ಶ್ರೀ ಮಾರುತೇಶ್ವರ ಜಾತ್ರೆ ಸಿದ್ಧತೆ ದಿ.೨೦ ರಿಂದ

Must Read

ಹುನಗುಂದ: ತಾಲೂಕಿನ ತಿಮ್ಮಾಪುರ ಗ್ರಾಮದ ಶ್ರೀ ಮಾರುತೇಶ್ವರ ಹಾಗು ಬಸವೇಶ್ವರ ಜಾತ್ರೆಯ ಪ್ರತಿವರ್ಷದ ಪದ್ಧತಿಯಂತೆ ಎಲ್ಲ ದೇವರುಗಳಿಗೆ ನೀರು ಅನಿಸುವುದರ ಮೂಲಕ ಈ ವರ್ಷದ ಜಾತ್ರೆಗೆ ದಿನಾಂಕ 13 ರಂದು ಶನಿವಾರ ಚಾಲನೆ ನೀಡಲಾಯಿತು ತದನಂತರ ಮಾರುತೇಶ್ವರ ಹಾಗೂ ಬಸವೇಶ್ವರ ದೇವಸ್ಥಾನದ ಅರ್ಚಕರು ಜಾತ್ರೆಯ ತಯಾರು ಪ್ರಾರಂಭಗೊಳಿಸುತ್ತಾರೆ

ಈ ನಿಮಿತ್ತ ಮಾರುತೇಶ್ವರ ಅರ್ಚಕರು ಗ್ರಾಮದ ಬಾಬುದಾರರ ಮನೆಗಳಿಗೆ ತೆರಳಿ ಜಾತ್ರೆಗೆ ತಯಾರಿ ಮಾಡಿಕೊಂಡು ಜೊತೆಗೆ ಪೂಜಾರಿಗಳು ಮಡಿಯಿಂದ ಬರಿಗಾಲಿನಲ್ಲಿ ನಡೆದಾಡುತ್ತಾರೆ. ಹಾಗೂ ಮಾರುತೇಶ್ವರ ಗೋಪಾಳದೊಂದಿಗೆ ತಿಮ್ಮಾಪೂರ, ಕಿರಸೂರ ಹಡಗಲಿ ಸೇರಿದಂತೆ ನಮ್ಮ ಗ್ರಾಮದವರು ವಿವಿಧ ರಾಜ್ಯ ಜಿಲ್ಲೆ ಹಾಗೂ ವಿವಿಧ ತಾಲೂಕಿನಲ್ಲಿ ನೆಲೆಸಿರುವ ಸ್ಥಳಗಳಿಗೆ ತರಳಿ ಅಲ್ಲಿ ಶಂಖನಾದವನ್ನು ಮಾಡಿ ದವಸಧಾನ್ಯ ಹಾಗೂ ದೇಣಿಗೆ ಸಂಗ್ರಹಿಸುತ್ತಾರೆ ಹಾಗೂ ಗ್ರಾಮದ ದೈವ ಮಂಡಳಿಯು ದೇವಾಲಯಗಳಿಗೆ ಸುಣ್ಣ ಬಣ್ಣ ಸಿಂಗರಿಸುವುದು ಜಾತ್ರೆಗೆ ಬೇಕಾಗುವ ಸಾಮಾಗ್ರಿಗಳನ್ನು ಖರೀದಿ ಮಾಡುತ್ತಾರೆ.

ಬರುವ ದಿನಾಂಕ ೨೦ ರಂದು ಶನಿವಾರ ಪ್ರಾರಂಭಗೊಂಡು ಅಂದು ಹೊಳೆಗೆ ಹೋಗುವ ಕಾರ್ಯಕ್ರಮ, ೨೨ ರಂದು ರವಿವಾರ ರಂದು ಅಭಿಷೇಕ, ಪಲ್ಲಕ್ಕಿ ಉತ್ಸವ, ಹತಾರ ಸೇವೆ, ಸುತ್ತಗಾಯಿ ಒಡೆಯುವ ಕಾರ್ಯ ಮತ್ತು ಹಡಗಲಿ ತಿಮ್ಮಾಪೂರ ಗ್ರಾಮದಲ್ಲಿ ಹೇಳಿಕೆಗಳು ಜರುಗಲಿದೆ. ಮರುದಿನ ಸೋಮವಾರ 25 ವರ್ಷದ ಹಿಂದೆ ಪ್ರಾರಂಭಗೊಂಡ ರಥೋತ್ಸವದ ರಜತ ಮಹೋತ್ಸವ, ನಿಮಿತ್ತ ಗುರುವಂದನ ಹಾಗೂ ಹಾಲಿ ಮಾಜಿ ಸೈನಿಕರಿಗೆ ಸನ್ಮಾನ ಕಾರ್ಯಕ್ರಮ ಪೂಜ್ಯರುಗಳಿಂದ ಆಶೀರ್ವಚನ ಸೇರಿದಂತೆ ಧರ್ಮ ಸಭೆ ಜರುಗಿ 25 ವರ್ಷದ ಮಹಾ ರಥೋತ್ಸವ ಜರುಗಲಿದೆ

ಅಂದು ರಾತ್ರಿ ಹಾಸ್ಯ ಕಲಾವಿದ ವಿಠ್ಠಲ ಚಿಕ್ಕಲಗುಂಡಿ ಅವರ ತಾಯಿಯ ಋಣ ಮಣ್ಣಿನ ಮಗ ಎಂಬ ಸಾಮಾಜಿಕ ನಾಟಕ ಜರುಗಲಿದೆ ಎಂದು ಸಂಘಟಕರು ತಿಳಿಸಿದ್ದಾರೆ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group