- Advertisement -
ಮೈಸೂರಿನ ಕಾಳಿದಾಸ ರಸ್ತೆಯಲ್ಲಿರುವ ಶ್ರೀ ಯದುಗಿರಿ ಯತಿರಾಜ ಮಠ ಇದರ ಶಾಖೆಯ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿಂದು (ಫೆ.16) ರಥಸಪ್ತಮಿ ಪ್ರಯುಕ್ತ ಬಹಳ ಅದ್ಧೂರಿಯಾಗಿ ಪ್ರಧಾನ ವ್ಯವಸ್ಥಾಪಕ ವಿದ್ವಾನ್ ಕೆ.ಆರ್.ಯೋಗಾನರಸಿಂಹನ್ (ಮುರುಳಿ) ನೇತೃತ್ವದಲ್ಲಿ ಉತ್ಸವ ಜರುಗಿತು.
ಉತ್ಸವಮೂರ್ತಿಯನ್ನು ದೇವಸ್ಥಾನದ ಸುತ್ತಲೂ ಮೂರು ಸುತ್ತು ತರಲಾಯಿತು. ದೇವರ ಪೂಜಾ ಕಾರ್ಯಕ್ರಮಗಳು ಬಹಳ ಅದ್ಧೂರಿಯಾಗಿ ಮೂಡಿಬಂತು. ಭಕ್ತಾದಿಗಳು ಸಕಾಲಕ್ಕೆ ಆಗಮಿಸಿ ದೇವರ ಕೃಪೆಗೆ ಪಾತ್ರರಾದರು. ಮಹಾಮಂಗಳಾರತಿ, ತೀರ್ಥ ಪ್ರಸಾದದೊಂದಿಗೆ ದೇವರ ಕಾರ್ಯಕ್ರಮಗಳು ಸಂಪನ್ನಗೊಂಡಿತು.