ಸಿಂದಗಿ; ಇಂಡಿ, ಮುದ್ದೇಬಿಹಾಳ, ಬ.ಬಾಗೇವಾಡಿ ಸೇರಿದಂತೆ ಹೋಬಳಿಗಳಿಗೂ ಸಹ ರೈಲು ಸಂಪರ್ಕ ಕಲ್ಪಿಸಲಾಗಿದೆ. ಆದರೆ ಜಿಲ್ಲೆಯ ಪ್ರಮುಖ ಪಟ್ಟಣವೆನಿಸಿರುವ ಸಿಂದಗಿ ನಗರಕ್ಕೆ ರೈಲು ಸಂಚಾರ ಇಲ್ಲದಿರುವುದು ಜಿಲ್ಲೆಯ ಮತ್ತು ಉತ್ತರ ಕರ್ನಾಟಕದ ಹಲವು ಜನ ಪ್ರತಿನಿಧಿಗಳು ಕೇಂದ್ರದಲ್ಲಿ ರೈಲ್ವೆ ಮಂತ್ರಿಯಾದರೂ ಯಾರೊಬ್ಬರೂ ಈ ವಿಷಯದ ಬಗ್ಗೆ ಗಂಭೀರತೆ ತೋರದೆ ದಿವ್ಯ ನಿರ್ಲಕ್ಷ್ಯ ವಹಿಸಿದರಿಂದ ಸಿಂದಗಿ ಪಟ್ಟಣ ರೈಲು ಸಂಚಾರ ಪಡೆದುಕೊಂಡಿಲ್ಲ. ಸ್ವಾತಂತ್ರ‍್ಯ ಪೂರ್ವದಲ್ಲಿ ಶೇಡಬಾಳ -ವಾಡಿ ರೈಲ್ವೆ ಯೋಜನೆ ಸರ್ವೇ ಕಾರ್ಯ ನಡೆದಿದ್ದು ಶೀಘ್ರವೇ ಮಂಜೂರಾತಿ ನೀಡುವಂತೆ ಮಾಜಿ ಶಾಸಕ ರಮೇಶ ಭೂಸನೂರ ಮನವಿ ಮಾಡಿಕೊಂಡಿದ್ದಾರೆ.
ನವದೆಹಲಿಯಲ್ಲಿ ಶೇಡಬಾಳ _ವಾಡಿ ರೈಲ್ವೆ ಯೋಜನೆ ಶೀಘ್ರವೇ ಮಂಜೂರಾತಿಗಾಗಿ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ ಸೋಮಣ್ಣ ಅವರಿಗೆ ಮನವಿ ಸಲ್ಲಿಸಿ ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿಯೇ ಸಿಂದಗಿ ವಾಣಿಜ್ಯ ಮತ್ತು ವ್ಯವಹಾರಿಕವಾಗಿ ಅತಿ ವೇಗವಾಗಿ ಬೆಳೆಯುತ್ತಿರುವ ಹಾಗೂ ಎಲ್ಲಾ ಕ್ಷೇತ್ರದಲ್ಲಿಯೂ ವಿಶಿಷ್ಟವಾದ ಸಾಧನೆಗೈಯುತ್ತಿರುವ ಪಟ್ಟಣವಾಗಿದೆ. ಇಲ್ಲಿನ ಜನರು ವಹಿವಾಟಿಗಾಗಿ ರಾಜಧಾನಿ ಬೆಂಗಳೂರು ಸೇರಿದಂತೆ ಹೊರ ರಾಜ್ಯಗಳಿಗೂ ತೆರಳಬೇಕಾದ ಅನಿವಾರ್ಯತೆ ಇದೆ. ಆದರೆ ಸಿಂದಗಿ ಪಟ್ಟಣಕ್ಕೆ ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ಇಲ್ಲಿನ ಜನರಿಗೆ ಇತರ ರಾಜ್ಯ, ಜಿಲ್ಲೆಗಳ ಜೊತೆಗೆ ವ್ಯವಹರಿಸಲು ತೊಂದರೆ ಉಂಟಾಗುತ್ತಿದೆ. ಆದ್ದರಿಂದ ಇನ್ನಾದರೂ ಸ್ವಾತಂತ್ರ ಪೂರ್ವದಿಂದಲೇ (೧೯೩೫) ಬೇಡಿಕೆಯಾಗಿರುವ ಶೇಡಬಾಳ ಮತ್ತು ವಾಡಿ ರೈಲು ಮಾರ್ಗ ಯೋಜನೆಯನ್ನು ಜಾರಿಗೊಳಿಸಬೇಕು. ಈ ಮಾರ್ಗವಾಗಿ ರೈಲು ಸಂಚರಿಸಿದರೆ ಸಿಂದಗಿ ಪಟ್ಟಣ ಸೇರಿ ಬೆಳಗಾವಿ, ವಿಜಯಪುರ, ಕಲಬುರಗಿ ಜಿಲ್ಲೆಯ ಜನರಿಗೆ ಅನುಕೂಲವಾಗಲಿದೆ. ಆದ್ದರಿಂದ ಮಾನ್ಯ ಕೇಂದ್ರ ರೈಲ್ವೆ ಮಂತ್ರಿಗಳು ಈ ಯೋಜನೆ ಜಾರಿಗೊಳಿಸಲು ಪ್ರಯತ್ನಿಸಬೇಕು. ಈ ಮೂಲಕ ಬಹು ವರ್ಷಗಳ ಬೇಡಿಕೆಯಾದ ಶೇಡಬಾಳ ಮತ್ತು ವಾಡಿ ರೈಲು ಸಂಚಾರ ಯೋಜನೆ ಈಡೇರಿಸುವಂತೆ ಒತ್ತಾಯಿಸಿದರು.
ಇದೆ ಸಂದರ್ಭದಲ್ಲಿ ಇಂಡಿ ರೇಲ್ವೆ ನಿಲ್ದಾಣದಲ್ಲಿ ಗದಗ ದಿಂದ ಮುಂಬಯಿಗೆ ಹೋಗುವ ರೇಲ್ವೆಯನ್ನು ಇಂಡಿ ರೇಲ್ವೆ ನಿಲ್ದಾಣದಲ್ಲಿ ನಿಲುಗಡೆ ಮಾಡುವಂತೆ ಮನವಿ ಪತ್ರ ಕೂಡಾ ಸಲ್ಲಿಸಲಾಯಿತು ಇದಕ್ಕೆ ಸ್ಪಂದಿಸಿದ ಸಚಿವರು ಆದಷ್ಟು ಬೇಗನೆ ಈ ಎರಡು ಕೆಲಸಗಳನ್ನು ಮಾಡುತ್ತೇವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ, ಬಾಳು ಮುಳಜಿ ಪ್ರಭು ಹೊಸಮನಿ ಹಾಜರಿದ್ದರು