spot_img
spot_img

ಬೋರವೆಲ್ ರಿಪೇರಿ ಮಾಡಿ ನೀರಿನ ಬವಣೆ ನೀಗಿಸಲು ಆಗ್ರಹ

Must Read

- Advertisement -

ಸಿಂದಗಿ: ಪಟ್ಟಣದ 22ಮತ್ತು 23 ವಾರ್ಡುಗಳಲ್ಲಿ ಕೆಟ್ಟು ನಿಂತಿರುವ ಬೋರವೆಲ್ ಗಳನ್ನು ರಿಪೇರಿ ಮಾಡಿಸುವಂತೆ ಆಗ್ರಹಿಸಿ ಪುರಸಭೆ ಕಾರ್ಯಾಲಯಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿ ಪುರಸಭೆ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಯುವ ಘಟಕ ಅಧ್ಯಕ್ಷ ಸಲೀಂ ಬಡಿಗೇರ ಮಾತನಾಡಿ, ಪಟ್ಟಣದ 22 ಮತ್ತು 23ನೇ ವಾರ್ಡಗಳಲ್ಲಿ ಅತೀ ಹೆಚ್ಚು ಕಡು ಬಡವ ಮತ್ತು ಕೂಲಿ ಕಾರ್ಮಿಕರು ವಾಸಿಸುವ ವಾರ್ಡಗಳಾಗಿವೆ ಮತ್ತು ಇವುಗಳು ಸಿಂದಗಿ ನಗರದ ಅತೀ ದೊಡ್ಡ ವಾರ್ಡಗಳಾಗಿವೆ. ಈ ವಾರ್ಡಗಳಲ್ಲಿ ಕನಿಷ್ಟ 4ರಿಂದ 5 ಸಾವಿರ ಜನ ವಾಸವಾಗಿದ್ದಾರೆ. ಇಂತಹ ಬಡವರ ಕಾಲೋನಿಗಳಾಗಿರುವ ವಾರ್ಡಗಳಲ್ಲಿ ಬೆರಳೆಣಿಕೆಯಷ್ಟೇ ಬೋರವೆಲ್ ಗಳಿವೆ ಈ ಬೋರವೆಲ್ ನೀರನ್ನು ಈ ಎರಡು ವಾರ್ಡಿನ ಜನರ ಜೊತೆ ಸುತ್ತ ಮುತ್ತ ಇರುವ 21-20 ನೇ ವಾರ್ಡಿನ ನಿವಾಸಿಗಳು ಅವಲಂಬಿತರಾಗಿದ್ದಾರೆ. ಇಷ್ಟೊಂದು ಜನರು ನೀರಿಗಾಗಿ ಅವಲಂಬಿತವಾಗಿರುವ ಈ ಬೋರವೆಲ್‍ಗಳು ಸದ್ಯ ಕೆಟ್ಟು ನಿಂತು ಸುಮಾರು 3-4 ತಿಂಗಳು ಕಳೆಯುತ್ತಾ ಬಂದಿವೆ. ಇದರ ಕುರಿತು ಪುರಸಭೆಯ ಅಧಿಕಾರಿಗಳು, ಅಧ್ಯಕ್ಷರ ಗಮನಕ್ಕೆ ತಂದರು ಯಾವುದೇ ಪ್ರಯೋಜನ ಕಂಡಿಲ್ಲ ಇದನ್ನು ನೋಡಿದರೆ ಅಧಿಕಾರಿಗಳು ಸಾಮಾನ್ಯ ಜನರ ಗೋಳನ್ನು ಕೇಳದೇ ಉಳ್ಳವರ ಕೆಲಸ ಮಾಡುತ್ತಾ ಸಾಗುತ್ತಿದ್ದಾರೆ ಮತ್ತು ತಮ್ಮ ಕರ್ತವ್ಯದಲ್ಲಿ ಸೋಂಬೇರಿತನದಿಂದ ನಡೆದುಕೊಳ್ಳುತ್ತಿದ್ದಾರೆ. ಇಂತಹ ಬಿರುಬೇಸಿಗೆಯಲ್ಲಿ ಇಲ್ಲಿನ ನಿವಾಸಿಗಳು ನೀರು ಸಿಗದೇ ಪರದಾಡುತ್ತಿರುವ 22-23ನೇ ವಾರ್ಡಿನ ಜನರ ಬವಣೆ ನೀಗಿಸಲು ಇಲ್ಲಿ ಕೆಟ್ಟು ನಿಂತಿರುವ ಎಲ್ಲ ಬೋರವೆಲ್‍ಗಳನ್ನು ಕೂಡಲೇ ರಿಪೇರಿ ಮಾಡಿಸಿ ಇಲ್ಲಿನ ನಿವಾಸಿಗಳ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು ಮತ್ತು ಬೋರವೆಲ್‍ಗಳ ನಿರ್ವಹಣೆಗಾಗಿ ಪುರಸಭೆಯಿಂದ ಸಿಬ್ಬಂದಿ ನೇಮಕ ಮಾಡಿ ಇಲ್ಲಿನ ಬೋರವೆಲ್‍ಗಳು ಕೆಡದಂತೆ ಗಮನ ಹರಿಸಬೇಕು ಇಲ್ಲದಿದ್ದರೆ ಉಗ್ರವಾದ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮನವಿ ಸ್ವೀಕರಿಸಿದ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ ಮಾತನಾಡಿ, ಸಂಗೋಳ್ಳಿ ರಾಯಣ್ಣ ವೃತ್ತದಿಂದ ಶಾಂತವೀರ ಬಡಾವಣೆಯ 3 ಅಡ್ಡರಸ್ತೆಯ ವರೆಗೆ ಸಿಸಿ ಗಟಾರ ಮತ್ತು ಸಿಸಿ ರಸ್ತೆ ಹಾಕಲಾಗಿದೆ ಇನ್ನು ಕೆಲ ದಿನಗಳಲ್ಲಿ ಪ್ರಾರಂಭವಾಗುತ್ತದೆ ಅಲ್ಲದೆ ಬೋರವೆಲ್‍ಗಳ ನಿರ್ವಹಣೆಮಾಡಿ ನೀರಿನ ಸಮಸ್ಯೆ ಸರಿದೂಗಿಸಬೇಕು ಇಲ್ಲದಿದ್ದರೆ ಅಧಿಕಾರಿ ಎತ್ತಂಗಡಿ ಮಾಡುತ್ತೇನೆ ಇದರ ಬಗ್ಗೆ ವರದಿ ಸಲ್ಲಿಸಿ ಎಂದು ಸೂಚಿಸಿದರು.

- Advertisement -

ಈ ಸಂದರ್ಭದಲ್ಲಿ ಮಾಂತೇಶ ನಾಯ್ಕೋಡಿ, ಶ್ರೀಕಾಂತ ಶಿವಪೂರ, ಸಿದ್ದು ಪೂಜಾರಿ, ಅನೀಲ ಜೇರಟಗಿ, ಶಿವಕುಮಾರ ಕನ್ನೋಳ್ಳಿ, ಮಹಿಬೂಬ ಮುಲ್ಲಾ, ಕುಮಾರ ಮಲಗಾಣ, ಶಿವಪುತ್ರ ತಳವಾರ, ಮುದಕಪ್ಪ ಸೋಲ್ಲಾಪುರ, ರಾಜು ಕರಜದಾರ, ಅಶೋಕ ನೆಗಿನಾಳ, ವಿನೋದ ಬಡಿಗೇರ ಸೇರಿದಂತೆ ಹಲವರು ಇದ್ದರು.

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

  ಮಂಗದಿಂ ಮಾನವನು ಜನಿಸಿಬಂದೆನ್ನುವರು ಈಗಿರುವ ಮಂಗದಿಂ ಜನಿಸನೇಕೆ ? ಮಂಗ ಮಾನಸದಿಂದ ಮನುಜ‌ ಮಾನಸವೆಂಬ ಸಿದ್ಧಾಂತ ಸರಿಯೇನೋ ! - ಎಮ್ಮೆತಮ್ಮ ಶಬ್ಧಾರ್ಥ ಮಂಗ = ಕೋತಿ. ಮಾನಸ = ಮನ. ಮನುಜ...
- Advertisement -

More Articles Like This

- Advertisement -
close
error: Content is protected !!
Join WhatsApp Group