Homeಸುದ್ದಿಗಳುಜಾನುವಾರು ವೈದ್ಯ ಸಿಬ್ಬಂದಿ ಒದಗಿಸಲು ಆಗ್ರಹ

ಜಾನುವಾರು ವೈದ್ಯ ಸಿಬ್ಬಂದಿ ಒದಗಿಸಲು ಆಗ್ರಹ

ಸಿಂದಗಿ: ತಾಲೂಕಿನ ಗೋಲಗೇರಿ ಗ್ರಾಮದ ಪಶು ಆಸ್ಪತ್ರೆಗೆ ವೈದ್ಯಾಧಿಕಾರಿ ಸೇರಿದಂತೆ ಸಿಬ್ಬಂದಿ ನೇಮಕ ಮಾಡುವಂತೆ ಆಗ್ರಹಿಸಿ ಕರ್ನಾಟಕ ಟಿಪ್ಪು ಸುಲ್ತಾನ ಮಹಾವೇದಿಕೆ ಕಾರ್ಯಕರ್ತರು ಮತ್ತು ರೈತರು ಪ್ರತಿಭಟನೆ ನಡೆಸಿ ತಹಶೀಲ್ದಾರರ ಮೂಲಕ ಸರಕಾರಕ್ಕೆ ಮನವಿ ರವಾನಿಸುವಂತೆ ಕಂದಾಯ ಅಧಿಕಾರಿ ಎಚ್.ಕೆ.ಅಂಗಡಿ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಯುವ ಘಟಕದ ಅಧ್ಯಕ್ಷ ಮೋದಿನ ಶಾಬಾದಿ, ಮಾತನಾಡಿ, ಹೈನುಗಾರಿಕೆ ಮತ್ತು ಪಶು ಸಾಕಾಣಿಕೆ ಗ್ರಾಮೀಣ ಭಾಗದಲ್ಲಿ ಮಾತ್ರ ಉಳಿದುಕೊಂಡಿದ್ದು ಅಲ್ಲದೆ ಗ್ರಾಮೀಣ ಭಾಗದಲ್ಲಿ ರೈತರು ಕೃಷಿಯ ಜೊತೆಗೆ ಜಾನುವಾರುಗಳನ್ನು ನೆಚ್ಚಿ ಬದುಕು ಸಾಗಿಸುತ್ತಿದ್ದಾರೆ ಇವುಗಳ ಚಿಕಿತ್ಸೆಗಾಗಿ ಗೋಲಗೆರಿ ಗ್ರಾಮದಲ್ಲಿ ಇರುವ ಪಶು ಆಸ್ಪತ್ರೆಗೆ ಯಾವೊಬ್ಬ ಸಿಬ್ಬಂದಿ ಇಲ್ಲದಿರುವುದರಿಂದ ಜಾನುವಾರುಗಳಿಗೆ ಯಾವುದೇ ಸೂಕ್ತ ಚಿಕಿತ್ಸೆ ದೊರಕದ ಕಾರಣ ಇತ್ತೀಚೆಗೆ 20ಕ್ಕೂ ಅಧಿಕ ಕುರಿಗಳು ಸಾವನ್ನಪ್ಪಿವೆ. ಅಲ್ಲದೆ ಅನೇಕ ಗ್ರಾಮಗಳಲ್ಲಿ ಹಲವಾರು ರೋಗಗಳಿಗೆ ತುತ್ತಾಗಿ ಸಾವನ್ನಪ್ಪುವ ಸಂಖ್ಯೆ ಹೆಚ್ಚಾಗಿದೆ.ಕಾರಣ ಜಾನುವಾರುಗಳ ರಕ್ಷಣೆಗೆ ಮುಂದಾಗಬೇಕು ಮತ್ತು ಜಿಲ್ಲಾ, ತಾಲೂಕು ಆಡಳಿತದ ಮೂಲಕ ವೈದ್ಯ ಸಿಬ್ಬಂದಿಯು ವಾರದಲ್ಲಿ ಗ್ರಾಮಗಳಲ್ಲಿ ಒಂದು ದಿನ ಚಿಕಿತ್ಸೆ ಸಿಗುವಂತಾಗಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸಲೀಂ ಮುಲ್ಲಾ, ಬಸವರಾಜ ತಳವಾರ, ನಜೀರ ಕೊರಬು, ಪ್ರಕಾಶ ತಳವಾರ, ಗೋಲ್ಲಾಳ ತಳವಾರ, ಮಹಿಬೂಬ ಶಾಬಾದಿ, ರಫೀಕ ಮುಲ್ಲಾ, ಬಂದಗೀಸಾಬ ಮೋಮಿನ, ರಾವುತಪ್ಪ ನಾಯ್ಕೋಡಿ, ಕಲ್ಯಾಣವ್ವ ಮಾದರ, ಮಲ್ಲಿಕಾರ್ಜುನ ಖಾಜೆಪಟೇಲ ಹಳಿಮನಿ, ಶಿವಶರಣ ಚಲವಾದಿ, ಶಂಕರಗೌಡ ಮೇಲಿನಮನಿ, ಖಾಸಿಂ ಸುಂಗಠಾಣ, ಹುಸೇನಸಾಬ ಶಾಬಾದಿ, ರಾಮು ತಳವಾರ, ಶರಣಗೌಡ ಹೊಸಮನಿ, ಬಾಗಪ್ಪ ಕೋಟಿಗೋಳ, ನಿಂಗಪ್ಪ ಏವೂರ, ರಾವುತಪ್ಪ ನಾಗರಹಳ್ಳಿ, ಲಲಸಾಬ ಸುಂಗಠಾಣ, ಮಲ್ಲಪ್ಪ ಬೆಂಗಲೂರ, ಅವಮ್ಮ ತಳವಾರ ಸೇರಿದಂತೆ ಅನೇಕರು ಇದ್ದರು.

RELATED ARTICLES

Most Popular

error: Content is protected !!
Join WhatsApp Group