ಗೋಕಾಕ ಸಮಾವೇಶ ಭಾಗವಹಿಸಲು ಮನವಿ

Must Read

ಮೂಡಲಗಿ: ಗೋಕಾಕ ಸರ್ಕಾರಿ ಆಸ್ಪತ್ರೆಯ ಎದುರಿನ  ನ್ಯೂ ಇಂಗ್ಲೀಷ ಶಾಲಾ ಮೈದಾನ ಮೈದಾನದಲ್ಲಿ ನ.13 ರಂದು ಮಧ್ಯಾಹ್ನ 1 ಗಂಟೆಗೆ ನಡೆಯುವ ಪಂಚಮಸಾಲಿಗಳಿಗೆ 2ಎ ಮೀಸಲಾತಿಯ ಹಕ್ಕೊತ್ತಾಯದ “ಪಂಚಮಸಾಲಿ ಪ್ರತಿಜ್ಞಾ ಪಂಚಾಯತ ಕಾರ್ಯಕ್ರಮದ ಸಮಾವೇಶದಲ್ಲಿ ಜಿಲ್ಲೆಯ ಸಮಾಜ ಭಾಂಧವರು ಭಾಗವಹಿಸಿ ಯಶಸ್ವಿಗೊಳಿಸಿಬೇಕೆಂದು ಪಂಚಮ ಸಾಲಿ ಸಮಾಜದ ಸಂಘಟನೆಯ ಬೆಳಗಾವಿ ಜಿಲ್ಲಾಕಾರ್ಯಾಧ್ಯಕ್ಷ ನಿಂಗಪ್ಪ ಪಿರೋಜಿ ತಿಳಿಸಿದ್ದಾರೆ.

ಮೂಡಲಗಿ ಪತ್ರಿಕಾ ಪ್ರಕಟನೆ ನೀಡಿದ ಅವರು ಪ್ರತಿ ಗ್ರಾಮಗಳಲ್ಲಿ “ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ಸಭೆಗಳು” ಪೂರ್ಣಗೊಳ್ಳುವುದರಿಂದ, ಗೋಕಾಕ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಯಲ್ಲಿ  ಪಂಚಮಸಾಲಿ ಬೃಹತ್ ಸಮಾವೇಶವನ್ನು ಪಂಚಮಸಾಲಿ ಪ್ರಥಮ ಜಗದ್ಗುರು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಜರುಗಲಿದೆ.

ಗೋಕಾಕ್ ಮತಕ್ಷೇತ್ರದ ಸುತ್ತಮುತ್ತಲಿನ ತಾಲೂಕುಗಳ ಮತ್ತು ಎಲ್ಲಾ  ಗ್ರಾಮಗಳಿಂದ ಪಂಚಮಸಾಲಿ ಕುಲಬಾಂಧವರು ತಪ್ಪದೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬೃಹತ್ ಸಭೆಯನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.

Latest News

ಶಿರೀಷಗೆ ಗಡಿತಿಲಕ, ಶಶಿಗೆ ಜನ್ನಾ ಪ್ರಶಸ್ತಿ

ಬೆಳಗಾವಿ - ಇಲ್ಲಿಯ ಬಿ ಎ ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಪ್ರತಿವರ್ಷ ಕೊಡಮಾಡುವ ಕನ್ನಡ ಗಡಿತಿಲಕ ಪ್ರಶಸ್ತಿಗೆ ಶಿರೀಷ ಅವರು ಆಯ್ಕೆಯಾಗಿದ್ದಾರೆ...

More Articles Like This

error: Content is protected !!
Join WhatsApp Group