ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಪಟ್ಟಣದಲ್ಲಿ ಡಿಸೆಂಬರ್ ೨೫-೨೦೨೨ ರಂದು ಜರುಗಿದ ಬಸವನಬಾಗೇವಾಡಿ ತಾಲೂಕು ೯ ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹುಣಶ್ಯಾಳ.ಪಿ.ಬಿ ಗ್ರಾಮದ ಲೇಖಕರಾದ, ಬಸವರಾಜ ಹಡಪದ ಅವರ ಕವನ ಸಂಕಲನ “ಕಣ್ಣಿನಾಚೆಯ ಕಡಲು” ಲೋಕಾರ್ಪಣೆಗೊಂಡಿತು.
ಸಂಜೆ ನಡೆದ ಪುಸ್ತಕ ಬಿಡುಗಡೆ ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಶ್ರೀ. ಮ. ನಿ. ಪ್ರ. ಚನ್ನಬಸವ ಮಹಾಸ್ವಾಮಿಗಳು (ವಿರಕ್ತಮಠ,ಇಂಗಳೇಶ್ವರ) ಸಾನ್ನಿಧ್ಯ ಶ್ರೀ. ಮ. ನಿ. ಪ್ರ. ವೀರಸಿದ್ಧ ಮಹಾಸ್ವಾಮಿಗಳು, ನಂದಿಮಠ, ವಡವಡಗಿ ಆನಂದ ದೇವರು, ಶಕ್ತಿಪೀಠ ಹುಣಶ್ಯಾಳ ಪಿ.ಬಿ, ಶಿವಪುತ್ರ ಶರಣರು, ಅತಿಥಿಗಳಾಗಿ ಕಾಸಿಂ ಪೀರ್ ವಾಲಿಕಾರ, ಜಿಲ್ಲಾಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು, ವಿಜಯಪುರ, ಬಿ ಎಂ ಪಾಟೀಲ(ಮಾ ಜಿಲ್ಲಾಧ್ಯಕ್ಷರು ಕಸಾಪ ವಿಜಯಪುರ)ಸಮ್ಮೇಳನದ ಸರ್ವಾಧ್ಯಕ್ಷರಾದ ಈರಣ್ಣ ಬೇಕಿನಾಳ(ಇಂಗಳೇಶ್ವರ), ಅಥಿತಿಗಳಾಗಿ ಸಿದ್ದಣ್ಣ ಉತ್ನಾಳ(ಹಿರಿಯ ಸಾಹಿತಿಗಳು,ದೆಗಿನಾಳ), ಸುಭಾಷಗೌಡ ಬ. ಪಾಟೀಲ (ಅಧ್ಯಕ್ಷರು, ಜನತಾ ಶಿಕ್ಷಣ ಸಂಸ್ಥೆ,ಮನಗೂಳಿ) ಪ್ರೊ.ಪಿ.ಎಲ್ ಹಿರೇಮಠ (ನಿವೃತ್ತ ಪ್ರಾಧ್ಯಾಪಕರು, ಬಸವನಬಾಗೇವಾಡಿ,) ನಿಂಗಪ್ಪ ಬೊಮ್ಮನಳ್ಳಿ(ಮಾ.ಕಸಾಪ ಅಧ್ಯಕ್ಷರು,ಇಂಗಳೇಶ್ವರ) ವೀರಣ್ಣ ಮರ್ತೂರ(ಅಧ್ಯಕ್ಷರು ಶಸಾಪ ಬಸವನಬಾಗೇವಾಡಿ, ವಿವೇಕಾನಂದ ಕಲ್ಯಾಣ ಶೆಟ್ಟಿ, ಕಾಶೀನಾಥ್ ಅವಟಿ, ಬಸವನಬಾಗೇವಾಡಿ, ಶ್ರೀಮತಿ ಲಕ್ಷ್ಮೀಬಾಯಿ ಸಿ ಖೇಡದ, ಪ್ರಭಾಕರ ಖೇಡದ, ಸಾಹಿತಿಗಳು ಬಸವನಬಾಗೇವಾಡಿ ಉಪಸ್ಥಿತರಿದ್ದರು.