ಮೂಡಲಗಿ: ಗುತ್ತಿಗೆ ಪದ್ದತಿ ಬದಲು ಪೌರ ಕಾರ್ಮಿಕರ ಮಾದರಿಯಲ್ಲಿ ಪುರಸಭೆಯಿಂದ ನೇರ ವೇತನಕ್ಕೆ ಒಳಪಡಿಸುವಂತೆ ಆಗ್ರಹಿಸಿ ಇಲ್ಲಿನ ಪುರಸಭೆಯಲ್ಲಿ ಕಾರ್ಯ ನಿರ್ವಹಿಸುವ ವಾಹನ ಚಾಲಕರು,ವಾಟರ ಮೆನ್ ಡಾಟಾ ಎಂಟ್ರಿ ಆಪರೇಟರ್ ಇತ್ಯಾದಿ ಹೊರಗುತ್ತಿಗೆ ಕಾರ್ಮಿಕರು ತಹಸೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಇತ್ತೀಚೆಗೆ ಕರ್ನಾಟಕ ರಾಜ್ಯ ಪಾಲಿಕೆ, ನಗರಸಭೆ,ಪುರಸಭೆ, ಪಟ್ಟಣ ಪಂಚಾಯಿತಿ ಹೊರ ಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಎಮ್ ಬಿ ನಾಗಣ್ಣ ಗೌಡ ಅವರು ರಾಜ್ಯ ಪ್ರವಾಸ ಮಾಡಿ 288 ಸ್ಥಳೀಯ ಸಂಸ್ಥೆಗಳ ಹೊರ ಗುತ್ತಿಗೆಯ ನೌಕರರಿಗೆ ಆಯಾ ಸ್ಥಳೀಯ ಸಂಸ್ಥೆಗಳಿಂದ ನೇರ ವೇತನ ಪಾವತಿಸಬೇಕು ಎಂದು ಆಗ್ರಹ ಪಡಿಸಲು ತಹಸೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಬೇಕು ಎಂದು ಸೂಚಿಸಿದ ಪ್ರಕಾರ ಇಲ್ಲಿನ ಪುರಸಭೆಯ ವಿವಿಧ ವೃಂದದಲ್ಲಿ ಕಾರ್ಯ ನಿರ್ವಹಿಸುವ 23 ಹೊರಗುತ್ತಿಗೆ ನೌಕರರಿಂದ ಈ ಮನವಿಯನ್ನು ಸಲ್ಲಿಸಲಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರಮೇಶ ಆಲಗೂರ, ಪಾಂಡು ಮುತಗಿ, ಶಂಕರ ಹಂದಿಗುಂದ, ಲಕ್ಕಪ್ಪ ಗಾಜಿ, ಸಂತೋಷ ನಾಯಿಕ, ಯಶವಂತ ಶಿದ್ಲಿಂಗಪ್ಪಗೋಳ, ರವಿ ಕೆಳಗೇರಿ, ನಾಗಪ್ಪ ತಪ್ಸಿ, ಮಿಥುನ ಸಣ್ಣಕ್ಕಿ, ಶಿವಬೋಧ ಕೊಪ್ಪದ, ಶಿವಬೋಧ ಕಪ್ಪಲಗುದ್ದಿ, ಧರೆಪ್ಪ ಕಪ್ಪಲಗುದ್ದಿ, ಅಬ್ದುಲ್ ಪೀರಜಾದೆ, ಈರಪ್ಪ ಕಂಬಾರ, ಪ್ರಕಾಶ ಮಾರಿಹಾಳ, ಶಿವಪ್ಪ ಪೂಜೇರ ಸೇರಿದಂತೆ ಇನಿತ್ನರರು ಇದ್ದರು.