನೆಯ ಮಾಧ್ಯಮ ಮಾಡಿಕೊಂಡಾಗಲೆ ಭೂಕಂಪ, ಪ್ರಕೃತಿವಿಕೋಪ, ಜೀವಹಾನಿ, ಪ್ರಾಣಹಾನಿ,ಮಾರಿ ದರ್ಶನ.

ಇವೆಲ್ಲವನ್ನೂ ಮೌನವಾಗಿ ಸಹಿಸಿಕೊಳ್ಳಲು ಯಾವ ಮಾನವನಿಗೂ ಅಸಾಧ್ಯ. ತಮ್ಮ ಸುರಕ್ಷೆಗಾಗಿ ಜನರನ್ನು ಬಂಧನದಲ್ಲಿಟ್ಟು ಆಳುವವರೆ ಅಸುರರು. ಇದು ಎಲ್ಲರೊಳಗೂ ಇರುವ ಗುಣವಾಗಿದೆ. ಸತ್ಯ ಧರ್ಮ ಯಾರೋ ಒಬ್ಬರ ಕಟ್ಟುಪಾಡುಗಳಾಗದೆ ಎಲ್ಲರ ಆಸ್ತಿಯಾಗೋದಕ್ಕೆ ಏಕ ರೀತಿ ಶಿಕ್ಷಣದ ಅಗತ್ಯವಿದೆ. ಅವರವರ ಮೂಲವನ್ನರಿತರೆ ಅದರಿಂದ ಸಮಾಜಕ್ಕೆ ಕೇಡಾಗದಿದ್ದರೆ ಅದೇ ಪರಮಧರ್ಮ ಕಾರ್ಯ ಆಗುತ್ತದೆ ಸಮಾಜದಿಂದ ಏನು ಸಿಗುವುದೆನ್ನುವ ಬದಲು ಏನು ನಮ್ಮಿಂದ ಕೊಡಬಹುದೆನ್ನುವ ಜ್ಞಾನಶಕ್ತಿ ನಮ್ಮೊಳಗಿದೆ ಮೌನವಾಗಿ ಆತ್ಮಾವಲೋಕನ ಮಾಡಿಕೊಂಡರೆ ಉತ್ತಮ.

ಮಧ್ಯವರ್ತಿಗಳು ಪ್ರಚಾರಕ್ಕಷ್ಟೇ ಸೀಮಿತವಾಗದೆ ಸತ್ಯದ ಕಡೆ ನಡೆದರೆ ಉತ್ತಮ. ಪರರೆಲ್ಲಾ ನಮ್ಮವರೆ ನಮ್ಮವರೆ ಪರರಾದರೆ? ಪರದೇಶದವರನ್ನು ರಕ್ಷಿಸುವ ಕೆಲಸ ಉತ್ತಮ. ಆದರೆ ನಮ್ಮವರನ್ನೇ ನಿರ್ಲಕ್ಷ್ಯ ಮಾಡೋದರಿಂದ ನಷ್ಟವೆ ಗತಿ. ಅತಿಥಿ ಸತ್ಕಾರವಿರಲಿ ಆದರೆ ಅವರೆ ತಿಥಿ ಮಾಡುವ‌ ಸ್ಥಿತಿ ಬರದಿರಲಿ.


ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group