ಸಿಂದಗಿ: ಕರ್ನಾಟಕ ಮುಲ್ಲಾ ಅಭಿವೃದ್ಧಿ ನಿಗಮ, ರಚನೆ ಮಾಡಿ ಜಾರಿಗೆ ತರುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಮುಲ್ಲಾ ಸಮಾಜ ಬಂಧುಗಳು ತಹಶೀಲ್ದಾರ ಮುಖೇನ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಡಾ/ಅಬುಬಕರ ಮುಲ್ಲಾ ಮಾತನಾಡಿ, ಕರ್ನಾಟಕದ ಸುಮಾರು 105 ವಿಧಾನಸಭಾ ಮತಕ್ಷೇತ್ರಗಳಲ್ಲಿ ಪ್ರತಿ ಕ್ಷೇತ್ರದ ಮತದಾರರು 5000- 8000 ಮತಗಳನ್ನು ನೀಡುವ ಹಕ್ಕುದಾರರಾಗಿದ್ದಾರೆ. ಕರ್ನಾಟಕದ ಒಟ್ಟು ಮುಸ್ಲಿಂ ಸಮುದಾಯದ ಜನತೆಯಲ್ಲಿ 13.00 ಲಕ್ಷಕ್ಕಿಂತ ಅಧಿಕ ಜನಸಂಖ್ಯೆ ಹೊಂದಿರುವ ಪ್ರಮುಖ ಮುಲ್ಲಾ ಸಮುದಾಯವಾಗಿದೆ. ಮುಲ್ಲಾ ಎಂಬ ವ್ಯಕ್ತಿಯು ಇತಿಹಾಸದ ಪರಂಪರೆಯಲ್ಲಿ ಪ್ರಮುಖ ಕಾರ್ಯಕ್ರಮಗಳಲ್ಲಿ ಮುಂಚೂಣಿಯ ವ್ಯವಸ್ಥಾಪಕನಾಗಿದ್ದನು. ಆದರೆ ಇಂದು ಆ ಹಕ್ಕನ್ನು ಕಳೆದುಕೊಂಡು ಕಂಗಾಲಾಗಿದ್ದಾನೆ. ಮುಸ್ಲಿಂ ಸಮುದಾಯದ ಪ್ರಮುಖ ಕಾರ್ಯಗಳಲ್ಲಿ ಮುಂದಾಳತ್ವ ವಹಿಸಿ ಮುಖ್ಯ ಪಾತ್ರ ವಹಿಸುತ್ತಿದ್ದಾನೆ. ಬೇರೆ ಸಮುದಾಯಗಳ ಜೊತೆ ಸೌಹಾರ್ದತೆಯಾಗಿ ಹೊಂದಿಕೊಂಡು ಹೋಗುವ ಮುಖ್ಯ ಮುಲ್ಲಾ ಸಮುದಾಯವಾಗಿದೆ. ಮುಲ್ಲಾ ಸಮುದಾಯದ ಜನರು ಕಡುಬಡತನದಿಂದ ಹಿಂದುಳಿದ ಸಮುದಾಯವಾಗಿದೆ. ಸಮಾಜಿಕವಾಗಿ ಉಚಿತ ಸೇವೆಯನ್ನು ಮಾಡುತ್ತಾ ಪ್ರತಿ ವರ್ಷ ಮೊಹರಂ ತಿಂಗಳುಗಳಲ್ಲಿ ಹಳ್ಳಿ, ನಗರಗಳಲ್ಲಿ ಕೂಡಾ ಸೇವಾ ಮಾಡುವದು ಎದ್ದು ಕಾಣುತ್ತದೆ. ಗ್ರಾಮದ ಮುಖಂಡರಾದ ಪಂಚರು, ಗೌಡರು, ಕುಲಕರ್ಣಿ, ವಾಲಿಕಾರ ಜೊತೆಗೆ ಸದಸ್ಯತ್ವ ಹೊಂದಿದ್ದನು. ಈ ಹಿಂದಿನ ಇತಿಹಾಸದ ಪುಟ ತಿರುವಿ ನೋಡಿದಾಗ ಸರಕಾರವು ಪ್ರತಿಯೊಬ್ಬರಿಗೆ ಪಿಂಚಣಿ, ಇನಾಮಿ ಜಮೀನು, ನೀಡಿ ಗೌರವಿಸಿತ್ತು. ಆದರೆ ಇಂದು ಎಲ್ಲವನ್ನು ಮರೆತು ಮುಲ್ಲಾ ಸಮುದಾಕ್ಕೆ ನೀಡಿದ ಇನಾಮಿ ಜಮೀನನ್ನು ಮರುಪಡೆದು ವಕ್ಫ್ ಆಸ್ತಿ ಎಂದು ಘೋಷಣೆ ಮಾಡುತ್ತಿರುವದು ದುಃಖಕರ ಸಂಗತಿ ಸರಕಾರವು ಮಲತಾಯಿ ಧೋರಣೆ ತೋರದೆ ಸರ್ವರಿಗೂ ಒಂದೇ ಕಾನೂನು ಪರಿಪಾಲನೆ ಮಾಡಿ ಮುಲ್ಲಾ ಸಮುದಾಯವನ್ನು ಸಂರಕ್ಷಿಸಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ಮುಲ್ಲಾ ಅಭಿವೃದ್ಧಿ ನಿಗಮವನ್ನು ಜಾರಿ ಮಾಡಿ ಸಮುದಾಯದ ಕಡುಬಡತನದಲ್ಲಿ ದುಡಿದು ತಿನ್ನುವ ಕೂಲಿ ಕಾರ್ಮಿಕರು ಇಂದು ಬೀದಿಗೆ ಬರುವಂತಾಗಿದೆ. ಕರ್ನಾಟಕ ಮುಲ್ಲಾ ಅಭಿವೃದ್ಧಿ ನಿಗಮ ಜಾರಿಯಾಗಬೇಕು. ಗ್ರಾಮ ಹಾಗೂ ನಗರದಲ್ಲಿ ಆಚರಿಸುತ್ತಿರುವ ಮೋಹರಂ ಹಬ್ಬಕ್ಕೆ ಸರಕಾರವು ಸಹಾಯಧನ ನೀಡಬೇಕು, ಮೋಹರಂ ಹಬ್ಬದ ರುವಾರಿಗಳು ಅಥವಾ ದರ್ಗಾದ ಮುತವಲ್ಲಿ ಇವರಿಗೆ ಮಾಸಿಕ ಪಿಂಚಣಿ ನೀಡಬೇಕು. ಬೇರೆ-ಬೇರೆ ರಾಜ್ಯಗಳಲ್ಲಿ ಜಾರಿಯಲ್ಲಿರುವ ಮುಲ್ಲಾ ಸಮುದಾಯವನ್ನು ಕೆಟಗೇರಿ-1 ವರ್ಗಕ್ಕೆ ಸೇರಿಸಬೇಕು. ಮುಲ್ಲಾ ಸಮುದಾಯದ ಕುಟುಂಬಗಳಲ್ಲಿ ಶಿಕ್ಷಣ ಹಾಗೂ ಸರಕಾರಿ ನೌಕರಿ ವಂಚಿತರಾಗಿದ್ದು, ಅವರನ್ನು ಆರ್ಥಿಕವಾಗಿ, ಸಮಾಜಿಕವಾಗಿ, ಹಾಗೂ ಶೈಕ್ಷಣಿಕವಾಗಿ ಸಮೃದ್ಧಿ ಪಡಿಸುವ ಸಲುವಾಗಿ ಕರ್ನಾಟಕ ಸರಕಾರವು ಆದಷ್ಟು ಬೇಗ ನಮ್ಮ ಈ ಎಲ್ಲ ಬೇಡಿಕೆಗಳನ್ನು ಪೂರೈಸಿ ಜಾರಿಗೆ ತರಬೇಕು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಮುನವರ ಹುಸೇನ್ ಮುಲ್ಲಾ, ಇಮ್ತಿಯಾಜ್ ಮುಲ್ಲಾ, ಸಂಚಾಲಕರಾದ ಮೊಹಮದ್ ರಫಿಕ್ ಮುಲ್ಲಾ, ನಗರ ಅಧ್ಯಕ್ಷ ಅಬ್ದುಲ್ ಹಕ್ ಮುಲ್ಲಾ, ಕಾರ್ಯದರ್ಶಿ ಶಫೀಕ ಮುಲ್ಲಾ, ಅನ್ವರ್ ಮುಲ್ಲಾ, ಕೆ ಡಿ ಮುಲ್ಲಾ,ಎಸ್ ಎ ಮುಲ್ಲಾ, ಮೊಹಮದ್ ಹುಸೇನ್ ಮುಲ್ಲಾ ,ಯುಸುಫ್ ಮುಲ್ಲಾ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.