ಕನಕ ಭವನಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆ

Must Read

ಸಿಂದಗಿ: ಭಕ್ತ ಕನಕದಾಸರ ಜಯಂತಿಯ ಸುಸಂದರ್ಭದಲ್ಲಿ ಕರ್ನಾಟಕ ಸರ್ಕಾರವು ಸಿಂದಗಿ ಮತಕ್ಷೇತ್ರದ ವ್ಯಾಪ್ತಿಗೆ ಬರುವ ಸುಮಾರು 41 ಹಳ್ಳಿಗಳಲ್ಲಿ ಕನಕ ಭವನಗಳನ್ನು ನಿರ್ಮಾಣ ಮಾಡಲು 395 ಲಕ್ಷರೂ ಗಳ ಅನುದಾನವನ್ನು ಬಿಡುಗಡೆ ಮಾಡಿ ಸರ್ಕಾರದ ಹಿಂದುಳಿದ ವರ್ಗಗಳ ಅಧೀನ ಕಾರ್ಯದರ್ಶಿ -2 ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ. ಅಧಿಕಾರಿ ಷಾಹೀನ್ ಪವೀನ್.ಕೆ ಆದೇಶ ಹೊರಡಿಸಿದ್ದಾರೆ.

ಸಿಂದಗಿ ಮತಕ್ಷೇತ್ರದ ತಾಂಬಾ, ಚಾಂದಕವಠೆ, ಹಚ್ಯಾಳ, ಕೊಕಟನೂರ, ಬಬಲೇಶ್ವರ, ಬಳಗಾನೂರ, ಹಂದಿಗನೂರ, ರಾಂಪೂರ, ಯಂಕಂಚಿ, ಗ್ರಾಮಗಳಿಗೆ 10 ಲಕ್ಷ ರೂಗಳಲ್ಲಿ ಕನಕ ಭವನ ನಿರ್ಮಾಣಕ್ಕೆ ಆದೇಶಿಸಿದರೆ, ಮಾಡಬಾಳ, ಬ್ಯಾಕೋಡ, ಮೋರಟಗಿ, ಕನ್ನೋಳ್ಳಿ, ಚಿಕ್ಕಸಿಂದಗಿ, ಬಂಕಲಗಿ, ಕೋರಹಳ್ಳಿ, ಗುಂದಗಿ, ರಾಮನಳ್ಳಿ, ಕೆರೂರ, ಸುರಗಿಹಳ್ಳಿ, ಬಿಸನಾಳ, ಗಬಸಾವಳಗಿ, ಗುಬ್ಬೆವಾಡ, ದೇವಣಗಾಂವ, ಕುಮಸಗಿ, ಬೆನಕೊಟಗಿ, ಯರಗಲ್, ಗೊರವಗುಂಡಗಿ, ರಾಮನಹಳ್ಳಿ, ಸುಂಗಠಾಣ, ಕಕ್ಕಳಮೇಲಿ, ತೊಂಟಾಪುರ, ಬೋರಗಿ, ಬಸ್ತಿಹಾಳ, ಶಿರಸಗಿ, ಓತಿಹಾಳ, ಹಿಕ್ಕನಗುತ್ತಿ, ಗಣಿಹಾರ, ದೇವರನಾವದಗಿ, ಬಬಲೇಶ್ವರ (2)  ಗ್ರಾಮಗಳಲ್ಲಿ 5 ಲಕ್ಷರೂಗಳಲ್ಲಿ ಕನಕ ಭವನ ನಿರ್ಮಾಣ ವಾಗಲಿವೆ.

ಸಿಂದಗಿ ನಗರದಲ್ಲಿ 150 ಲಕ್ಷರೂ ಕನಕ ಭವನಕ್ಕಾಗಿ ಮಂಜೂರು ಮಾಡಿಸಲು ಕಾಳಜಿ ವಹಿಸಿದ ಶಾಸಕ ರಮೇಶ ಭೂಸನೂರ ಅವರಿಗು ಹಾಗೂ ರಾಜ್ಯ ಸಚಿವರಾದ ಎಂ.ಟಿ.ಬಿ ನಾಗರಾಜ ಮತ್ತು ಬೈರತಿ ಬಸವರಾಜ ಅವರಿಗೆ ಸಿಂದಗಿ ಮಂಡಲದ ಹಿಂದುಳಿದ ಮೋರ್ಚಾ ಅಧ್ಯಕ್ಷ ರವಿಕಾಂತ ನಾಯ್ಕೋಡಿ ಅನಂತ ಕೋಟಿ ಧನ್ಯವಾದಗಳನ್ನು ತಿಳಿಸಿ ಸಂತಸ ವ್ಯಕ್ತಪಡಿಸಿದರು.

Latest News

ಶಿರೀಷಗೆ ಗಡಿತಿಲಕ, ಶಶಿಗೆ ಜನ್ನಾ ಪ್ರಶಸ್ತಿ

ಬೆಳಗಾವಿ - ಇಲ್ಲಿಯ ಬಿ ಎ ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಪ್ರತಿವರ್ಷ ಕೊಡಮಾಡುವ ಕನ್ನಡ ಗಡಿತಿಲಕ ಪ್ರಶಸ್ತಿಗೆ ಶಿರೀಷ ಅವರು ಆಯ್ಕೆಯಾಗಿದ್ದಾರೆ...

More Articles Like This

error: Content is protected !!
Join WhatsApp Group