ರಾಯಣ್ಣ ವ್ಯಕ್ತಿಯಲ್ಲ ಒಂದು ಶಕ್ತಿ – ರಾಜೇಂದ್ರ ಸಣ್ಣಕ್ಕಿ

Must Read

ಮೂಡಲಗಿ – ಸಂಗೊಳ್ಳಿ ರಾಯಣ್ಣ ಒಬ್ಬ ವ್ಯಕ್ತಿ ಮಾತ್ರವಲ್ಲ ಒಂದು ಶಕ್ತಿಯಾಗಿದ್ದರು. ಚಮತ್ಕಾರವೆಂದರೆ ರಾಯಣ್ಣ ಹುಟ್ಟಿದ ದಿನ ಸ್ವಾತಂತ್ರ್ಯ ದಿನವಾದರೆ ನಿಧನವಾದ ದಿನ ಗಣರಾಜ್ಯೋತ್ಸವ ದಿನವಾಗಿದೆ. ಅಂಥ ಮಹನೀಯರಿಗೆ ಮಾತ್ರ ಇಂಥ ಚಮತ್ಕಾರ ಸಾಧ್ಯ ಎಂದು ಕುರುಬರ ಸಂಘದ ಮಾಜಿ ಅಧ್ಯಕ್ಷ ರಾಜೇಂದ್ರ ಸಣ್ಣಕ್ಕಿ ಹೇಳಿದರು.

ಮೂಡಲಗಿ ತಾಲೂಕಿನ ಸುಣಧೋಳಿಯಲ್ಲಿ ಸಂಗೊಳ್ಳಿ ರಾಯಣ್ಣ ಜಯಂತಿ ನಿಮಿತ್ತ ರಾಯಣ್ಣ ನ ಮೂರ್ತಿ ಅನಾವರಣ ಸಮಾರಂಭದಲ್ಲಿ ಅವರು ಮಾತನಾಡಿದರು.

ಚಿಕ್ಕ ವಯಸ್ಸಿನಲ್ಲಿಯೇ ಬ್ರಿಟಿಷ್ ಸರ್ಕಾರ ಕ್ಕೆ ಅವರು ಸಿಂಹಸ್ವಪ್ನವಾಗಿದ್ದರೆಂದರೆ ಅವರ ಶೌರ್ಯ ಎಂಥದು ಎಂಬುದು ಅರ್ಥವಾಗುತ್ತದೆ ಆದರೆ ಕೇವಲ ೩೨ ನೇ ವಯಸ್ಸಿನಲ್ಲಿಯೇ ರಾಯಣ್ಣ ನನ್ನು ಗಲ್ಲಿಗೇರಿದರು. ಅವರ ಹೋರಾಟ ಎಂದೆಂದಿಗೂ ಯುವಕರಿಗೆ ಸ್ಫೂರ್ತಿದಾಯಕ ಎಂದರು.

ರಾಜ್ಯ ಸರ್ಕಾರ ಸಂಗೊಳ್ಳಿ ರಾಯಣ್ಣ ನ ಭಾವಚಿತ್ರವನ್ನು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಪ್ರದರ್ಶಿಸುವ ಆದೇಶ ನೀಡಿದ್ದು ಸ್ವಾಗತಾರ್ಹ ನಿರ್ಧಾರ ಎಂದು ಸಣ್ಣಕ್ಕಿ ಹೇಳಿದರು.

ಈ ಮುಂಚೆ ಯುವನಾಯಕ ರಾಹುಲ್ ಜಾರಕಿಹೊಳಿ ರಾಯಣ್ಣನ ಮೂರ್ತಿಯನ್ನು ಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ ವಿನಯ ಕಟ್ಟಿಕಾರ, ಶಿವು ಪಾಟೀಲ, ಸಿದ್ಧಾರೂಢ ವೇವನಗೋಳ, ಅಡಿವೆಪ್ಪ ಕಂಕಾಳಿ, ಅಶೋಕ ನಾಯಕ, ಸಿದ್ದಪ್ಪ ಅಮನಿ, ಬಸಪ್ಪ ದೇವರಮನಿ, ಮುತ್ತು ಜಿಡ್ಡಿಮನಿ, ತಮ್ಮಣ್ಣ ಮೊಕಾನಿ, ಪಾಂಡು ಮನ್ನಿಕೇರಿ, ಸಿದ್ಧಾರೂಢ ಕಮತಿ, ನಿಂಗಪ್ಪ ಕುರಬೇಟ ಹಾಗೂ ಅನೇಕರು ಉಪಸ್ಥಿತರಿದ್ದರು.

Latest News

ಕವನ : ಶ್ರದ್ಧೆ

ಶ್ರದ್ಧೆಶ್ರದ್ಧೆ ಎಂದರೆ ಕೇವಲ ನಂಬಿಕೆ ಅಲ್ಲ, ಸಾಧನೆಯ ಕೀಲಿ ಕೈ ಆಗಿದೆಯಲ್ಲ ಹೃದಯದಿಂದ ಹೊಮ್ಮುವ ಶಕ್ತಿ ಎಲ್ಲ ಕಣ್ಣಿಗೆ ಕಾಣದ ಅದ್ಭುತ ಅನುಭವದ ಬೆಲ್ಲ ಹೆಜ್ಜೆಗೆ ದಿಕ್ಕು ತೋರುವ ಬೆಳಕ ಸಾಧನೆಯ ಹಾದಿಯ...

More Articles Like This

error: Content is protected !!
Join WhatsApp Group