ಮೂಡಲಗಿ – 2023-24 ನೇ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಗಣನೀಯ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಮೂಡಲಗಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಸತ್ಕರಿಸಿ ಅಭಿನಂದಿಸಲಾಯಿತು.
ಪರೀಕ್ಷೆಯಲ್ಲಿ 600ಕ್ಕೂ ಅಧಿಕ ಅಂಕ ಗಳಿಸಿದ ವಿವಿಧ ಪ್ರೌಢ ಶಾಲೆಗಳಿಂದ ಸಾಧನೆ ಮಾಡಿರುವ 23 ವಿದ್ಯಾರ್ಥಿಗಳನ್ನು ಸತ್ಕರಿಸಿ ಅಭಿನಂದಿಸಲಾಯಿತು.
ಸದರಿ ಪ್ರತಿಭಾವಂತ ವಿದ್ಯಾರ್ಥಿಗಳು ಈ ನಾಡಿನ ಭವಿಷ್ಯದ ಆಸ್ತಿಯಾಗಲಿದ್ದು, ಉತ್ತಮ ಕಾಲೇಜು ಮತ್ತು ಕೋರ್ಸ್ಗಳಿಗೆ ಪ್ರವೇಶ ಪಡೆದು ಮುಂದಿನ ಹಂತದ ಶಿಕ್ಷಣವನ್ನು ಶ್ರೇಷ್ಠ ರೀತಿಯಲ್ಲಿ ಮುಂದುವರೆಯಲಿ ಎಂದು ಮೂಡಲಗಿ ಬಿ ಇ ಓ ಅಜಿತ ಮನ್ನಿಕೇರಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕರುಗಳಾದ ಕರಿಬಸವರಾಜು. ಟಿ, ಸತೀಸ ಬಿ.ಎಸ್ ಹಾಗೂ ಆರ್, ವಿ ಯರಗಟ್ಟಿ, ಕಛೇರಿಯ ಅಧೀಕ್ಷಕರಾದ ವೆಂಕಟೇಶ ಜೋಷಿ, ಸುಜಾತಾ ಕುರಬೇಟ ಹಾಗೂ ಸಿಬ್ಬಂದಿಯರಾದ ಚೇತನ ಕುರಿಹುಲಿ ಮತ್ತು ಇತರರು ಹಾಜರಿದ್ದರು. ಸತ್ಕಾರ ಸಮಾರಂಭದಲ್ಲಿ ಸಾಧಕ ವಿದ್ಯಾರ್ಥಿಗಳ ಪಾಲಕರು ಸಹ ಹಾಜರಿದ್ದರು.
೨೦೨೩-೨೪ ನೆಯ ಸಾಲಿನ ಮೂಡಲಗಿ ವಲಯ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ :
ಮೂಡಲಗಿ ವಲಯವು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ 6 ನೆಯ ಸ್ಥಾನ ಪಡೆದಿದ್ದು, ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹಾಜರಾದವರು ಒಟ್ಟು :7479 ವಿದ್ಯಾರ್ಥಿಗಳು (ಗಂಡು : 3955 ಹೆಣ್ಣು : 3524)
ಉತ್ತೀರ್ಣರಾದವರು 4789 (ಗಂಡು : 2139 ಹೆಣ್ಣು : 2650)
ಅನುತ್ತೀರ್ಣರಾದವರು : 2690 (ಗಂಡು : 1819 ಹೆಣ್ಣು : 871)
ಮೂಡಲಗಿ ವಲಯದ ಉತ್ತೀರ್ಣತೆ ಫಲಿತಾಂಶ : 64.40%
ಚಿಕ್ಕೋಡಿ ಶೈಕ್ಷಣಿಕ ಜೆಲ್ಲೆಗೆ 6ನೇ ಸ್ಥಾನ.
ಒಟ್ಟು 23 ವಿದ್ಯಾರ್ಥಿಗಳು 600ಕ್ಕೂ ಅಧಿಕ ಅಂಕ ಪಡೆದಿರುತ್ತಾರೆ.
ವಲಯಕ್ಕೆ ಅತೀ ಹೆಚ್ಚು ಅಂಕ ಪಡೆದವರು
1) ಪ್ರಥಮ ಸ್ಥಾನ ಶರೀಫ್ ಹುಸೇನಸಾಬ ಲಕ್ಕುಂಡಿ : 619 ಅಂಕಗಳು
ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಲ್ಲೋಳಿ
2) ದ್ವಿತೀಯ ಸ್ಥಾನ : ಸಂಜನಾ ಸುಭಾಷ ಶಿವಾಪುರ : 618 ಅಂಕಗಳು
ಚೈತನ್ಯ ಆಶ್ರಮ ಪ್ರೌಢ ಶಾಲೆ ನಾಗನೂರು
3) ತೃತೀಯ ಸ್ಥಾನ : ಶ್ರೀದೇವಿ ಮಾರುತಿ ಈರೈನವರ : 616 ಅಂಕಗಳು
ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಲ್ಲೋಳಿ