ಓದು ಕರ್ನಾಟಕ ಕಾರ್ಯಕ್ರಮ

Must Read

ಮುನವಳ್ಳಿ: ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯಲ್ಲಿ ಮುನವಳ್ಳಿ ಸಿಂದೋಗಿ ಅರ್ಟಗಲ್ ಸಮೂಹ ಸಂಪನ್ಮೂಲ ಕೇಂದ್ರ ಗಳ ವ್ಯಾಪ್ತಿಯ 4 ಮತ್ತು 5 ತರಗತಿ ನಿರ್ವಹಿಸುವ ಶಿಕ್ಷಕ ಶಿಕ್ಷಕಿಯರಿಗೆ ಕೋವಿಡ್ ಮಾರ್ಗಸೂಚಿ ಅನ್ವಯ ಶಿಕ್ಷಣ ಇಲಾಖೆ ಮತ್ತು ಪ್ರಥಮ ಸಂಸ್ಥೆಯ ಸಹಯೋಗದಲ್ಲಿ ಮಕ್ಕಳಿಗೆ ಸ್ಪಷ್ಟ ಓದು, ಶುದ್ದ ಬರಹ , ಸರಳ ಲೆಕ್ಕಾಚಾರದಲ್ಲಿ ಸಾರ್ವತ್ರಿಕರಣ ಸಾಧಿಸುವ ಗುರಿಯೊಂದಿಗೆ ” ಓದು ಕರ್ನಾಟಕ” ಕಾರ್ಯಕ್ರಮದ ಸಾಮಗ್ರಿಗಳ ಪರಿಚಯಾತ್ಮಕ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ಸಿಂದೋಗಿ ಸಂಪನ್ಮೂಲ ಕೇಂದ್ರದ ಎಸ್ ವಾಯ್ ನಿಪ್ಪಾಣಿ ಸ್ವಾಗತಿಸಿದರು . ಸಮನ್ವಯ ಶಿಕ್ಷಣ ದ ಬಿ. ಐ. ಇ. ಆರ್. ಟಿ ವಾಯ್ ಬಿ ಕಡಕೋಳ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ, ವಿಶೇಷ ಮಕ್ಮಳ ಕುರಿತು ಮಾಹಿತಿ ನೀಡಿದರು.

ಮುನವಳ್ಳಿ ಸಂಪನ್ಮೂಲ ಕೇಂದ್ರ ದ ಸಂಪನ್ಮೂಲ ವ್ಯಕ್ತಿ ಎಫ್ ಜಿ ನವಲಗುಂದ ಕನ್ನಡ ಮತ್ತು ಗಣಿತ ವಿಷಯಗಳನ್ನು ಓದು ಕರ್ನಾಟಕ ಕಾರ್ಯಕ್ರಮದಲ್ಲಿ ಹೇಗೆ ಚಟುವಟಿಕೆಗಳನ್ನು ಮತ್ತು ಆಟಗಳನ್ನು ಬಳಸಿಕೊಂಡು ಬೋಧಿಸಬೇಕೆಂಬುದನ್ನು ವಿವರಿಸಿದರು ನಂತರ ಓದು ಕರ್ನಾಟಕ ಕಿಟ್ ನ ಸಾಮಗ್ರಿಗಳನ್ನು ಪರಿಚಯಿಸಿ ಬಳಸಿಕೊಳ್ಳುವ ವಿಧಾನಗಳನ್ನು ತಿಳಿಸಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group