spot_img
spot_img

ಫೇಲ್ ಆದ್ರೆ ಯಾಕ್ ಅಳಬೇಕು ?

Must Read

spot_img
- Advertisement -

ನಿನ್ನೆಯ ಮಳೆಯಲ್ಲಿ ಒಂದು ಘಟನೆ ನಡೆಯಿತು. ಮರದ ಮೇಲಿನ ಒಂದು ಹಕ್ಕಿಯ ಗೂಡು ಆಕಸ್ಮಿಕವಾಗಿ ಕೆಳಗೆ ಬಿದ್ದಿತು. ಆ ಗೂಡನ್ನು ಕಟ್ಟುತ್ತಿದ್ದ ಎರಡೂ ಹಕ್ಕಿಗಳು ದುಃಖಿತಗೊಂಡವು.

ರಾತ್ರಿ ಕಳೆದು ಬೆಳಕಾಯಿತು. ಮುಂಜಾನೆ ಸ್ವಚ್ಪ ಬೆಳಕು ಬಿತ್ತು.

ಗಂಡು ಹಕ್ಕಿ: ” ನಡಿ ಹೋಗೂನು !! ಮತ್ತ ಹೊಸ ಕಸ ಕಡ್ಡಿ ಗ್ವಾಳೆ ಮಾಡೂನೂ, ಮತ್ತೊಂದ ಹೊಸ ಗೂಡು ಕಟ್ಟೂಣು ” ಎಂದಾಗ , ಹೆಣ್ಣು ಹಕ್ಕಿಯ ಕಣ್ಣುಗಳಲ್ಲಿ ನೀರು ಬಂತು.

- Advertisement -

ಗಂಡು ಹಕ್ಕಿ: ” ಹುಚ್ಚೀ ಅದಕ್ಕ್ಯಾಕ ಅಳ್ತೀ ! ಬೀಳಿಸೂದು ಆ ಮ್ಯಾಲೀನಂವನ ಕೈಯಾಗ ಐತಿ. ಆದರs ಮತ್ತ ಹೊಸದೊಂದು ಗೂಡು ಕಟ್ಟೂದು ನಮ್ಮ ಕೈಯಾಗ ಐತಿ ! ಯಾರದಾದರ ಸಹಾಯ ಸಿಗ್ತದಂತ ದಾರಿ ಕಾಯಾಕ ನಾವೇನ್ ಮನುಷ್ಯಾರೇನು !!! ನಡಿ ಹಾರೂನು !

ಮತ್ತೆ ಆ ಹಕ್ಕಿಗಳು ಆಕಾಶದಲ್ಲಿ ಎತ್ತರಕ್ಕೆ ಹಾರಿದವು.

ಇದಕ್ಕೇ ಅನ್ನುವುದು ಬದುಕು. ಪರೀಕ್ಷೆದಾಗ ನಾಪಾಸ್ ಆದ್ರ ಏನಾಯ್ತು ? ಮತ್ತೊಮ್ಮೆ ಪರೀಕ್ಷೆ ಬರೆಯೂಣು !

- Advertisement -

– ನೀಲಕಂಠ ದಾತಾರ

- Advertisement -
- Advertisement -

Latest News

ಎಸ್ ಎಂ ಕೃಷ್ಣ ನಿಧನಕ್ಕೆ ಕಡಾಡಿ ಸಂತಾಪ

ಮೂಡಲಗಿ:ಮಾಜಿ ಮುಖ್ಯಮಂತ್ರಿಗಳು, ಮಾಜಿ ಕೇಂದ್ರ ಸಚಿವರು, ರಾಜ್ಯಪಾಲರೂ ಸೇರಿದಂತೆ ಅನೇಕ ಉನ್ನತ ಹುದ್ದೆಗಳಲ್ಲಿ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿ ರಾಜ್ಯಕ್ಕೆ ಹಾಗೂ ದೇಶಕ್ಕೆ ತಮ್ಮದೇ ಆದ ಅಪಾರ...
- Advertisement -

More Articles Like This

- Advertisement -
close
error: Content is protected !!
Join WhatsApp Group