ಮೂಡಲಗಿ: ತಾಲ್ಲೂಕಿನ ಕಲ್ಲೋಳಿ ಪಟ್ಟಣದ ಶ್ರೀ ಹಣಮಂತ ದೇವರ ಜಾತ್ರಾ ಕಾರ್ತಿಕೋತ್ಸವಕ್ಕೆ ಗೋಕಾಕ ಘಟಕ, ರಾಯಬಾಗ ಘಟಕ ಹಾಗೂ ಹುಕ್ಕೇರಿ ಘಟಕ, ಅಥಣಿ ಘಟಕ ಮತ್ತು ಚಿಕ್ಕೋಡಿ ಘಟಕಗಳಿಂದ ಜಾತ್ರಾ ವಿಶೇಷ ಹೆಚ್ಚುವರಿ ಬಸ್ಸು ಬಿಡಬೇಕೆಂದು ಆಗ್ರಹಿಸಿ ಕಲ್ಲೋಳಿಯ ಜೈ ಹನುಮಾನ ಯುವಜನ ಸೇವಾ ಸಂಘದ ಪದಾಧಿಕಾರಿಗಳು ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಿಕ್ಕೋಡಿ ವಿಭಾಗಿಯ ಅಧಿಕಾರಿ ಎ.ಆರ್.ಛಬ್ಬಿ ಅವರಿಗೆ ಮನವಿ ಸಲ್ಲಿಸಿದರು.
ಉತ್ತರ ಕರ್ನಾಟಕದ ಸುಪ್ರಸಿದ್ದ ದೇವಸ್ಥಾನವಾದ ಕಲ್ಲೊಳಿಯ ಹಣಮಂತ ದೇವರ ಜಾತ್ರೆಯು ಪ್ರತಿ ವರ್ಷದ ಪದ್ದತಿಯಂತೆ ಈ ವರ್ಷವೂ ಕಲ್ಲೋಳಿ ಪಟ್ಟಣದ ಶ್ರೀ ಹಣಮಂತ ದೇವರ ಜಾತ್ರಾ ಕಾರ್ತಿಕೋತ್ಸವವು. ಡಿ.೧೪ ರಿಂದ ೨೧ ವರೆಗೆ ಜರುಗುವ ಜಾತ್ರಾಮಹೋತ್ಸವದಲ್ಲಿ ಕರ್ನಾಟಕ ನಾಡಿನಾದ್ಯಂತ ಲಕ್ಷಾಂತರ ಜನರು ದೇವರ ದರ್ಶನಕ್ಕೆ ಬರುವರು ಹಾಗೂ ಮಹಾರಾಷ್ಟ್ರ ಹಾಗೂ ಆಂಧ್ರದಿಂದ ಸಾವಿರಾರು ಜನರು ದೇವರ ದರ್ಶನಕ್ಕೆ ಬರುವರು. ಆದ್ದರಿಂದ ದೇವರ ದರ್ಶನ ಪಡೆಯಲು ಬರುವ ಭಕ್ತಾದಿಗಳಿಗೆ ಬಸ್ಸಿನ ಕೊರತೆ ಆಗದಂತೆ ಸೂಕ್ತ ವ್ಯವಸ್ಥೆಯೋಂದಿಗೆ ಜಾತ್ರಾ ವಿಶೇಷ ಹೆಚ್ಚುವರಿ ಬಸ್ಸು ಬಿಡಬೇಕೆಂದು ಮನವಿ ಮುಖಾಂತರ ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ಜೈ ಹನುಮಾನ ಯುವಜನ ಸೇವಾ ಸಂಘದ ಅದ್ಯಕ್ಷ ಪರಶುರಾಮ ಇಮಡೆರ ಉಪಾಧ್ಯಕ್ಷ ಮಹಾಂತೇಶ ಕಡಲಗಿ, ರಾಜಪ್ಪಾ ಮಾವರಕರ, ಸಿದ್ದಪ್ಪಾ ಪೂಜೇರಿ, ಭೀಮಶಿ ಗೋಕಾಂವಿ, ಹನಮಂತ ತೋಟಗಿ, ಅನೀಲ ಖಾನಗೌಡ್ರ, ಸುರೇಶ ಕಲಾಲ ಮತ್ತಿತರರು ಉಪಸ್ಥಿತರಿದ್ದರು.