ಸಿಂದಗಿ: ಸರಕಾರಿ ಅಧಿಕಾರಾವಧಿಯಲ್ಲಿ ಪದೋನ್ನತಿ, ವರ್ಗಾವಣೆ ಸಹಜ ಪ್ರಕ್ರಿಯೆ ಅದನ್ನು ನಾವು ಸೇವಾ ಮನೋಭಾವನೆಯಿಂದ ಸ್ವೀಕರಿಸಿ ಎಷ್ಟು ದಿನ ಕೆಲಸ ಮಾಡಿದ್ದೀವಿ ಎಂಬುದು ಮುಖ್ಯವಲ್ಲ, ನಮ್ಮ ಸೇವಾವಧಿಯಲ್ಲಿ ನಾವು ಮಾಡಿದ ಕಾರ್ಯಕ್ರಮಗಳು ನಮ್ಮೊಂದಿಗೆ ಬರುವ ಪ್ರೀತಿ, ವಿಶ್ವಾಸ ಗಳಿಸುವುದು ಮುಖ್ಯವಾಗಿದೆ ಎಂದು ಸಿ.ಪಿ.ಆಯ್ ಡಿ.ಹುಲುಗಪ್ಪ ಹೇಳಿದರು.
ಪಟ್ಟಣದ ಪೊಲೀಸ ಠಾಣೆಯಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಪಿಎಸೈ ಸೋಮೇಶ ಗೆಜ್ಜಿಯವರ ಬಿಳ್ಕೊಡುಗೆ ಹಾಗೂ ನೂತನವಾಗಿ ಆಗಮಿಸಿದ ಠಾಣಾಧಿಕಾರಿ ಭೀಮಪ್ಪ ರಬಕವಿ ಅವರ ಸ್ವಾಗತ ಸಮಾರಂಭದ ಅದ್ಯಕ್ಷತೆ ವಹಿಸಿ ಮಾತನಾಡಿ, ಸಾರ್ವಜನಿಕರ ಕಷ್ಟಗಳನ್ನು ಹೊತ್ತುಕೊಂಡು ಠಾಣೆಗೆ ಬಂದರೆ ನಾವು ಜನಸ್ನೇಹಿ ಪೊಲೀಸರಾಗುವೆವು ಆದರೆ ರಾಜಕೀಯ ಮತ್ತು ಜಾತಿಗಳಿಗೆ ಅಂಟಿಕೊಳ್ಳದೆ ಕಾನೂನಿನ ಚೌಕಟ್ಟಿನಲ್ಲಿ ನಿಷ್ಠೆಯಿಂದ ಕಾರ್ಯ ನಿರ್ವಹಿಸಿದ್ದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ಅಧಿಕಾರದ ಅವಧಿಯಲ್ಲಿ ಜನಸ್ನೇಹಿಯಾಗಿ ಇಬ್ಬರು ಅಧಿಕಾರಿಗಳು ಸೇವೆ ಸಲ್ಲಿಸುವಂತಾಗಲಿ ಎಂದು ಶುಭಕೋರಿದರು.
ಎ.ಎಸ್.ಆಯ್ ಎಂ.ಜಿ.ಬಿರಾದಾರ ಮಾತನಾಡಿ, ಸೊಮೇಶ ಗೆಜ್ಜಿ ಅವರು ಠಾಣಾಧಿಕಾರಿಯಾಗಿ ಕಾರ್ಯನಿರ್ವಹಿಸದೇ ಸಿಬ್ಬಂದಿಗಳಿಗೆ ಸ್ಪಂದನೆಯಾಗಿ ನಿಂತು ಆತ್ಮಸ್ಥೆರ್ಯ ತುಂಬುವ ಕೆಲಸ ಮಾಡಿದ್ದಾರೆ. ಸರಕಾರಿ ಕೆಲಸದಲ್ಲಿ ವರ್ಗಾವಣೆ ನಿರಂತರ ಪ್ರಕ್ರಿಯೆ ಅವರು ಸಿಂದಗಿಯಿಂದ ವರ್ಗಾವಣೆ ಆಗಿರೋದು ಬೇಸರದ ವಿಷಯ ಆದರೆ ನಮ್ಮ ಉಪ ವಿಭಾಗದಲ್ಲಿ ಇರೋದು ಮತ್ತಷ್ಟು ಹರ್ಷದ ಸಂಗತಿಯಾಗಿದೆ ಎಂದರು.
ವರ್ಗಾವಣೆಯಾದ ಸೋಮೇಶ ಗೆಜ್ಜಿ ಮಾತನಾಡಿ, ವರ್ಗಾವಣೆ ಸಂದಂರ್ಭದಲ್ಲಿ ಅಧಿಕಾರಿಗಳಲ್ಲಿಯೇ ಇರುಸು ಮುರುಸುಗಳಿರುತ್ತವೆ ಆದರೆ ವರ್ಗಾವಣೆ ಪ್ರಕ್ರಿಯೆ ಮುಗಿದ ನಂತರ ನಾವೆಲ್ಲರು ಒಂದೇ ಪೊಲೀಸ್ ಸಿಬ್ಬಂದಿ ಎಂದು ಅರಿತು ನಾವು ಸೇವೆ ಮಾಡಬೇಕು. ಸಿ.ಪಿ.ಆಯ್ ಅವರು ನನ್ನೊಂದಿಗೆ ಕೇವಲ ಎರಡು ತಿಂಗಳು ಕಾರ್ಯನಿರ್ವಹಿಸಿದರು ಕೂಡಾ ತುಂಬಾ ಅವಿನಾಭಾವ ಸಂಬಂಧ ಬೆಳೆದಿದ್ದಲ್ಲದೆ ಅವರು ನಮಗೆ ಬೆಂಬಲವಾಗಿ ನಿಂತಿದ್ದರು ಅವರೊಂದಿಗೆ ಮುಂದಿನ ದಿನಮಾನಗಳಲ್ಲಿ ಸೇವೆ ಸಲ್ಲಿಸುವ ಸೌಭಾಗ್ಯ ನನಗೆ ದೊರೆಯಲಿ ಸಿಬ್ಬಂದಿಗಳು ನನಗೆ ನೀಡಿದ ಬೆಂಬಲ ಸ್ನೇಹಿತ ಭೀಮಪ್ಪ ರಬಕವಿ ಅವರಿಗೆ ಹೆಚ್ಚಿನ ಬೆಂಬಲ ನೀಡಿ ಎಂದು ಹೇಳಿದರು.
ನೂತನ ಪಿ.ಎಸ್.ಆಯ್ ಭೀಮಪ್ಪ ರಬಕವಿ ಮಾತನಾಡಿ, ಹತ್ತು ತಿಂಗಳಲ್ಲಿ ಸಹೋದರ ಸೋಮೇಶ ಗೆಜ್ಜಿ ಮೂಡಿಸಿರುವ ಹೆಜ್ಜೆ ಅತ್ಯುತ್ತಮವಾದದ್ದು, ಅವರಿಗೆ ನೀಡಿದ ಸಹಕಾರ ನನಗೂ ನೀಡಿ ಎಂದು ಮನವಿ ಮಾಡಿದರು.
ಸಿಬ್ಬಂದಿ ರಾಜಶೇಖರ ಸಾಸಟ್ಟಿ, ಜಿ.ಆಯ್.ಇಜೇರಿ, ಮುಖಂಡರಾದ ರಜತ ತಾಂಬೆ, ಮಹಾವೀರ ಸುಲ್ಪಿ ಮಾತನಾಡಿದರು. ಎಸ್.ಎನ್.ದೊಡಮನಿ ಕಾರ್ಯಕ್ರಮವನ್ನು ನಿರೂಪಿಸಿದರು.