ಸಿಂದಗಿ; ಸರ್ಕಾರಕ್ಕೆ ನಷ್ಟ ಮತ್ತು ವಂಚನೆ ಮಾಡುತ್ತಿರುವ ಸಿಂದಗಿ ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಮುದುಗೋಳಕರ ಅವರನ್ನು ಸೇವೆಯಿಂದ ಅಮಾನತು ಮಾಡುವಂತೆ ಆಗ್ರಹಿಸಿ ದಲಿತ ಸೇನೆ ಕಾರ್ಯಕರ್ತರು ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಗ್ರೇಡ್ 2 ತಹಶೀಲ್ದಾರ ಪ್ರಕಾಶ ಸಿಂದಗಿ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ನಗರಾಭಿವೃದ್ಧಿ ಕೋಶ ವಿಜಯಪುರ, ಉಪವಿಭಾಗಾಧಿಕಾರಿಗಳು ಇಂಡಿ ಅವರಿಗೆ ಮನವಿ ಸಲ್ಲಿಸಿದರು.
ದಲಿತ ಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ಎಮ್.ಎ.ಸಿಂದಗಿಕರ ಮಾತನಾಡಿ, ತೆರಿಗೆ ಎಂಬುದು ಸರ್ಕಾರ ಮತ್ತು ಪುರಸಭೆ ಆರ್ಥಿಕ ವ್ಯವಸ್ಥೆಯ ಒಂದು ಭಾಗವಾಗಿದೆ ಆದರೆ ತೆರಿಗೆ ವಸೂಲಿಯಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ.ಪಟ್ಟಣದಲ್ಲಿ ಅನೇಕ ಅನಧಿಕೃತ ಕಟ್ಟಡಗಳು ಮಂಗಲ ಕಾರ್ಯಾಲಯಗಳು, ಬಂಡವಾಳ ಶಾಹಿ ಮನೆಗಳು, ಲಾಡ್ಜಗಳು, ವಾಣಿಜ್ಯ ಮಳಿಗೆಗಳು ಅನಧಿಕೃತವಾಗಿ ನಿರ್ಮಾಣಗೊಂಡಿವೆ. ಎಂದು ಅನೇಕ ಬಾರಿ ಪುರಸಭೆ ಮುಖ್ಯಾಧಿಕಾರಿಗಳನ್ನು ಮೌಖಿಕವಾಗಿ ಹಾಗೂ ಲಿಖಿತ ರೂಪದಲ್ಲಿ ಮನವಿ ಪತ್ರಗಳನ್ನು ಸಲ್ಲಿಸಿದ್ದರು ಸಹ ಈವರೆಗು ಯಾವುದೇ ರೀತಿಯ ಕಾನೂನು ಕ್ರಮಗಳನ್ನು ಜರುಗಿಸಿರುವದಿಲ್ಲ. ಹಾಗಾಗಿ ಅಕ್ರಮ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ ಸಿಂದಗಿ ಪುರಸಭೆ ಅಧಿಕಾರಿಗಳ ಮೇಲೆ ಕರ್ನಾಟಕ ಪುರಸಭೆ ಕಾಯ್ದೆ 1964 ರ ಸೆಕ್ಷನ 187(ಬಿ) ಪ್ರಕಾರ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ತಮ್ಮ ಅಧಿಕಾರಾವಧಿ ಮತ್ತು ಅಧಿಕಾರ ವ್ಯಾಪ್ತಿಯಲ್ಲಿ ಅಕ್ರಮ ಕಟ್ಟಡ ನಿರ್ಮಾಣ ತಡೆಯಲು ವಿಫಲವಾದ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಕನಿಷ್ಠ 10 ಸಾವಿರ ರೂ ಅಥವಾ ಗರಿಷ್ಠ 25 ಸಾವಿರ ರೂಗಳವರೆಗೆ ದಂಡ ವಿಧಿಸಬೇಕು. ಹಾಗೂ ಅನಧಿಕೃತವಾಗಿ ಪುರಸಭೆ ಅನುಮತಿ ಇಲ್ಲದೇ ಕಟ್ಟಡವನ್ನು ನಿರ್ಮಾಣ ಮಾಡಿದವರ ಮೇಲೆ ಪುರಸಭೆ ಕಾಯ್ದೆ 1964 ಸೆಕ್ಷನ 188 ರ ಪ್ರಕಾರ ಸೂಕ್ತ ಕಾನೂನು ಕ್ರಮವನ್ನು ಜರುಗಿಸಿ ಸರ್ಕಾರಕ್ಕೆ ಆಗುತ್ತಿರುವ ನಷ್ಟವನ್ನು ತಡೆಯಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಾಲಕೃಷ್ಣ ಚಲವಾದಿ, ಜಿಲ್ಲಾ ಉಪಾಧ್ಯಕ್ಷ ಶ್ರೀನಾಥ ಹೊಸಮನಿ, ರಜತ ತಾಂಬೆ, ಶರಣಮ್ಮ ರಾಠೋಡ, ಜಾಫರ ಇನಾಮದಾರ, ಅಸ್ಫಾಕ ಮಕಾನದಾರ, ದತ್ತು ನಾಲ್ಕಮಾನ, ಮಿಲಂದ ಮಣೂರ, ದಸ್ತಗೀರ ಆಳಂದ, ಜಾವೀದ ಕರ್ಜಗಿ, ಕಾಂತಪ್ಪ ಶಿವಪೂರ ಸೇರಿದಂತೆ ಅನೇಕರಿದ್ದರು.