ಸಿಂದಗಿ: ಫೇ. 19 ರಂದು ಮಲಘಾಣ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿಯಲ್ಲಿ ಉದ್ಯೋಗ ಖಾತ್ರಿ ಅಡಿಯಲ್ಲಿ ಮಾನವ ಕೂಲಿ ಕೆಲಸ ಕೊಡುವಂತೆ ಜಿಲ್ಲಾಧಿಕಾರಿಗಳಿಗೆ 4 ಮ.ಅ.ಅ ಗುಂಪುಗಳಿಂದ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಕುಂತಲಾ ಜಮಾದಾರ, ರೇಣುಕಾ ದೊಡಮನಿ, ನೀಲಮ್ಮ ಹರಿಜನ ಭಾಗಮ್ಮ ಮಾದರ್, ಸುಮಂಗಲ ತಳಕೇರಿ, ಸೀತಾಬಾಯಿ ಹರಿಜನ, ಯಲ್ಲವ್ವ ಬರಗಲ್ಲ ಅವರು ಮಾತನಾಡಿ, ಮಲಘಾಣ ಗ್ರಾಮ ಪಂಚಾಯತಿ ವಾಪ್ತಿಯಲ್ಲಿ ಮಲಘಾಣ, ಆಸಂಗಿಹಾಳ, ಮಂಗಳೂರು ಹಳ್ಳಿಗಳಲ್ಲಿ ಭೀಮಬಾಯಿ, ರಾಮಬಾಯಿ, ಮಹಾತ್ಮಾಗಾಂಧಿ, ಡಾ. ಬಿ.ಆರ್.ಅಂಬೆಡ್ಕರ್ ಒಟ್ಟು 4 ಉದ್ಯೋಗ ಖಾತ್ರಿ ಗುಂಪುಗಳಿದ್ದು ನರೇಗಾ ಯೋಜನೆಯಡಿಯಲ್ಲಿ ಕೂಲಿ ಕೆಲಸ ಮಾಡುತಿದ್ದರೆ 2021-2022 ಸಾಲಿನಲ್ಲಿ ಪ್ರತಿ ಗುಂಪಿಗೆ 2 ಎನ್.ಎಮ್.ಆರ್ 12 ದಿನ ಮಾತ್ರ ಕೆಲಸ ಕೊಟ್ಟಿದ್ದು 88 ದಿನಗಳು ಕೆಲಸ ಬಾಕಿ ಇದೆ ಕೆಲಸ ಸರಿಯಾಗಿ ಕೊಡದೆ ಇದ್ದ ಸಂಬಂಧ ದಿನಾಂಕ 4-9-2021 ರಂದು ತಾಲೂಕ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಹಾಗೂ ದಿನಾಂಕ 4-2-2022 ರಂದು ಜಿಲ್ಲಾ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಭೇಟಿಯಾಗಿ ಕೂಲಿ ಕೆಲಸಗಾರರು ಮನವಿ ಮಾಡಿಕೊಳ್ಳಲಾಗಿದೆ ಆದಾಗ್ಯೂ ಯಾವುದೇ ಪ್ರಯೋಜನವಾಗಿಲ್ಲ ಫೇ. 7 ರಂದು ಮಲಘಾಣ ಗ್ರಾಮ ಪಂಚಾಯತಿಗೆ ಬೀಗ ಹಾಕಿ ಪ್ರತಿಭಟನೆ ಮಾಡಲಾಗಿದೆ ಕೆಲಸ ಕೊಡುವುದಾಗಿ ಹೇಳಿದ್ದರು ಪಂಚಾಯತಿಗೆ 3 ಸಲ ಕರೆದು ಕೆಲಸ ಕೊಟ್ಟಿರುವದಿಲ್ಲ ಆದ ಕಾರಣ ಜಿಲ್ಲಾಧಿಕಾರಿಗಳು ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ ಕೊಡಲೇ ನಮಗೆ ನ್ಯಾಯ ದೊರಕಿಸಿಕೊಡಬೇಕು ಮತ್ತು 100 ದಿನ ಮಾನವ ಕೂಲಿ ಕೆಲಸ ಕೊಡಬೇಕು ಎಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಸೈಬಣ್ಣ ದೊಡಮನಿ, ಇಂದ್ರಿಬಾಯಿ ನಾಲ್ಕಮನ, ಕಾವೇರಿ ನಾಲ್ಕಮನ, ನೀಜಪ್ಪ ನಾಟೀಕಾರ, ಮಲ್ಲಮ್ಮ ನಾಟೀಕಾರ, ಸರಣಪ್ಪ ಬರಗಲ್, ಶರಣಪ್ಪ ನಾಟೀಕಾರ ಸೇರಿದಂತೆ ಅನೇಕರಿದ್ದರು.