ಬೆಳಗಾವಿ : ಕಳೆದ 26 ವರ್ಷಗಳಿಂದ ಸದ್ದಿಲ್ಲದೇ ಸಾಹಿತ್ಯ, ಸಾಂಸ್ಕೃತಿಕ, ಹಿರಿಯ ಚೇತನಗಳಿಗೆ ಗೌರವ ಸಲ್ಲಿಸುವ ಮುಂತಾದ ಮೌಲಿಕ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕನ್ನಡ ಸೇವೆ ಮಾಡುತ್ತ ಬರುತ್ತಿರುವ ಬೆಳಗಾವಿಯ ಹೊಂಬೆಳಕು ಸಾಂಸ್ಕೃತಿಕ ಸಂಘ (ರಿ) ಪ್ರತಿವರುಷದಂತೆ ಈ ವರುಷವೂ ಆಯ್ಕೆ ಸಮಿತಿಯ ತೀರ್ಪುಗಾರರನ್ವಯ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ, ಆಯ್ದ ಕೃತಿಗಳಿಗೆ ರಾಜ್ಯಮಟ್ಟದ “ರಾಷ್ಟ್ರಕೂಟ ಸಾಹಿತ್ಯ ಶ್ರೀ” ಪ್ರಶಸ್ತಿ ಘೋಷಿಸಿದೆ.
2024ನೇ ಸಾಲಿನಲ್ಲಿ ಪ್ರಕಟವಾದ ವಿವಿಧ ಸಾಹಿತ್ಯ ಪ್ರಕಾರಗಳ 42 ಕೃತಿಗಳ ಪೈಕಿ 11 ಕೃತಿಗಳು ಪ್ರಶಸ್ತಿಗೆ ಆಯ್ಕೆಯಾಗಿವೆ. ಅದರಲ್ಲಿ ವಿದ್ಯಾಧರ ಮುತಾಲಿಕ ದೇಸಾಯಿ (ಮೌನಿ ಗುರುಗಳು) ಅವರ “ಮೆಲಕಾಡತಾವ ನೆನಪುಗಳು”
ಹಾಗೂ ದಾವಣಗೆರೆಯ ಸುನಿತಾ ಪ್ರಕಾಶ್ ಅವರ “ಪದ್ದವ್ವನ ಕೌದಿ ಮತ್ತು ಇತರೆ ಕಥೆಗಳು” ಕೂಡ ಸೇರಿವೆ.
ಇಲ್ಲಿ.ಯಾವುದೇ ಲಾಬಿ, ಒತ್ತಡ, ಪಕ್ಷಪಾತಗಳಿಲ್ಲದೆ
ಶುದ್ಧ ಸಾಹಿತ್ಯ ಮೌಲ್ಯ ಆಧರಿಸಿ ನಡೆಯುವ ಈ ಆಯ್ಕೆಯ ಪ್ರಕ್ರಿಯೆಯ ಕಾರ್ಯದಲ್ಲಿ ಒಟ್ಟು ಹನ್ನೊಂದು ಕೃತಿಗಳು ಆಯ್ಕೆಯಾಗಿರುತ್ತವೆ.
ವಿದ್ಯಾಧರ ಮುತಾಲಿಕ ದೇಸಾಯಿ ಧಾರವಾಡ ಇವರ ಕಿರು ಪರಿಚಯ:
ಅಪ್ಪಟ ಉತ್ತರ ಕರ್ನಾಟಕದ ಮಣ್ಣಿನ ಮಗನಾದ ಇವರು ಸುಮಾರು ಐದು ದಶಕಗಳ ಕಾಲ ಮುಂಬಯಲ್ಲಿ ಕನ್ನಡ ಪರಿಚಾರಕನಾಗಿ, ಹೊರನಾಡಿನ ಕನ್ನಡ ಮಾಧ್ಯಮದ
ಎಸ್.ಎಸ್.ಎಲ್.ಸಿ ಮಾಧ್ಯಮ ಪ್ರಶಸ್ತಿ ಹಾಗೂ ಸಿ.ಇ.ಟಿ ಮೀಸಲಾತಿಗಾಗಿ ಒಂಟಿಯಾಗಿ ಹೋರಾಡಿದ ಕನ್ನಡ ಸೇವಕ. ಮುಂಬೈನ,ಥಾಣೆಯಲ್ಲಿ 20 ವರ್ಷಗಳ ಕಾಲ ಕನ್ನಡ ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ.
*ಮುಂಬೆಳಕು ಕನ್ನಡ ಬಳಗ (ರಿ)-ಕಲ್ಯಾಣ
ಸಂಸ್ಥಾಪಕ ಟ್ರಸ್ಟಿ ಹಾಗೂ ಸ್ಥಾಪಕ ಅಧ್ಯಕ್ಷ
(2೦೦1ರಿಂದ 2೦1೦)
ಅಪರೂಪದ ಸಂಘಟಕ:
*ವಿದ್ಯಾಧರ ಕನ್ನಡ ಪ್ರತಿಷ್ಠಾನ ಸ್ಥಾಪನೆ (2೦11) .
*ನಿರಪೇಕ್ಷ ಭಾವದಿಂದ ತನ್ನ ಅತ್ಯಲ್ಪ ನಿವೃತ್ತಿ ವೇತನದ ಅರ್ಧ ಭಾಗವನ್ನೂ, ವಿವಿಧ ಪ್ರಶಸ್ತಿ , ಪುರಸ್ಕಾರಗಳ,ಬರಹಗಳ ಗೌರವ ಧನವನ್ನೂ ಕನ್ನಡ ಸೇವಾ-ಕಾರ್ಯಗಳಿಗೆ ಮೀಸಲಿಡುತ್ತಾ ಬರುತ್ತಿರುವರು.ಕಥೆ, ಕವನ,ಹನಿಗವನ, ವೈಚಾರಿಕ, ದಾಸಸಾಹಿತ್ಯ,ಆತ್ಮಚರಿತ್ರೆ ಸೇರಿದಂತೆ 18ಕ್ಕೂ ಹೆಚ್ಚು ಕೃತಿಗಳ ರಚನೆ.ಹೊಸ ಬರಹಗಾರರ ರೂವಾರಿ ಕಟ್ಟುನಿಟ್ಟಾದ ಮಾರ್ಗದರ್ಶನ, ಕನ್ನಡ ಮಾಧ್ಯಮ ಶಾಲೆಗಳಿಗೆ ಸಹಾಯ,*ಕನ್ನಡ ನುಡಿ ತೇರು*, ಮುಂತಾದ ಸಾಹಿತ್ಯ, ಸಾಧಕರ ಶೋಧ, ಪ್ರತಿಭಾ ಶೋಧ, ಸಾಹಿತ್ಯಕ ಕಾರ್ಯಕ್ರಮಗಳು ಇವು ಪ್ರತಿ ವರುಷವಿಡೀ, ನಿರಂತರ ನಡೆವ ಸೇವೆ. .
ವಿವಿಧ ಪ್ರಶಸ್ತಿಗಳು ಇವರಿಗೆ ಸಂದಿವೆ.
ಅವರ ಈ ವರ್ಷ ಪ್ರಶಸ್ತಿ ಪಡೆದ ಕೃತಿ ‘ಮೇಲಕಾಡತಾವ ನೆನಪುಗಳು’ ಆತ್ಮ ಚರಿತ್ರೆ.
ಅವರ ಬದುಕು ಬರಹ ನಡೆದು ಬಂದ ದಾರಿ ಇದಾಗಿದೆ.
ಇನ್ನೋರ್ವ ಗೆಳತಿ
*ಶ್ರೀಮತಿ ಸುನಿತಾ ಪ್ರಕಾಶ್: ದಾವಣಗೆರೆ
25 ವರ್ಷಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿ ಹಿರಿಯ ಶುಶ್ರೂಷಕಿ, ಶಸ್ತ್ರಚಿಕಿತ್ಸಾ ವಿಭಾಗದ ಅಧೀಕ್ಷಕಿ ಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪತ್ರಿಕೋದ್ಯಮ, ವರದಿಗಾರಿಕೆ, ಸಾಹಿತ್ಯ ರಚನೆ: ಕಥೆ,ಕವನ ವೈಚಾರಿಕ,ಕೃತಿ ಹಾಗೂ ವಿವಿಧ ಬರಹಗಳು:ಸಂಘಟಕಿ ,ಕ.ಲೇ.ಸಂ,ಚು.ಸಾ.ಪ,
ಇತರೇ ಸಂಘಟನೆಗಳು, ಸಮರ್ಥ ನಿರೂಪಕಿ, ಸದಾ ಹಸನ್ಮುಖಿ, ಎಲ್ಲ ಕ್ಷೇತ್ರಗಳಲ್ಲಿ ಸಮಾನ ಪ್ರಮಾಣದ ತೊಡಗಿಸಿಕೊಂಡಿರುವ ಸಕ್ರಿಯ ಸಾಹಿತ್ಯಿಕ ವ್ಯಕ್ತಿತ್ವ.
ಕೃತಿಗಳು:
ಒಲವಿನ ದೀವಿಗೆ – ಕವನ ಸಂಕಲನ (2018)
ಶರಣ್ಯ – ಕಥಾ ಸಂಕಲನ.
ಇದರ ಹಸ್ತಪ್ರತಿಗೆ ಮಾತೋಶ್ರೀ ಜಾನಕಿ ಬಾಯಿ ಮುತಾಲಿಕ ದೇಸಾಯಿ ಪ್ರಥಮ ಪುರಸ್ಕಾರ,ನಗದು ಗೌರವ.ದೊರೆತ ಈ ಕೃತಿಗೆ ಇನ್ನೂ ಅನೇಕ ಪ್ರಶಸ್ತಿಗಳು ಸಂದಿವೆ.
ಪದ್ದವ್ವನ ಕೌದಿ ಮತ್ತು ಇತರೆ ಕಥೆಗಳು
(ಈ ಬಾರಿ ಪ್ರಶಸ್ತಿ ಪಡೆದ ಕೃತಿ)
ಮಹಿಳಾ ಸಂವೇದನೆ, ಸಾಮಾಜಿಕ ಕಾಳಜಿ, ಮಾನವೀಯತೆಯ ತುಡಿತ,ಮುಂತಾದ ಒಳನೋಟಗಳಿಂದ ತುಂಬಿದ ಅವರ ಬರಹದ ಶೈಲಿಗೆ ಅವರದೇ ಆದ ವಿಶಿಷ್ಟ ಛಾಪಿದೆ ಎಂಬುದು ವಿಮರ್ಶಕರ ಅಭಿಪ್ರಾಯ.
ಈ ಈರ್ವರನ್ನೂ ಹಾಗೆಯೇ,
ಹೊಂಬೆಳಕು ಸಾಂಸ್ಕೃತಿಕ ಸಂಘ ಬೆಳಗಾವಿ ಮತ್ತು ಶ್ರೀ ಚೆನ್ನಲೀಲಾ ಟ್ರಸ್ಟ್, ಧಾರವಾಡ ಇವರ ವತಿಯಿಂದ
“ಚೆನ್ನಶ್ರೀ” ಜೀವಮಾನ ಸಾಧನೆ ಪ್ರಶಸ್ತಿ 2024
ಈ ಬಾರಿ ಆಯ್ಕೆಯಾದವರು ಸಿದ್ದಮತಿ ನೆಲವಗಿ(91) ಹಾವೇರಿ ಅವರನ್ನು ಒಳಗೊಂಡ ಮೂರೂ ಜನ ಹಿರಿಯ ನಾಗರಿಕರಿಗೂ, ವಿದ್ಯಾಧರ ಕನ್ನಡ ಪ್ರತಿಷ್ಠಾನದ ಸ್ನೇಹ ಬಳಗ ತುಂಬು ಹೃದಯದಿಂದ ಅಭಿನಂದಿಸುತ್ತೇವೆ.
ಈ ವರ್ಷದ ವಿವಿಧ ಕೃತಿ ಪ್ರಶಸ್ತಿ ಗೌರವ ಪ್ರಶಸ್ತಿ ಪುರಸ್ಕೃತರ ಆಯ್ಕೆಯ ಕಾರ್ಯದಲ್ಲಿ ಪಾಲ್ಗೊಂಡ ಸ.ರಾ. ಸುಳಕೂಡೆ, ಶಶಿಕಲಾ ಪಾವಸೆ, ಲೀಲಾ ಕಲಕೋಟಿ, ಆರ್.ಬಿ. ಬನಶಂಕರಿ, ಎಚ್.ಎ. ಮಾವುತ, ಡಾ. ಜಗದೀಶ್ ಹಾರೂಗೊಪ್ಪ, ಮಮತಾ ಶಂಕರ ಮುಂತಾದವರು.ಇವರೆಲ್ಲರೂ
ಹಾಗು ಸಂಘದ ಎಲ್ಲ ಪದಾಧಿಕಾರಿಗಳು ಆಯ್ಕೆಯಾದ ಸಾಹಿತಿ,ಸಾಹಿತ್ಯ ಕೃತಿಗಳನ್ನು ಅಭಿನಂದಿಸಿದ್ದಾರೆ.
ಪಾರ್ವತಿ ಜಗದೀಶ
ಲೇಖಕಿ
ಹಾವೇರಿ.

