ಗುರ್ಲಾಪೂರ– ಸಮೀಪದ ಇಟನಾಳ ಗ್ರಾಮದಲ್ಲಿ ಮಂಗಳವಾರ ದಿ.3 ರಂದು ರೇಣುಕಾದೇವಿ ಜಾತ್ರೆ ಅತೀ ವಿಜೃಂಭಣೆಯಿಂದ ಜರಗುವುದು.
ಮುಂಜಾನೆ 7 ಗಂಟೆಗೆ ಹೋಮದ ಪೂಜೆ ಯೊಂದಿಗೆ ಜಾತ್ರೆಗೆ ಚಾಲನೆ ನೀಡುವರು ನಂತರ ರೇಣುಕಾದೇವಿಗೆ ರುದ್ರಾಭಿಷೇಕ ಮಾಡಿ ದೇವಿಯನ್ನು ಶೃಂಗಾರ ಮಾಡುವರು 10 ಗಂಟೆಗೆ ಗ್ರಾಮದಿಂದ ಮುತೈದೆಯರಿಂದ ಆರತಿ ಅಂಬಲಿ ಕೊಡಗಳೊಂದಿಗೆ ಶ್ರೀ ರೇಣುಕಾದೇವಿ ಜಗ ಹೊತ್ತುಕೊಂಡು ಸಕಲ ವಾದ್ಯ ಮೇಳದೊಂದಿಗೆ ಊರಿನ ಗಣ್ಯಮಾನ್ಯರು ಭಕ್ತಾದಿಗಳು ಮಕ್ಕಳು ಕೂಡಿಕೊಂಡು ಶ್ರೀ ರೇಣುಕಾದೇವಿ ದೇವಸ್ಥಾನದವರೆಗೆ ಹೋಗುವರು ದೇವಸ್ಥಾನದಲ್ಲಿರುವ ಶ್ರೀ ಲಕ್ಷ್ಮೀದೇವಿಯ ಪಲ್ಲಕ್ಕಿಯೊಂದಿಗೆ ಗ್ರಾಮದ ಪ್ರದಕ್ಷಿಣೆ ಮಾಡಿಕೊಂಡು ಗ್ರಾಮದಲ್ಲಿರುವ ಸಕಲ ದೇವಸ್ಥಾನಗಳಿಗೆ ತೆರಳಿ ಕಾಯಿ ಕರ್ಪುರ ನೈವೇದ್ಯ ಅರ್ಪಿಸಿ ತಮ್ಮ ಭಕ್ತಿಯನ್ನು ಅರ್ಪಿಸುವರು.
ಈ ಜಾತ್ರೆಯ ದಿವ್ಯ ಸಾನ್ನಿಧ್ಯವನ್ನು ಮೂಡಲಗಿಯ ಸಿದ್ದ ಸಂಸ್ಥಾನ ಮಠದ ಶ್ರೀ ದತ್ತಾತ್ರೇಯಬೋಧ ಮಹಾಸ್ವಾಮಿಗಳು ಹಾಗೂ ಗ್ರಾಮದ ಪ್ರವಚನದ ಮಾಣಿಕ್ಯ ಶ್ರೀ ಸಿದ್ದೇಶ್ವರ ಶರಣರು ಮಾರ್ತಾಂಡ ಮಲ್ಲಯ್ಯ ಆರಾಧಕರು ಆಶೀರ್ವಚನಮಾಡುವರು ನಂತರ ಮಧ್ಯಾಹ್ನ 12.ಗಂಟೆಗೆ ಹುಟ್ಟಿಗೆ ಉಡುವ ಕಾರ್ಯಕ್ರಮ ಜರಗುವದು ನಂತರ ಬಂದ ಭಕ್ತರಿಗೆ ಮಹಾ ಪ್ರಸಾದ ಮಾಡಲಾಗುವದು. ಸಂಜೆ 5 ಗಂಟೆಗೆ ಚೌಡಕಿ ಪದಗಳು ಜರಗುತ್ತವೆ ಎಂದು ಜಾತ್ರಾ ಕಮಿಟಿಯವರು ತಿಳಿಸಿರುತ್ತಾರೆ.