ಬಾಗಲಕೋಟೆ – ಕನಾ೯ಟಕ ಸಕಾ೯ರವು ಬಡವರಿಗೆ. ದೀನ ದಲಿತರಿಗೆ, ಮಹಿಳೆಯರಿಗೆ, ವಯೋವೃದ್ಧರಿಗೆ ಸೇರಿದಂತೆ ಅನೇಕ ಅಸಹಾಯಕರಿಗೆ ಗ್ಯಾರಂಟಿ ಯೋಜನೆಗಳನ್ನು ನೀಡಿದೆ. ಆದರೆ ಅಂತಹ ವಿಶೇಷ ಯೋಜನೆಯನ್ನು ಸರ್ಕಾರ ಕಲಾವಿದರಿಗೆ ನೀಡಿಲ್ಲ. ಆದ್ದರಿಂದ ಕಲೆಯಿಂದ ಉಪಜೀವನ ಮಾಡುತ್ತಿರುವ ಕಲಾವಿದರಿಗಾಗಿ ಕುಟುಂಬ ನಿರ್ವಹಣೆ ಮಾಡಲು ವಿಶೇಷ ಯೋಜನೆಯನ್ನು ರೂಪಿಸಬೇಕೆಂದು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶನಿವಾರ ದಿ 16 ರಂದು ಮುಂಜಾನೆ 10-30 ಕ್ಕೆ ಮನವಿಯನ್ನು ಸಲ್ಲಿಸಲಾಗುವದು ಎಂದು ಕರ್ನಾಟಕ ರಾಜ್ಯ ಸರ್ವ ಕಲಾವಿದರ ಒಕ್ಕೂಟದ ಅಧ್ಯಕ್ಷರಾದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಶರಣಬಸವಶಾಸ್ತ್ರಿಗಳು ತಿಳಿಸಿದ್ದಾರೆ.
ಅವರು ಪತ್ರಿಕೆಯೊಂದಿಗೆ ಮಾತನಾಡುತ್ತಾ ರಾಜ್ಯದ ಎಲ್ಲ ಜನಪದರಿಗೆ, ಸಂಗೀತಗಾರಿಗೆ ವಾದ್ಯ ಕಲಾವಿದರಿಗೆ ಹಾಗೂ ಬಯಲು ರಂಗಭೂಮಿ ಮತ್ತು ವೃತ್ತಿ ರಂಗಭೂಮಿಯ ಕಲಾವಿದರಿಗೆ ಹಾಗೂ ಅವರ ಕುಟುಂಬಕ್ಕೆ ನೆರವಾಗುವ ಐದು ಬೇಡಿಕೆಯನ್ನು ಪೂರೈಸಲು ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಗುವದು.ಕಾರಣ ಬಾಗಲಕೋಟೆಯ ಜನಪದಗಾರರಾದ ಸೋಬಾನೆ ಪದಗಳ ಕಲಾವಿದರು ಸೇರಿದಂತೆ ಡೊಳ್ಳಿನಪದ, ಭಜನೆ, ಕರಡಿವಾದನ, ಸಂಬಾಳವಾದನ, ಖಣಿ ವಾದನ, ಹಲಗೆ ವಾದನ, ತಾಸೆವಾದನ, ಡೊಳ್ಳಿನ ವಾಲಗ, ಡೊಳ್ಳಿನ ಕೈ ಪೆಟ್ಟು .ಪಾರಿಜಾತ, ಬಯಲಾಟ, ನಾಟಕ, ಸಂಗೀತ ಸೇರಿದಂತೆ ವಿವಿಧ ಕ್ಷೇತ್ರದ ಕಲಾವಿದರು ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಶನಿವಾರ ಮುಂಜಾನೆ 10 ಗಂಟೆಗೆ ಹಾಜರಿರಲು ಎಲ್ಲ ಕಲಾವಿದರಿಗೆ ವಿನಂತಿಸಿದ್ದಾರೆ.
ಒಕ್ಕೂಟದ ಕಾರ್ಯದರ್ಶಿಗಳಾದ ಪವಿತ್ರ ಜಕ್ಕಪ್ಪನವರ, ಉಪಾಧ್ಯಕ್ಷರಾದ ಶಂಕರಪ್ಪ ತಂಬಾಕದ, ಗೌರವಾಧ್ಯಕ್ಷ ಚಿನ್ನಪ್ಪ ಗೌಡ್ರು ಜಲಗೇರಿ, ಯಲ್ಲಪ್ಪ ಪೂಜಾರ, ಈಶ್ವರ ಹೊರಟ್ಟಿ, ಶಂಕರ ಲಮಾಣಿ ಉಪಸ್ಥಿತರಿದ್ದರು