Homeಸುದ್ದಿಗಳುಪ್ರೌಢದೇವರಾಯನ ಕಾಲದ ಶರಣ ಸಾಹಿತ್ಯದ ಪುನರುಜ್ಜೀವನ

ಪ್ರೌಢದೇವರಾಯನ ಕಾಲದ ಶರಣ ಸಾಹಿತ್ಯದ ಪುನರುಜ್ಜೀವನ

ವಚನ ಅಧ್ಯಯನ ವೇದಿಕೆಯ ಗೂಗಲ್ ಮೀಟ್ -ಶರಣ ಚಿಂತನದಲ್ಲಿ ಶರಣೆ ಇಂದಿರಾ ಮೋಟೆಬೆನ್ನೂರ ಅವರ ತಾಯಿಯವರಾದ ಲಿಂ. ಮಾತೋಶ್ರೀ ಪಾರ್ವತಿದೇವಿ ಮೊಗಲಿ ಇವರ ಸ್ಮರಣಾರ್ಥ ವಿಶೇಷ ದತ್ತಿ ಉಪನ್ಯಾಸ ಹಮ್ಮಿಕೊಳ್ಳಲಾಗಿತ್ತು

25 ನೆಯ ದಿವಸದ ಶರಣ ಮಾಸದ ಅನುಭಾವ ಮಾಲಿಕೆಯಲ್ಲಿ ಡಾ. ವಿರುಪಾಕ್ಷಿ ಪೂಜಾರ ಹಳ್ಳಿಯವರು ಪ್ರೌಢದೇವರಾಯನ ಕಾಲದ ಶರಣ ಸಾಹಿತ್ಯದ ಪುನರುಜ್ಜೀವನದ ಬಗೆಗೆ ಅತ್ಯಂತ ಪ್ರಬುದ್ಧವಾಗಿ ತಮ್ಮ ಅನುಭಾವವನ್ನು ನೀಡಿದರು.

ವಿಜಯನಗರ ಸಾಮ್ರಾಜ್ಯವು ಸಂಗಮ, ಸಾಳುವ, ತುಳುವ, ಅರವೀಡು ಮನೆತನಗಳಿಂದ ಆಳ್ವಿಕೆಯಾಗಿದ್ದು, ಪ್ರೌಢ ದೇವರಾಯ ಸಮರ್ಥ ಆಡಳಿತಗಾರನಾಗಿ, ಒರಿಸ್ಸಾದ ಕಟಕ್ ವರೆಗೆ ರಾಜ್ಯವನ್ನು ವಿಸ್ತರಿಸಿದ್ದು,
ರಾಜನು ಹೇಗೆ ಕಲೆ, ಸಾಹಿತ್ಯ,ನಾಟ್ಯ,ಸಂಗೀತ, ವಾಸ್ತುಶಿಲ್ಪ, ಚರಿತ್ರೆ, ಧರ್ಮ, ನಾಗರಿಕತೆಯನ್ನು ಉತ್ತುಂಗಮಟ್ಟಕ್ಕೆ ತೆಗೆದು ಕೊಂಡು ಹೋಗಿ ಹಲವಾರು ಪ್ರಸಿದ್ಧ ಕನ್ನಡ ಕವಿಗಳಿಗೆ ಪೋಷಕರಾಗಿದ್ದುದನ್ನು, ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಪ್ರೌಢದೇವರಾಯ ಅವರನ್ನು ಸಂಗಮ ರಾಜ ವಂಶದ ಆಡಳಿತಗಾರರಲ್ಲಿ ಶ್ರೇಷ್ಠರೆಂದು ಪರಿಗಣಿಸಲಾಗುತ್ತದೆ ಎನ್ನುವುದನ್ನು ಹೇಳುತ್ತಾ, 12ನೇ ಶತಮಾನದಲ್ಲಿ ನಡೆದ ಶರಣರ ಕ್ರಾಂತಿ ಮತ್ತು 15 ನೆಯ ಶತಮಾನದ ಮಧ್ಯಕಾಲೀನ ಸಮಯದಲ್ಲಿ ಕರ್ನಾಟಕದಲ್ಲಿ ಪ್ರೌಢದೇವರಾಯನ ಕಾಲ ಸ್ಮರಣೆ ಮಾಡುವಂತಹುದ್ದು ಎಂದು ಅಭಿಪ್ರಾಯ ಪಟ್ಟರು.

ಪ್ರೌಢದೇವರಾಯನ ಕಾಲವು ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಒಂದು ಪ್ರಮುಖ ಘಟ್ಟ. ಲಕ್ಕಣ್ಣ ದಂಡೇಶ, ಜಕ್ಕಣ್ಣಾರ್ಯ, ಕುಮಾರ ಬಂಕನಾಥ, ಮಹಾಲಿಂಗದೇವ,ಕೆರೆಯ ಪದ್ಮರಸ, ಚಾಮರಸ, ನಾಗಿದೇವ, ಕಲ್ಲುಮಠದ ಪ್ರಭುದೇವರು ಹೀಗೆ ಹಲವಾರು ದಿಗ್ಗಜರ ಹೆಸರುಗಳನ್ನು ಉಲ್ಲೇಖಿಸಿದರು

ಇದೊಂದು ಸಾಹಿತ್ಯದ ಸಂಗ್ರಾಮ ಮತ್ತು ಸಂಕ್ರಾಂತಿಯ ಜೊತೆಗೆ ಭಕ್ತಿ ಸಾಹಿತ್ಯದ ವೈಶಿಷ್ಟ್ಯವೂ ಆಗಿತ್ತು
ಈ ಕಾಲದಲ್ಲಿ ಹಲವಾರು ವಚನಕಾರರ ಹೆಸರು ಮತ್ತು ಅವರ ವಚನಗಳು ಬೆಳಕಿಗೆ ಬಂದವು ಎಂದು ತಿಳಿಸುತ್ತಾ ಶರಣ ಸಾಹಿತ್ಯದ ಪುನರುಜ್ಜೀ ವನವನ್ನು ಎಳೆ ಎಳೆಯಾಗಿ ಬಿಡಿಸಿ ಹೇಳಿದರು

ಅಧ್ಯಕ್ಷರಾದ ಡಾ. ಶಶಿಕಾಂತ ಪಟ್ಟಣ ಅವರು ಲಿಂಗಾಯತ ಮತ್ತು ಶರಣ ಪರಂಪರೆ, ವಚನ ಗಳು ಪಾರಿವಾರಿಕ ಭಾಷೆಯಾಗಿದ್ದು, ಪ್ರೌಢ ದೇವರಾಯನ ಕಾಲದ ಫಾಲ್ಗುರಿಕೆ ಸೋಮನಾಥ, ಶೃಂಗೀರಾಜ, ಚಾಮರಸ ಮುಂತಾದವರ ಕೃತಿಗಳ ಉಲ್ಲೇಖ, ವಿಜಯನಗರ ಎಂದರೆ ಪ್ರೌಢದೇವರಾಯ, ಪ್ರೌಢದೇವರಾಯ ಎಂದರೆ ವಿಜಯನಗರ ಎನ್ನುವ ಹೆಗ್ಗಳಿಕೆ ನೂರಾಒಂದು ವಿರಕ್ತರಿಗೆ ಕಂದಾಯ ಗ್ರಾಮಗಳನ್ನು ಬಳುವಳಿಯಾಗಿ ಕೊಟ್ಟಿದ್ದು,ಅದರ ಆದಾಯದಿಂದ ಅವರು ತತ್ವ ಪ್ರಚಾರ ಮಾಡುತ್ತಿದ್ದುದರ ಜೊತೆಗೆ ಬುದ್ಧ, ಬಸವ, ಅಂಬೇಡ್ಕರ್ ಅವರನ್ನು ನೆನೆಯುತ್ತ ಇನ್ನೂ ಹಲವಾರು ವಿಷಯಗಳ ಬಗೆಗೆ ಗಮನಾ ರ್ಹವಾಗಿ ಮಾತನಾಡಿದರು.

ಇಂದಿನ ದತ್ತಿ ದಾಸೋಹಿಗಳಾದ ಶರಣೆ ಇಂದಿರಾ ಮೋಟೆಬೆನ್ನೂರ ಅವರು ತಮ್ಮ ತಾಯಿ ಲಿಂ. ಮಾತೋಶ್ರೀ ಪಾರ್ವತಿದೇವಿ ಅವರು ಶಾಲಾ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದವರು. ಪುಸ್ತಕ ಪ್ರೇಮಿಗಳು. ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಅಪಾರ ಕಾಳಜಿ ಹಾಗೂ ಕಳಕಳಿ ಉಳ್ಳವರು ಹಾಗೂ ಆ ನಿಟ್ಟಿನಲ್ಲಿ ತಮ್ಮ ಕೈಲಾದಷ್ಟು ಸಹಾಯ ಸಹಕಾರ ನೀಡಿದಂಥವರು ಮತ್ತು ಕಾಯಕ, ದಾಸೋಹ ಪ್ರಸಾದಗಳನ್ನು ತಮ್ಮ ನಡೆ ನುಡಿಯಲ್ಲಿ ಅಳವಡಿಸಿಕೊಂಡವರು ಎನ್ನುವುದನ್ನು ಅತ್ಯಂತ ಭಾವುಕರಾಗಿ ಹಂಚಿಕೊಂಡರು.

ಶರಣೆ ಪ್ರೇಮಕ್ಕ ಹೊರಟ್ಟಿ ಅವರ ವಚನ ಪ್ರಾರ್ಥನೆ,    ಡಾ. ದಾನಮ್ಮ ಝಳಕಿ ಅವರ ಸ್ವಾಗತಪರ ನುಡಿಗಳು,ಶರಣೆ ವಿದ್ಯಾ ಮಗ್ದುಮ್ ಅವರ ವಚನ ಮಂಗಳ, ಡಾ. ಶಶಿಕಾಂತ ಪಟ್ಟಣ ಅವರ ನಿರೂಪಣೆಯೊಂದಿಗೆ ಕಾರ್ಯಕ್ರಮ ಅತ್ಯಂತ ಯಶಸ್ವಿ ಯಾಗಿ ನಡೆಯಿತು.

ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆ

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group