ನೊಂದ ಗ್ರಾಹಕರಿಗೆ ನ್ಯಾಯ ಸಿಗುವುದು ಯಾವಾಗ ?
ಬೆಳಗಾವಿಯ ಚಲನಚಿತ್ರ ನಿರ್ಮಾಪಕ ಸಂಗೊಳ್ಳಿ ರಾಯಣ್ಣ ಚಿತ್ರದ ಖ್ಯಾತಿಯ ಆನಂದ ಅಪ್ಪುಗೋಳ ಎಂಬ ನಯವಂಚಕ ಸುಮಾರು ಹತ್ತು ಸಾವಿರ ಗ್ರಾಹಕರಿಗೆ ಮೋಸ ವಂಚನೆ ಮಾಡಿ ಜೈಲು ಸೇರಿ ಈಗ ಬೆಲ್ ಮೇಲೆ ಹೊರಗಡೆ ಬಂದಿದ್ದಾನೆ. ಅವನ ಹತ್ತಿರ ಸಾವಿರಾರು ಕೋಟಿ ಆಸ್ತಿ ಇದೆ. ಸರಕಾರ ಇದನ್ನು ಮುಟ್ಟುಗೋಲು ಹಾಕಿದೆ. ಕಳೆದ ಏಳು ವರ್ಷಗಳಿಂದ ಠೇವಣಿ ಇಟ್ಟ ಗ್ರಾಹಕರು ಸಾವಿನ ಲೆಕ್ಕವನ್ನು ಮಾಡುತ್ತಿದ್ದಾರೆ.
KDIB ಬೆಂಗಳೂರಿಗೆ ಹೋಗಿ ಸಾವಿರಾರು ಜನರು ರಸ್ತೆಯಲ್ಲಿ ಮಲಗಿ ಸರಿಯಾಗಿ ಅರ್ಜಿ ತುಂಬಿ ಬಂದಿದ್ದಾರೆ.
ಅಲ್ಲಿರುವ ಓರ್ವ ಭ್ರಷ್ಟ ಅಧಿಕಾರಿ ಸುಧರ್ಶನ ಅರಾಜಕಾರಣಿಗಳ ಅಣತಿಯಂತೆ ತುಂಬಿದ ಎಲ್ಲ ಗ್ರಾಹಕರ ಅರ್ಜಿಗಳನ್ನು ತಿರಸ್ಕರಿಸಿ ಘಾಸಿ ಮಾಡಿದ್ದಾನೆ.
ಬೆಳಗಾವಿ ಮೂಲದ ಸಂಗೊಳ್ಳಿ ರಾಯಣ್ಣ ಕೋಪರೇಟಿವ್ ಸೊಸೈಟಿ ಯಲ್ಲಿ ಸುಮಾರು ಐನೂರು ಕೋಟಿಗೂ ಅಧಿಕ ಹಣ ವಂಚನೆ ಪ್ರಕರಣವಾಗಿದೆ ಕಳೆದ ಏಳು ವರ್ಷಕ್ಕಿಂತ ಅಧಿಕವಾಗಿ ಇಂತಹ ಪ್ರಕರಣದ ಬಗ್ಗೆ ಗಮನ ನೀಡದ ದುಷ್ಟ ಸರಕಾರ ಇದಾಗಿದೆ.
ಬಡವರ ಮಧ್ಯಮ ವರ್ಗದವರ ಕನಸನ್ನು ನುಚ್ಚು ನೂರು ಮಾಡಿದ ಭ್ರಷ್ಟ ಸರಕಾರದ ಪರಮ ಭ್ರಷ್ಟ ಕಂದಾಯ ಮಂತ್ರಿ ಕೃಷ್ಣ ಭೈರೇಗೌಡ ಇವರು ನೂರಾರು ಕೋಟಿ ವಂಚನೆಯ ಪ್ರಕರಣವನ್ನು ಮುಚ್ಚಿ ಹಾಕಿ ಹಣವನ್ನು ನುಂಗಬೇಕೆಂದಿರುವನು.
ವಯೋವೃದ್ಧರ ಮುದುಕರ ಮಹಿಳೆಯರ ಹೆಣ್ಣುಮಕ್ಕಳ ಹೋರಾಟಕ್ಕೆ ಸ್ಪಂದಿಸದ ಕರ್ನಾಟಕ ಸರಕಾರ ಒಂದು ಅತ್ಯಂತ ವಚನ ಭ್ರಷ್ಟ ನೀಚ ಸರಕಾರವಾಗಿದೆ
ಈ ಕೂಡಲೇ ಇದನ್ನು ಸರಿಪಡಿಸಿ ಸಾವಿರಾರು ಕುಟುಂಬಗಳಿಗೆ ನೆಮ್ಮದಿ ಜೀವನ ನೀಡಲು ಕರ್ನಾಟಕ ಸರಕಾರದ ಮುಖ್ಯ ಮಂತ್ರಿಗಳಿಗೆ ಸವಿನಯ ಪ್ರಾರ್ಥನೆ
ಇಂತಹ ಹಿಪೊಕ್ರೇಟ್ ಸರಕಾರಕ್ಕೆ ಧಿಕ್ಕಾರವಿರಲಿ.
ನೊಂದ ಸಾವಿರಾರು ಗ್ರಾಹಕರು
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕೋಪರೇಟಿವ್ ಸೊಸೈಟಿ ಬೆಳಗಾವಿ

