ಮೂಡಲಗಿ -ತಾಲೂಕಿನ ಕೆಲ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ 2025 ನೆಯ ಸಾಲಿನ “ರತ್ನರಾಜ”ಪ್ರಶಸ್ತಿ ಅರಸಿಕೊಂಡು ಬಂದಿದೆ.
ಧಾರವಾಡ ರಂಗಾಯಣ ಸಭಾ ಭವನದಲ್ಲಿ ಅಖಿಲ ಕರ್ನಾಟಕ ತೃತೀಯ ಬೈಲಾಟ ಉತ್ಸವ, ವಿಚಾರ ಸಂಕಿರಣ ಕೌಜಲಗಿ ನಿಂಗಮ್ಮ ಹಾಗೂ ಶ್ರೀ ಲಕ್ಕಮ್ಮದೇವಿ ಕಲಾ ಪೋಷಕ ಸಂಘ,ಧಾರವಾಡ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೂಡಲಗಿ ಪಟ್ಟಣದ “ಚಿತ್ರ ಕಲಾವಿದ” ಸುಭಾಸ ಕುರಣಿ,”ಸಿದ್ದಿ ಸೋಂಗು” ಡಾ. ಚುಟುಕುಸಾಬ ಜಾತಗಾರ,”ರಂಗ ಭೂಮಿ ಕಲಾವಿದ” ನಾಗೇಂದ್ರ ಮಾನೆ ಹಾಗೂ ಹಳ್ಳೂರ ಗ್ರಾಮದ ಸಮಾಜ ಸೇವಕ ಮುರಿಗೆಪ್ಪ ಮಾಲಗಾರ ಈ ಸಾಧಕರಿಗೆ “ಕನ್ನಡ ರತ್ನ ” ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಈ ಸಮಯದಲ್ಲಿ ಕಾಡಯ್ಯ ಹಿರೇಮಠ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಡಾ. ಸಿ. ಕೆ. ನಾವಲಗಿ, ಡಾ. ಸಿದ್ದಣ್ಣ ಬಾಡಗಿ, ಶ್ರೀ ಲಕ್ಕಮ್ಮ ದೇವಿ ಕಲಾ ಪೋಷಕ ಸಂಘದ ಅಧ್ಯಕ್ಷರಾದ ಸಿದ್ರಾಮ ನೀಲಜಗಿ, ಮುಖ್ಯ ಅತಿಥಿಗಳಾದ ಎಸ್. ಎಚ್. ಮಿಟ್ಟಲಕೋಡ ಶಂಕರ ಕುಂಬಿ, ಡಾ.ಎಸ್. ಎಸ್. ಪಾಟೀಲ, ಡಾ.ಟಿ. ತ್ಯಾಗರಾಜ, ಜೆ. ಕೆ. ಹುಸೇನ್ಬಾಯಿ, ಅಶ್ವಿನಿ ಅಂಗಡಿ, ಡಾ. ಜೆ. ಎಂ. ಬಾದಾಮಿ, ಉಪನ್ಯಾಸಕ ಮಹಾದೇವ ಪೋತರಾಜ ಉಪಸ್ಥಿತರಿದ್ದರು.